ದೇವರ ದಯೆಯಿಂದ ನಾವು ಕೋರಮಂಡಲ್ ಎಕ್ಸ್‌ಪ್ರೆಸ್ ಹತ್ತಲಿಲ್ಲ – ಬೆಂಗಳೂರಿಗೆ ಬಂದಿಳಿದ ವಾಲಿಬಾಲ್ ಕೋಚ್ ಪ್ರತಿಕ್ರಿಯೆ

Public TV
1 Min Read
Volleyball Players 1

320 X 50

ಚಿಕ್ಕಬಳ್ಳಾಪುರ: ದೇವರ ದಯೆಯಿಂದ ನಾವು ಅಪಘಾತಗೊಂಡ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲನ್ನು ಹತ್ತಲಿಲ್ಲ ಎಂದು ವಾಲಿಬಾಲ್ ಕೋಚ್ (Coach) ಮಮತಾ ಶೆಟ್ಟಿ ಹೇಳಿದ್ದಾರೆ.

VOLLEYBALL PLAYERS

ನಗರದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Kempegowda International Airport) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶ್ಚಿಮಬಂಗಾಳದಲ್ಲಿ ನಡೆದ ಚಾಂಪಿಯನ್‍ಶಿಪ್ ಮುಗಿಸಿ ಬೆಂಗಳೂರಿಗೆ ಆಗಮಿಸುತ್ತಿದ್ದೆವು. ಆದರೆ ಬಾಲಕಿಯರ ತಂಡಕ್ಕೆ ರಿಸರ್ವೇಷನ್ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಅಪಘಾತಕ್ಕೀಡಾದ ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿ ಚೆನ್ನೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬರುವ ತೀರ್ಮಾನ ಮಾಡಿದ್ದೆವು. ಆದರೆ ಕೊನೆ ಕ್ಷಣದಲ್ಲಿ ಎರಡು ತಂಡ ಒಂದೇ ರೈಲಿನಲ್ಲಿ ಹೋಗೋಣ, ಬೇರೆ ಬೇರೆ ರೈಲು ಬೇಡ ಎಂದು ನಿರ್ಧಾರ ಮಾಡಲಾಯಿತು. ಇದರಿಂದಾಗಿ ಕೋರಮಂಡಲ್ ಟ್ರೈನ್‍ನಲ್ಲಿ ನಾವು ಪ್ರಯಾಣ ಮಾಡಲಿಲ್ಲ. ಅದೃಷ್ಟವಶಾತ್ ನಾವೆಲ್ಲ ಬದುಕಿ ಬಂದಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ರೈಲು ಸಿಗದೆ ಪರದಾಡಿದ್ದ ವಾಲಿಬಾಲ್ ಕ್ರೀಡಾಪಟುಗಳು ವಿಮಾನದ ಮೂಲಕ ರಾಜ್ಯಕ್ಕೆ ಆಗಮನ

ಒಡಿಶಾದಲ್ಲಿ ರೈಲುಗಳ ನಡುವಿನ ಅಪಘಾತದ (Odisha Train Tragedy) ಬಳಿಕ ಆ ಮಾರ್ಗದ 58 ಕ್ಕೂ ಹೆಚ್ಚು ರೈಲನ್ನು ರದ್ದು ಮಾಡಲಾಗಿತ್ತು. ಅಲ್ಲದೆ 81 ರೈಲುಗಳನ್ನು ಮಾರ್ಗ ಬದಲಾವಣೆ ಮಾಡಲಾಗಿತ್ತು. ಇದರಿಂದ ಪಶ್ಚಿಮ ಬಂಗಾಳಕ್ಕೆ‌ (West Bengal) ತೆರಳಿದ್ದ ವಾಲಿಬಾಲ್ ಆಟಗಾರರ (Volleyball Players) ತಂಡ ವಾಪಾಸ್ ಆಗಲು ಪರದಾಡಿತ್ತು. ಬಳಿಕ ರಾಜ್ಯ ಸರ್ಕಾರ ಕ್ರೀಡಾಪಟುಗಳನ್ನು ಕರೆತರಲು ವಿಮಾನದ ವ್ಯವಸ್ಥೆ ಮಾಡಿತ್ತು. ಭಾನುವಾರ ಮುಂಜಾನೆ ಕ್ರೀಡಾಪಟುಗಳು ಬೆಂಗಳೂರಿಗೆ ತಲುಪಿದ್ದಾರೆ. ಇದನ್ನೂ ಓದಿ: ನಾವು ಸೇಫ್ ಆಗಿದ್ದೇವೆ; ಸುರಕ್ಷಿತವಾಗಿ ಸುಮೇದ್ ಸಿಖರ್ಜಿ ತಲುಪಿದ 110 ಕನ್ನಡಿಗರು

Share This Article