ಭುವನೇಶ್ವರ್: 25 ವರ್ಷದ ಯುವತಿಯೊಬ್ಬರಿಗೆ ಬೇರೆ ಗುಂಪಿನ ರಕ್ತವನ್ನು ಹಾಕಿದ್ದು, ಪರಿಣಾಮ ಯುವತಿ ಆಸ್ಪತ್ರೆಯಲ್ಲೇ ಸಾವನ್ನಪ್ಪಿರುವ ಘಟನೆ ಒಡಿಶಾದ ಸುಂದರ್‍ಗಢ್ ಜಿಲ್ಲೆಯ ಆಸ್ಪತ್ರೆಯಲ್ಲಿ ನಡೆದಿದೆ.
ಕುಟ್ರಾ ಬ್ಲಾಕ್‍ನ ಬುಡಕಟ್ಟು ಗ್ರಾಮದ ನಿವಾಸಿ ಸರೋಜಿನಿ ಕಾಕು ಅವರನ್ನು ಗುರುವಾರ ಮಧ್ಯಾಹ್ನ ರೂರ್ಕೆಲಾ ಸರ್ಕಾರಿ ಆಸ್ಪತ್ರೆಗೆ(ಆರ್‌ಜಿಹೆಚ್) ದಾಖಲಿಸಲಾಗಿತ್ತು. ಆಗ ಸರೋಜಿನಿ ಅವರು ರಕ್ತಹೀನತೆಯಿಂದ ಬಳಲುತ್ತಿದ್ದು, ಆಕೆಗೆ ರಕ್ತ ವರ್ಗಾವಣೆ ಮಾಡಬೇಕಾಯಿತು. ಆದರೆ ವೈದ್ಯರು ನಿರ್ಲಕ್ಷ್ಯದಿಂದ ಸರೋಜಿನಿ ಅವರಿಗೆ ತಪ್ಪು ರಕ್ತ ನೀಡಲಾಗಿದ್ದು, ಪರಿಣಾಮ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ಸರೋಜಿನಿ ಸಂಬಂಧಿಯೊಬ್ಬರು ಈ ಕುರಿತು ಮಾತನಾಡಿದ್ದು, ಆಕೆಯ ರಕ್ತದ ಗುಂಪು ಒ ಪಾಸಿಟಿವ್. ಆದರೆ ವೈದ್ಯರು ಆಕೆಗೆ ಬಿ ಪಾಸಿಟಿವ್ ನೀಡಿದ್ದಾರೆ ಎಂದು ತಿಳಿಸಿ ಗೋಳಾಡಿದರು. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕಾಡುತ್ತಿದೆ ನಿಗೂಢ ವೈರಲ್ ಜ್ವರ
Advertisement
ಕುತ್ರಾ ಪೊಲೀಸ್ ಠಾಣೆ ಪೊಲೀಸ್ ಬಿ.ಕೆ.ಬಿಹಾರಿ ಈ ಕುರಿತು ಮಾತನಾಡಿದ್ದು, ಪ್ರಸ್ತುತ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಈ ಕುರಿತು ತನಿಖೆ ನಡೆಸಲು ವಿಶೇಷ ಸಮಿತಿಯನ್ನು ರಚಿಸಿದ್ದು, ಮೃತದೇಹವನ್ನು ಸಂರಕ್ಷಿಸಲಾಗಿದೆ. ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
Advertisement
ಆರ್‌ಜಿಹೆಚ್ ಸೂಪರಿಂಟೆಂಡೆಂಟ್ ಜಗದೀಶ್ಚಂದ್ರ ಬೆಹೆರಾ ಅವರು ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ ಎಂಬುದನ್ನು ನಿರಾಕರಿಸಿದ್ದು, ರಕ್ತವನ್ನು ಕ್ರಾಸ್-ಮ್ಯಾಚಿಂಗ್ ಮಾಡಿದ ನಂತರ ಈ ಕುರಿತು ಮಾಹಿತಿಯನ್ನು ತಿಳಿಸಲು ಸಾಧ್ಯವಾಗುತ್ತೆ. ಒಂದು ವೇಳೆ ವೈದ್ಯರು ತಪ್ಪಾಗಿ ರಕ್ತವನ್ನು ರೋಗಿಗೆ ಹಾಕಿದ್ದರೆ, ರೋಗಿಯು 10-15 ನಿಮಿಷಗಳಲ್ಲಿ ಸಾಯುತ್ತಿದ್ದರು. ಆದರೆ ಈ ಪ್ರಕರಣದಲ್ಲಿ ಆ ರೀತಿ ನಡೆದಿಲ್ಲ ಎಂದು ಅನುಮಾನ ವ್ಯಕ್ಯಪಡಿಸಿದರು. ಇದನ್ನೂ ಓದಿ: ಪ್ರವಾಸೋದ್ಯಮ ಕ್ಷೇತ್ರದ 3 ವಿಭಾಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಉತ್ತರಾಖಂಡ್