ಚಿಕ್ಕಬಳ್ಳಾಪುರ: ಒಡಿಶಾ ರೈಲು ದುರಂತ (Odisha Train Tragedy) ಪ್ರಕರಣದ ಪರಿಣಾಮದ ಹಿನ್ನೆಲೆ ಪಶ್ಚಿಮ ಬಂಗಾಳ, ಒಡಿಶಾ, ಕರ್ನಾಟಕ ರೈಲು ಮಾರ್ಗ ಸಂಚಾರ ರದ್ದಾಗಿದೆ. ಇದರಿಂದಾಗಿ ಪಶ್ಚಿಮ ಬಂಗಾಳದ (West Bengal) ಹೌರಾದಿಂದ ಬೆಂಗಳೂರಿಗೆ (Bengaluru) ಬರಲು ರೈಲು ಸಿಗದೆ ಪರದಾಡಿದ್ದ ಕ್ರೀಡಾಪಟುಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಸಹಾಯ ಹಸ್ತ ಚಾಚಿದೆ.
Advertisement
ರೈಲು ಸಂಚಾರ ರದ್ದಾದ ಹಿನ್ನೆಲೆ ಕರ್ನಾಟಕ ಸರ್ಕಾರ ವಿಮಾನದ ಮೂಲಕ ಕ್ರೀಡಾಪಟುಗಳನ್ನು ರಾಜ್ಯಕ್ಕೆ ಕರೆತಂದಿದೆ. ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಗಾಗಿ 16 ವರ್ಷದ ಒಳಗಿನ ಬಾಲಕರ ಹಾಗೂ ಬಾಲಕಿಯರ ತಂಡ ಸೇರಿದಂತೆ ಒಟ್ಟು 24 ಆಟಗಾರರು ಮತ್ತು 6 ಮಂದಿ ಕೋಚ್‌ಗಳು ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ ಬರಲು ರೈಲು ಸಿಗದ ಹಿನ್ನೆಲೆ ವಿಡಿಯೋ ಮೂಲಕ ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನಾವು ಸೇಫ್ ಆಗಿದ್ದೇವೆ; ಸುರಕ್ಷಿತವಾಗಿ ಸುಮೇದ್ ಸಿಖರ್ಜಿ ತಲುಪಿದ 110 ಕನ್ನಡಿಗರು
Advertisement
Advertisement
ಈ ವಿಡಿಯೋ ತಲುಪಿದ ತಕ್ಷಣ ಕಾರ್ಯಪ್ರವೃತ್ತರಾದ ಸಚಿವರು ಮತ್ತು ಅಧಿಕಾರಿಗಳು ಕ್ರೀಡಾಪಟುಗಳನ್ನು ಬೆಂಗಳೂರಿಗೆ ಕರೆತರಲು ವಿಮಾನದ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಸೂಕ್ತ ವಸತಿ ಮತ್ತು ಊಟದ ವ್ಯವಸ್ಥೆಯನ್ನೂ ಮಾಡಿದ್ದರು. ಇದೀಗ ಇಂಡಿಗೋ ವಿಮಾನದ ಮೂಲಕ ಕ್ರೀಡಾಪಟುಗಳು (Volleyball Players) ಮತ್ತು ಕೋಚ್‌ಗಳು (Coach) ಸುರಕ್ಷಿತವಾಗಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಮಾತನಾಡಿದ ಕೋಚ್‌ಗಳಾದ ಮಮತಾ ಶೆಟ್ಟಿ ಮತ್ತು ತೇಜಸ್ವಿನಿ, ದೇವರ ದಯೆಯಿಂದ ನಾವೂ ಸಹ ಬದುಕಿ ಬಂದಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂದೂ ನಡೆಯಲಿದೆ ಶೈಕ್ಷಣಿಕ ಮೇಳ ವಿದ್ಯಾಪೀಠ- ಮಿಸ್ ಮಾಡದೇ ಬನ್ನಿ
Advertisement