ಭುವನೇಶ್ವರ: ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ (Odisha Assembly Election Results) ಇದೇ ಮೊದಲ ಬಾರಿಗೆ ಬಿಜೆಪಿ (BJP) ಐತಿಹಾಸಿಕ ಜಯ ಸಾಧಿಸಿ ಬಿಜೆಡಿ ಕೋಟೆಯನ್ನು ಛಿದ್ರಗೊಳಿಸಿದೆ.
ಎರಡೂವರೆ ದಶಕಗಳ ನಂತರ ಒಡಿಶಾದಲ್ಲಿ ಬಿಜೆಡಿ (BJD) ಪ್ರಾಬಲ್ಯ ಅಂತ್ಯಗೊಂಡಿದೆ. 2000 ರಿಂದ 2024ರವರೆಗೆ ಸತತ 24 ವರ್ಷಗಳ ಕಾಲ ಬಿಜು ಜನತಾದಳದ ನವೀನ್ ಪಟ್ನಾಯಕ್ ಅಧಿಕಾರದಲ್ಲಿದ್ದರು. ಇದೀಗ ಐದು ಬಾರಿಯ ಸಿಎಂ ನವೀನ್ ಪಟ್ನಾಯಕ್ ಅಧಿಕಾರ ಪರ್ವಕ್ಕೆ ತೆರೆ ಬಿದ್ದಿದೆ.
ಕಂಟಾಬಂಜ್‌ನಲ್ಲಿ ನವೀನ್ ಪಟ್ನಾಯಕ್ (Naveen Patnaik) ಸೋಲು ಅನುಭವಿಸಿದ್ದಾರೆ. ಬಿಜೆಪಿ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ. 2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿ 112 ಸ್ಥಾನಗಳನ್ನು ಪಡೆದಿತ್ತು. ಬಿಜೆಪಿ 23 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 9, ಸಿಪಿಐ (ಎಂ) ಒಂದು ಸ್ಥಾನದಲ್ಲಿ ಗೆಲುವು ಕಂಡಿತ್ತು. ಇದನ್ನೂ ಓದಿ: ಕೇರಳದಲ್ಲಿ ಮೊದಲ ಬಾರಿಗೆ ಅರಳಿದ ಕಮಲ – ಸುರೇಶ್ ಗೋಪಿಗೆ ಗೆಲುವು
ಒಡಿಶಾ ಅಸೆಂಬ್ಲಿ ಫಲಿತಾಂಶ (ಒಟ್ಟು 147 ಸ್ಥಾನಗಳು)
* ಬಿಜೆಪಿ- 80
* ಬಿಜೆಡಿ- 49
* ಕಾಂಗ್ರೆಸ್- 14
* ಪಕ್ಷೇತರ- 03 ಇದನ್ನೂ ಓದಿ: ವಾರಣಾಸಿಯಲ್ಲಿ ಮೋದಿಗೆ ಹ್ಯಾಟ್ರಿಕ್ ಜಯ – ಕಡಿಮೆಯಾಯ್ತು ಗೆಲುವಿನ ಅಂತರ
ಲೋಕಸಭಾದಲ್ಲೂ ಕಮಾಲ್:
21 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 19, ಬಿಜೆಡಿ 1, ಕಾಂಗ್ರೆಸ್ 1 ಸ್ಥಾನವನ್ನು ಗೆದ್ದುಕೊಂಡಿದೆ. 2019 ರ ಚುನಾವಣೆಯಲ್ಲಿ ಬಿಜೆಡಿ 12, ಬಿಜೆಪಿ 7, ಕಾಂಗ್ರೆಸ್ 1 ಸ್ಥಾನವನ್ನು ಗೆದ್ದುಕೊಂಡಿತ್ತು.