ಹಾವು ಕಚ್ಚಿಸಿ ಪತ್ನಿ, ಎರಡು ವರ್ಷದ ಮಗಳ ಹತ್ಯೆ- ಆರೋಪಿ ಅರೆಸ್ಟ್

Public TV
1 Min Read
ODISHA MAN SNAKE

ಭುವನೇಶ್ವರ್: ವಿಷಪೂರಿತ ಹಾವನ್ನು (Snake) ಹೆಂಡತಿ (Wife) ಮತ್ತು ಮಗಳು ಮಲಗಿದ್ದ ಕೋಣೆಗೆ ಬಿಟ್ಟು ಅವರನ್ನು ಕೊಲೆಗೈದಿದ್ದ ಆರೋಪಿಯನ್ನು ಒಡಿಶಾ (Odisha) ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೆ.ಗಣೇಶ್ (25) ಎಂದು ಗುರುತಿಸಲಾಗಿದೆ. ಆರೋಪಿ ಅಧೇಗಾಂವ್ ಗ್ರಾಮದ ತನ್ನ ಮನೆಯಲ್ಲಿ ಹೆಂಡತಿ ಬಸಂತಿ ಪತ್ರಾ (23) ಹಾಗೂ ತನ್ನ 2 ವರ್ಷದ ಮಗಳು ದೇಬಾಸ್ಮಿತಾ ಮಲಗಿದ್ದ ವೇಳೆ ಅವರನ್ನು ಕೊಲ್ಲುವ ಉದ್ದೇಶದಿಂದ ರೂಂ ಒಳಗೆ ಹಾವನ್ನು ಬಿಟ್ಟಿದ್ದ. ಬಳಿಕ ಆಕಸ್ಮಿಕವಾಗಿ ಹಾವು ಕಚ್ಚಿದೆ ಎಂಬಂತೆ ಬಿಂಬಿಸಿದ್ದ. ಇದನ್ನೂ ಓದಿ: ಡ್ರಗ್ಸ್‌ ಖರೀದಿಸಲು 74,000 ರೂ.ಗೆ ಹೆತ್ತ ಮಕ್ಕಳನ್ನೇ ಮಾರಾಟ ಮಾಡಿದ ಪೋಷಕರು – ಅಪ್ಪ-ಅಮ್ಮ ಅರೆಸ್ಟ್‌

ಈ ಸಂಬಂಧ ಮೃತ ಮಹಿಳೆಯ ಮಾವ ಅನುಮಾನ ವ್ಯಕ್ತಪಡಿಸಿ, ಪ್ರಕರಣ ದಾಖಲಿಸಿದ್ದರು. ಆರಂಭದಲ್ಲಿ ಇದು ಆಕಸ್ಮಿಕವಾಗಿ ಸಂಭವಿಸಿದೆ ಎಂದು ಪೊಲೀಸರು ಭಾವಿಸಿದ್ದರು. ಬಳಿಕ ತನಿಖೆ ನಡೆಸಿ ಸಾಕ್ಷ್ಯ ಕಲೆಹಾಕಿ ಘಟನೆ ನಡೆದ ಒಂದು ತಿಂಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅಕ್ಟೋಬರ್ 6 ರಂದು ಹಾವಾಡಿಗನಿಂದ, ಧಾರ್ಮಿಕ ಕಾರ್ಯಕ್ರಮಕ್ಕೆ ಎಂದು ಹಾವು ತಂದಿದ್ದ ಎಂದು ತಿಳಿದು ಬಂದಿದೆ. ಮೊದಲು ಆರೋಪಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದ. ಬಳಿಕ ತೀವ್ರ ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಹಾಗೂ ಆತನ ಪತ್ನಿ ನಡುವೆ ಕೌಟುಂಬಿಕ ಕಲಹ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ 2020ರಲ್ಲಿ ಕೇರಳದ ಕೊಲ್ಲಂನಲ್ಲಿ ಆಸ್ತಿಗಾಗಿ ವ್ಯಕ್ತಿಯೊಬ್ಬ ಪತ್ನಿಯನ್ನು ಇದೇ ಮಾದರಿಯಲ್ಲಿ ಕೊಲೆಗೈದು ಹಾವಿನ ದ್ವೇಷದ ಕಥೆ ಕಟ್ಟಿದ್ದ. ಬಳಿಕ ಪತಿ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಹಾವಾಡಿಗನನ್ನು ಕೇರಳ ಪೊಲೀಸರು ಬಂಧಿಸಿದ್ದರು. ಅಂಚಲ್ ನಿವಾಸಿ ಸೂರಜ್ (27) ಕೊಲೆಗೈದ ಪತಿ ಹಾಗೂ ಸುರೇಶ್ ಕೊಲೆಗೆ ಸಹಕರಿಸಿದ ಹಾವಾಡಿಗನಾಗಿದ್ದ. ಎಸ್.ಉತ್ತರ (25) ಕೊಲೆಯಾದ ಮಹಿಳೆ ಆಗಿದ್ದಳು. ಇದನ್ನೂ ಓದಿ: ಮಥುರಾದ ಪಟಾಕಿ ಮಳಿಗೆಯಲ್ಲಿ ಅಗ್ನಿ ಅವಘಡ- ಮೃತರ ಸಂಖ್ಯೆ 12ಕ್ಕೆ ಏರಿಕೆ

Share This Article