ಬೆಂಗಳೂರು: ಸದ್ಯ ರಾಜ್ಯದಲ್ಲಿ ಭಾರೀ ಸುದ್ದಿಯಲ್ಲಿರುವ ಸ್ಯಾಂಟ್ರೋ ರವಿ(Santro Ravi) ಸಂಬಂಧ ಒಂದೊಂದೇ ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ.
ಸ್ಯಾಂಟ್ರೋ ರವಿ ವಿಚಾರ ಸಾರ್ವಜನಿಕವಾಗಿ ಬೆಳಕಿಗೆ ಬರುವ ಮುನ್ನವೇ ಮೈಸೂರಿನ ಒಡನಾಡಿ ಸಂಸ್ಥೆ ರವಿಯ, ಅನೈತಿಕ ವ್ಯವಹಾರ ಗಳ ಬಗ್ಗೆ ಮಹತ್ವದ ಮಾಹಿತಿಗಳನ್ನು ಕಲೆಹಾಕಿತ್ತು. ಈ ಸಂಬಂಧ ಡಿಜಿ – ಐಜಿಪಿ ಪ್ರವೀಣ್ ಸೂದ್ (Praveen Sood) ಗೆ ಭೇಟಿಯಾಗಿ ನೇರವಾಗಿ ದೂರು ನೀಡಲು ಮುಂದಾಗಿತ್ತು.
Advertisement
Advertisement
ಈ ಸಂಬಂಧ ಹಲವು ಬಾರಿ ಭೇಟಿಗೆ ಅವಕಾಶ ಕೇಳಿ ಮೇಲ್ ಮಾಡಿದ್ರು, ಯಾವುದೇ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಡಿಜಿಯವರು ಫೋನ್ ಕರೆಗೂ ಸಿಕ್ಕಿರಲಿಲ್ಲ. ಭೇಟಿಗೆ ಅವಕಾಶ ಕೇಳಿ ಕಳೆದ ಜೂನ್ ನಲ್ಲೇ ಅನುಮತಿ ಕೇಳಿದ್ದ ಮೇಲ್ ವೊಂದು ವೈರಲ್ ಆಗ್ತಿದೆ. ಇದನ್ನೂ ಓದಿ: ಪತ್ನಿ ವಿರುದ್ಧ ಸುಳ್ಳು ಕೇಸ್ – ಸ್ಯಾಂಟ್ರೋ ರವಿಯ ಷಡ್ಯಂತ್ರಕ್ಕೆ ಇನ್ಸ್ಪೆಕ್ಟರ್ ಸಾಥ್
Advertisement
Advertisement
ಸ್ಯಾಂಟ್ರೋ ರವಿ ಮಾನವ ಕಳ್ಳಸಾಗಣೆ, ಅಕ್ರಮ ಪೊಲೀಸ್ ಅಧಿಕಾರಿಗಳ ವರ್ಗಾವಣೆ ದಂಧೆ, ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಒಡನಾಡಿ ಸಂಸ್ಥೆ ಮಾಹಿತಿ ಕಲೆಹಾಕಿತ್ತು. ಈ ಎಲ್ಲಾ ಮಾಹಿತಿಗಳ ಜೊತೆಗೆ ಸೂಕ್ತ ಸಾಕ್ಷಿಗಳನ್ನು ಕೂಡ ಒಡನಾಡಿ ಸಂಸ್ಥೆ ಕಲೆಹಾಕಿತ್ತು.
ಯಾವಾಗ ಸ್ಯಾಂಟ್ರೋ ರವಿ ವಿಚಾರ ದೊಡ್ಡ ಮಟ್ಟದಲ್ಲಿ ಬೆಳಕಿಗೆ ಬಂತೋ, ಈಗ ಆತನ ವಿರುದ್ಧ ಪೊಲೀಸ್ ಇಲಾಖೆ ಸಿರಿಯಸ್ ಆಗಿ ಹುಡುಕಾಟ ನಡೆಸುತ್ತಿದೆ. ಆದರೆ ಈ ಹಿಂದೆ ರವಿ ಸಂಬಂಧ ದೂರು ನೀಡಿದ್ರೆ ಯಾರು ಕೂಡ ಸಿರಿಯಸ್ ಆಗಿ ಪರಿಗಣಿಸದೇ ಇರೋದು ಬೇಸರದ ಸಂಗತಿ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k