ತೊಳೆಯೋಕೆ, ಕುಡಿಯೋಕೆ ನೀರಿಲ್ಲ: ಓ ನಲ್ಲ ನೀರಿಲ್ಲ ಹಾಡು ವೈರಲ್

Public TV
1 Min Read
Vikas Wikipedia 2

ತ್ತೊಂದು ಬೇಸಿಗೆ ಬಂದಿದೆ. ಈ ಬಾರಿ ಬರುವಾಗ ಅದು ನೀರಿನ ಅಭಾವವನ್ನು ಹೊತ್ತು ತಂದಿದೆ. ರಾಜ್ಯಾದ್ಯಂತ ಜನರು ನೀರಿಲ್ಲದೇ ತತ್ತರಿಸಿ ಹೋಗಿದ್ದಾರೆ. ಸಾಕಷ್ಟು ಹಣ ಕೊಟ್ಟರೂ, ನೀರು ಸಿಗದಂತಾದ ಪರಿಸ್ಥಿತಿ ಕರ್ನಾಟಕದಲ್ಲಿ ಉದ್ಭವವಾಗಿದೆ. ಈ ಸ್ಥಿತಿಯನ್ನು ನೋಡಿರುವ ವಿಕಾಸ್ ವಿಕ್ಕಿಪೀಡಿಯಾ (Vikas Wikipedia) ಹೊಸದೊಂದು ಹಾಡು ರೆಡಿ ಮಾಡಿದ್ದಾರೆ.

Vikas Wikipedia 3

ಈ ಹಿಂದೆ ಏನಿಲ್ಲ ಏನಿಲ್ಲ ಹಾಡನ್ನು (Song) ತಮ್ಮದೇ ಆದ ಶೈಲಿಯಲ್ಲಿ ಕ್ರಿಯೇಟ್ ಮಾಡಿ ‘ರಾಹುಲ್‍’ನನ್ನು ಫೇಮಸ್ ಮಾಡಿದ್ದ ಮತ್ತು ನಾನು ನಂದಿನಿ ಹಾಡಿನ ಮೂಲಕ ಕೋಟಿ ಕೋಟಿ ಜನರನ್ನು ಸೆಳೆದಿದ್ದ ವಿಕಾಸ್, ‘ಏನಿಲ್ಲ ಏನಿಲ್ಲ’ ಹಾಡನ್ನೇ ‘ಓ ನಲ್ಲ ನೀರಿಲ್ಲ’ ಎಂದು ಸಾಹಿತ್ಯ ಬರೆದು ವಿಡಿಯೋವೊಂದನ್ನು ಮಾಡಿದ್ದಾರೆ. ಆ ವಿಡಿಯೋ ಕೂಡ ವೈರಲ್ ಆಗಿದೆ.

Vikas Wikipedia 1

ಈ ಹಾಡಿನಲ್ಲಿ ಓ ನಲ್ಲ ನೀರಿಲ್ಲ (Neerilla Neerilla) ಕುಡಿಯೋ ತೊಳಿಯೋಕೆ ನೀರಿಲ್ಲ.. ಸ್ನಾನಕ್ಕೆ ಬಟ್ಟೆಗೆ ನೀರಿಲ್ಲ ಎನ್ನುವ ಕ್ಯಾಚಿ ಸಾಹಿತ್ಯವು ಈ ಹಾಡಿನಲ್ಲಿದೆ. ವಿಕ್ಕಿ ಮತ್ತು ಅವನ ಗೆಳೆಯ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪು, ನಲ್ಲಿ ಹೀಗೆ ನೀರು ಬರುವ ಅಥವಾ ಸಂಗ್ರಹಿಸುವ ಸ್ಥಳಗಳಲ್ಲಿ ನೀರು ಇಲ್ಲ ಎನ್ನುವುದನ್ನು ಹಾಡಿನಲ್ಲಿ ತೋರಿಸಿದ್ದಾರೆ.

 

 

View this post on Instagram

 

A post shared by Vicky Pedia (@vickypedia_007)

ವಿಕಾಸ್ ಮಾಡಿರುವ ಹಾಡು ಮತ್ತು ಅವರ ಗೆಟಪ್ ಮತ್ತೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಖಾಲಿ ಕೊಡದ ಮುಂದೆ ಕೂತು, ನೀರಿನ ಬವಣೆಯನ್ನು ಹೇಳಿಕೊಂಡಿದ್ದಾರೆ ವಿಕಾಸ್.

Share This Article