ಚಿತ್ರದುರ್ಗ: ಕೋಟೆನಾಡಲ್ಲಿ ಮಹಿಳೆಯರು ಇನ್ನು ಮುಂದೆ ಯಾವುದೇ ಅಡ್ಡಿ ಆತಂಕ ಇಲ್ಲದೇ ನಿರ್ಭೀತಿಯಿಂದ ಓಡಾಡಬಹುದು. ಮಹಿಳೆಯರಿಗೆ ಕಾಟ ಕೋಡೋ ಪುಂಡರನ್ನು ಒದ್ದು ಒಳಗೆ ಹಾಕಲು ಓಬವ್ವ ಪಡೆ ರಚನೆಯಾಗಿದೆ.
ಮಹಿಳೆಯರ ರಕ್ಷಣೆಗಾಗಿ ಪೊಲೀಸ್ ಇಲಾಖೆ ಇಂತಹ ಒಂದು ವಿನೂತನ ಟೀಮ್ ರೆಡಿ ಮಾಡಿದೆ. ಪೋಲಿಗಳಿಗೆ ಹೇಗೆ ಪಾಠ ಕಲಿಸಬೇಕು ಎಂಬುದರ ಬಗ್ಗೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ. ಮಂಗಳವಾರ ಓಬವ್ವ ಪಡೆಗೆ ಚಾಲನೆ ನೀಡಲಾಯ್ತು. ಈ ವೇಳೆ ವಿದ್ಯಾರ್ಥಿನಿಯರು ತಮ್ಮನ್ನ ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಬಗ್ಗೆ ಮಹಿಳಾ ಪೊಲೀಸ್ ಸಿಬ್ಬಂದಿಯಿಂದ ಡೆಮೋ ತೋರಿಸಿಲಾಯಿತು.
ಓಬವ್ವ ಪಡೆಯಿಂದ ಮಹಿಳೆಯರಿಗೆ ರಕ್ಷಣೆ ಸಿಗುತ್ತದೆ. ಹಾಗಾಗಿ ಈ ಪಡೆಯನ್ನು ಜಾರಿಗೆ ತರಲಾಗಿದೆ. ಅವರಿಗೆ ಒಂದು ತಿಂಗಳು ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಜೋಶಿ ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ಪೂರ್ವ ವಲಯ ಐಜಿಪಿ ಶರತ್ ಚಂದ್ರ ಸೇರಿದಂತೆ ಡಿಸಿ ವಿಜಯಾ ಜೋತ್ಸ್ನಾ, ಸಿಇಓ ರವೀಂದ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರು ಆಗಮಿಸಿ ಉದ್ಘಾಟಿಸಿದ್ರು. ಇದರ ಜೊತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ಡೆಮೋ ತೋರಿಸಿಲಾಯಿತು.
ಒಟ್ಟಾರೆ ಮಹಿಳೆಯರನ್ನು ಚುಡಾಯಿಸಿ ಮಜಾ ಪಡೆಯುತ್ತಿದ್ದ ಕಾಮುಕರಿಗೆ ಇನ್ಮುಂದೆ ಓಬವ್ವ ಪಡೆ ಅವರ ಹೆಡೆಮುರಿ ಕಟ್ಟಿ ಬುದ್ದಿ ಕಲಿಸಲಿದ್ದಾರೆ. ಈ ಮೂಲಕ ಮಹಿಳೆಯರು ಯಾವುದೇ ಕಿರಿ ಕಿರಿ ಇಲ್ಲದೆ ಆರಾಮವಾಗಿ ಓಡಾಡಲು ಓಬವ್ವ ಪಡೆ ಯಾವುದೇ ರಕ್ಷಣೆಗೆ ಕ್ಷಣಾರ್ಧಲ್ಲಿ ಬರಲಿದೆ. ಅದಕ್ಕಾಗಿ ಪೊಲೀಸ್ ಇಲಾಖೆ ಈ ತಂಡ ರೆಡಿ ಮಾಡಿದ್ದು, 94808 03100 ನಂಬರ್ ಗೆ ಕಾಲ್ ಮಾಡಿದರೆ ತಕ್ಷಣ ಮಹಿಳೆಯರ ರಕ್ಷಣೆಗೆ ಈ ಪಡೆ ನಿಲ್ಲುತ್ತದೆ.