ಅನ್ನು ಕಪೂರ್ ಅಭಿನಯದ ‘ಹಮಾರೆ ಬಾರಹ್’ (Hamare Baarah) ಚಿತ್ರದ ಬಿಡುಗಡೆಗೆ ಸುಪ್ರೀಂ ಕೋರ್ಟ್ (Supreme Court) ಗುರುವಾರ ತಡೆಯಾಜ್ಞೆ ನೀಡಿದೆ.
ಚಿತ್ರವು ಇಸ್ಲಾಂ ಮತ್ತು ವಿವಾಹಿತ ಮುಸ್ಲಿಂ ಮಹಿಳೆಯರನ್ನು ಅವಹೇಳನಕಾರಿಯಾಗಿದೆ ಬಿಂಬಿಸಿದೆ ಎಂದು ಆರೋಪಿಸಿರುವ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ಬಾಂಬೆ ಹೈಕೋರ್ಟ್‌ಗೆ ಸುಪ್ರೀಂ ಸೂಚಿಸಿದೆ. ಇದನ್ನೂ ಓದಿ: ‘ರಾಖಾ’ ಚಿತ್ರಕ್ಕೆ ಚಾಲನೆ ನೀಡಿದ ಸಚಿವ ತಂಗಡಗಿ
- Advertisement
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ರಜಾಕಾಲದ ಪೀಠವು, ಶುಕ್ರವಾರ (ಜೂ.14) ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೆ ತಡೆ ನೀಡಿ ಆದೇಶ ಹೊರಡಿಸಿದೆ.
- Advertisement
ನಾವು ಬೆಳಿಗ್ಗೆ ಚಲನಚಿತ್ರದ ಟ್ರೇಲರ್ ಅನ್ನು ನೋಡಿದ್ದೇವೆ. ಟ್ರೇಲರ್‌ನಲ್ಲಿ ಎಲ್ಲಾ ಆಕ್ಷೇಪಾರ್ಹ ಸಂಭಾಷಣೆಗಳು ಇವೆ ಎಂದು ಪೀಠವು ತಿಳಿಸಿದೆ. ಹೈಕೋರ್ಟ್‌ನಲ್ಲಿ ಅರ್ಜಿ ಇತ್ಯರ್ಥವಾಗುವವರೆಗೆ, ಪ್ರಶ್ನಾರ್ಹ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಅರ್ಜಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ನಾವು ಹೈಕೋರ್ಟ್‌ಗೆ ತಿಳಿಸಲಾಗಿದೆ ಎಂದು ಪೀಠವು ಹೇಳಿದೆ. ಇದನ್ನೂ ಓದಿ: ದರ್ಶನ್ ಗೆ ನಾನ್ಯಾಕೆ ಟಾಂಗ್ ಕೊಡಲಿ: ಇಂದ್ರಜಿತ್ ಲಂಕೇಶ್
ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಪ್ರಮಾಣೀಕರಣದ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಚಿತ್ರದ ನಿರ್ಮಾಪಕ ವೀರೇಂದ್ರ ಭಗತ್ ಮಾತನಾಡಿ, ಸಿನಿಮಾವು ಮಹಿಳಾ ಸಬಲೀಕರಣ ಮತ್ತು ಜನಸಂಖ್ಯೆಯ ಜಾಗೃತಿಯ ಚಲನಚಿತ್ರವಾಗಿದೆ ಎಂದು ಸೆನ್ಸಾರ್ ಮಂಡಳಿ ಹೇಳಿದೆ. ಬಾಂಬೆ ಹೈಕೋರ್ಟ್‌ಗೆ ವರದಿಯನ್ನು ಸಲ್ಲಿಸಿದೆ. ಬಾಂಬೆ ಹೈಕೋರ್ಟ್ ನಿರ್ಧರಿಸಿದಂತೆ ಚಲನಚಿತ್ರ ಪ್ರದರ್ಶನವನ್ನು ನಿಲ್ಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ತಿಳಿಸಿದರು. ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಕ್ಷಿತ್, ರಾಜ್ ಬಿ ಶೆಟ್ಟಿ