ಲಕ್ನೋ: ಮಥುರಾದಲ್ಲಿ (Mathura) ದೀಪಾವಳಿ ಹಬ್ಬಕ್ಕಾಗಿ ನಿರ್ಮಿಸಿದ್ದ ಪಟಾಕಿ ಅಂಗಡಿಗಳಿಗೆ ಬೆಂಕಿ ತಗುಲಿ (Fire Accident) ನಡೆದ ಅವಘಡದಲ್ಲಿ ಗಾಯಗೊಂಡಿದ್ದ ಅಪ್ರಾಪ್ತ ಸೇರಿ ಮತ್ತೋರ್ವ ವ್ಯಕ್ತಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಈ ಮೂಲಕ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಪಿಟಾ ನಾಗ್ಲಾ ಗ್ರಾಮದ ದೀಪಚಂದ್ (28) ಹಾಗೂ ನೌಜಿಲ್ ನಿವಾಸಿ ರಿಂಕು (17) ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಮೊದಲು ದೀಪಕ್‍ಚಂದ್‍ನನ್ನು ಆಗ್ರಾದ ಎಸ್‍ಎನ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಿಲ್ಲದೆ ಅವನನ್ನು ಮನೆಗೆ ಕರೆತಂದಿತ್ತು. ರಿಂಕು ಎಂಬವನನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸ್ಟ್ಯಾಂಡ್ ತೆಗೆಯದೇ ಬೈಕ್ ಚಲಾಯಿಸಿದ ವಿದ್ಯಾರ್ಥಿ ದುರ್ಮರಣ
Advertisement
ಇದಕ್ಕೂ ಮುನ್ನ ಸುಟ್ಟಗಾಯಗಳಿಂದ ಬಳಲುತ್ತಿದ್ದ 10 ಮಂದಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದರು. ಇನ್ನೂ ಇಬ್ಬರು ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ನ.12 ರಂದು ಮಥುರಾದ ರಾಯಾ ಪ್ರದೇಶದ ಗೋಪಾಲ್‍ಬಾಗ್‍ನಲ್ಲಿ ಈ ಅವಘಡ ಸಂಭವಿಸಿತ್ತು. ಘಟನೆಯಲ್ಲಿ 23 ಪಟಾಕಿ ಅಂಗಡಿಗಳ ಪೈಕಿ ಏಳು ಅಂಗಡಿಗಳು ಸುಟ್ಟು ಹೋಗಿದ್ದವು. ಅಲ್ಲದೇ ಘಟನೆಯಲ್ಲಿ 10 ಬೈಕ್‍ಗಳು ಬೆಂಕಿಗೆ ಆಹುತಿಯಾಗಿದ್ದವು. ಅವಘಡದಲ್ಲಿ ಒಟ್ಟು 14 ಮಂದಿಗೆ ಸುಟ್ಟ ಗಾಯಗಳಾಗಿದ್ದವು, ಅದರಲ್ಲಿ ಈಗ 12 ಜನ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಜಿಲ್ಲಾ ಮ್ಯಾಜಿಸ್ಟ್ರೇಟ್ ಶೈಲೇಂದ್ರ ಕುಮಾರ್ ಸಿಂಗ್ ಅವರು ಘಟನೆಯ ತನಿಖೆಗಾಗಿ ದ್ವಿಸದಸ್ಯ ಸಮಿತಿಯನ್ನು ರಚಿಸಿದ್ದಾರೆ. ಸಂತ್ರಸ್ತರ ಕುಟುಂಬದ ಸದಸ್ಯರಿಗೆ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಐಇಡಿ ಸ್ಫೋಟ- ಇಬ್ಬರು ಕಾರ್ಮಿಕರ ದುರ್ಮರಣ