ಭುವನೇಶ್ವರ: ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರ ಬೆಂಗಾವಲು ಪಡೆ ವಾಹನದ ಮೇಲೆ ಮೊಟ್ಟೆಗಳನ್ನು ಎಸೆಯಲಾಗಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶ್ರೀಮಂದಿರ ಪರಿಕ್ರಮ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಹಿಂತಿರುಗುತ್ತಿರುವಾಗ ಪುರಿಯಲ್ಲಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರ ಬೆಂಗಾವಲು ಪಡೆ ವಾಹನದ ಮೇಲೆ ಮೊಟ್ಟೆಗಳನ್ನು ಎಸೆಯಲಾಯಿತು. ಪುರಿಯ ಆಸ್ಪತ್ರೆ ಛಕ್ ಬಳಿ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿಗಳ ಬೆಂಗಾವಲು ಪಡೆ ವಾಹನದ ಮೇಲೆ ಮೊಟ್ಟೆಗಳನ್ನು ಎಸೆದರು. ಅಷ್ಟೇಅಲ್ಲದೇ ಕಪ್ಪು ಬಾವುಟವನ್ನು ಬೀಸಿದರು ಎಂದು ಮೂಲಗಳು ತಿಳಿಸಿವೆ. ಕಾರ್ಯಕರ್ತರು ನವೀನ್ ಪಟ್ನಾಯಕ್ ಡೌನ್ ಡೌನ್ ಎಂದು ಘೋಷಣೆ ಕೂಗಿದರು ಮತ್ತು ಅವರ ಭೇಟಿಯನ್ನು ವಿರೋಧಿಸಿದರು. ಇದನ್ನೂ ಓದಿ: ನನಗೆ ಬರುವ ಸಂಬಳ ಸಾಕಾಗ್ತಿಲ್ಲ: ಮಾಯಣ್ಣ
Advertisement
MoS Home Captain Dibyashankar Mishra’s resignation protest escalates , as Opposition now target’s CM Naveen’s carcade
???? Eggs hurled at #Odisha CM Naveen Patnaik’s carcade in #Puri #MamitaMeher pic.twitter.com/z3G2hwRclp
— Suffian सूफ़ियान سفیان (@iamsuffian) November 24, 2021
Advertisement
ಮಮಿತಾ ಮೆಹರ್ ಹತ್ಯೆಯಲ್ಲಿ ಗೃಹ ಖಾತೆ ರಾಜ್ಯ ಸಚಿವೆ ದಿಬ್ಯಾ ಶಂಕರ್ ಮಿಶ್ರಾ ಅವರ ಕೈವಾಡವಿದೆ ಎಂಬ ಆರೋಪದ ಮೇಲೆ ಬಿಜೆಪಿ ಮತ್ತು ಕಾಂಗ್ರೆಸ್‍ನ ವಿರೋಧ ಪಕ್ಷದ ನಾಯಕರು ಮೊಟ್ಟೆಯಿಂದ ಹೊಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಾನು ಪ್ರಾಮಾಣಿಕ ಅಧಿಕಾರಿ, ತೆರಿಗೆ ಕಟ್ಟುತ್ತಿದ್ದೇನೆ: ಎಲ್.ಸಿ.ನಾಗರಾಜ್
Advertisement
Advertisement
ಜಗನ್ನಾಥ ದೇಗುಲದಲ್ಲಿ ನಡೆಯುತ್ತಿರುವ ಮೂರು ದಿನಗಳ ಮಹಾಯಜ್ಞದ ಕೊನೆಯ ದಿನದಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಮ್ಮುಖದಲ್ಲಿ ಶ್ರೋತ್ರಿಯ ಬ್ರಾಹ್ಮಣ ಸಮುದಾಯದ ಪುರೋಹಿತರು ಪಠಣ ಮಾಡುವ ಭಜನೆಗಳ ಮಧ್ಯೆ ಪೂರಿ ಗಜಪತಿ ದಿಬ್ಯಸಿಂಗ ದೇಬ್ ಅವರು ಬುಧವಾರ ಶ್ರೀಮಂದಿರ ಪರಿಕ್ರಮ ಯೋಜನೆಗೆ ಶಂಕುಸ್ಥಾಪನೆ ಮಾಡಿದರು. ಇದನ್ನೂ ಓದಿ: ತಾನು ನೆಟ್ಟ ಗಿಡದಲ್ಲಿ ಹಣ್ಣು ಕೀಳಲು ಮುಂದಾದ ಅತ್ತೆಯತ್ತ ಚಾಕು ಬಿಸಿದ ಸೋಸೆ