ಮದುವೆಯಿಂದ ತಪ್ಪಿಸಿಕೊಳ್ಳೊಕೆ ಬಾಲಿವುಡ್ ನಟಿ ನುಶ್ರತ್ ಕೊಟ್ಟ ಟಿಪ್ಸ್

Public TV
1 Min Read
Nushrratt Bharuccha 4

ಬಿಟೌನ್‍ನಲ್ಲಿ ಛೋರಿ ಸಿನಿಮಾದ ಮೂಲಕ ಹೊಸ ಅಲೆ ಸೃಷ್ಟಿಸಿದ ನಟಿ ನುಶ್ರತ್ ಭರುಚಾ. ಇದೀಗ ಸನ್ನಿ ಕೌಶಲ್ ಅವರೊಂದಿಗೆ ತಮ್ಮ ಮುಂದಿನ ಪ್ರಾಜೆಕ್ಟ್ ಹರ್ಡಾಂಗ್ ಮೂಲಕ ಅಭಿಮಾನಿಗಳನ್ನು ರಂಜಿಸಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ನುಶ್ರತ್ ಭರುಚಾ ಅವರು ಮದುವೆ ಕುರಿತಂತೆ ಪ್ರಶ್ನೆಗಳನ್ನು ಕೇಳಿದಾಗ ಹೇಗೆ ನಿಭಾಯಿಸುತ್ತಾರೆ ಮತ್ತು ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ರಿವೀಲ್ ಮಾಡಿದ್ದಾರೆ.

Nushrratt Bharuccha

ಈ ಮುನ್ನ ನುಶ್ರತ್ ಅವರ ತಾಯಿ ಕೂಡ ತಮ್ಮ ಮಗಳು ಮದುವೆ ಬಗ್ಗೆ ಕೇಳುವ ಪ್ರಶ್ನೆಗಳಿಂದ ಹೇಗೆ ತಪ್ಪಿಸಿಕೊಳ್ಳುತ್ತಾಳೆ ಎಂದು ಹೇಳಿದ್ದರು. ಅದೇ ರೀತಿ ಸಂದರ್ಶನದಲ್ಲಿ ಮದುವೆ ವಿಚಾರವಾಗಿ ಮಾತನಾಡಿದ ನುಶ್ರತ್ ಅವರು, ನಾನು ಇಷ್ಟು ಮಾತ್ರ ಹೇಳಬಲ್ಲೆ, ಅಮ್ಮ ನೀವು ಹುಡುಕಿದ ಹುಡುಗನನ್ನು ನಾನು ಮದುವೆಯಾತ್ತೇನೆ ಎಂದು ಹೇಳಲಾರೆ. ಹುಡುಗನನ್ನು ಹುಡುಕಿ, ಆದರೆ, ನನ್ನ ಕಾಲಿಗೆ ನಾನೇ ಕೊಡಲಿಯಿಂದ ಹೊಡೆದುಕೊಳ್ಳಲಾರೆ’ ಎಂದಿದ್ದಾರೆ. ಇದನ್ನೂ ಓದಿ :  ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಫೋಟೋ ಹಂಚಿಕೊಂಡ ಬಿಗ್ ಬಿ ಅಮಿತಾಭ್

Nushrratt Bharuccha

ಮದುವೆ ವಿಚಾರವಾಗಿ ನುಶ್ರತ್ ಅವರು ತಮ್ಮ ಅಭಿಮಾನಿಗಳಿಗೆ, ಈ ವಿಚಾರವಾಗಿ ಜಗಳ ಆಡಬೇಡಿ. ನೀವು ಎಷ್ಟು ಜಗಳ ಆಡುತ್ತಿರೋ ಅಷ್ಟು ಒತ್ತಾಯಿಸುತ್ತಾರೆ ಮತ್ತು ನಿಮಗೆ ಇಷ್ಟವಿಲ್ಲದ್ದನ್ನು ಮಾಡಲು ಬಲವಂತಪಡಿಸುತ್ತಾರೆ ಎಂದು ಸಲಹೆ ನೀಡಿದ್ದಾರೆ. ಅಲ್ಲದೇ ತಮ್ಮ ಪೋಷಕರು ಆಯ್ಕೆ ಮಾಡಿದ ಹುಡುಗನನ್ನು ಭೇಟಿಯಾಗುತ್ತೇನೆ. ಆದರೆ ನಂತರ ಈ ವಿಚಾರವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎಂದು ನುಶ್ರತ್ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ : ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ

Nushrratt Bharuccha

ನುಶ್ರತ್ ಅವರು, ಪ್ಯಾರ್ ಕಾ ಪಂಚನಾಮಾ, ಸೋನು ಕೆ ಟಿಟು ಕಿ ಸ್ವೀಟಿ ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ನುಶ್ರತ್ ಅವರ ಕೈಯಲ್ಲಿ ಹರ್ದಂಗ್, ರಾಮ್ ಸೇತು ಸೇರಿದಂತೆ ಹಲವಾರು ಸಿನಿಮಾಗಳಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರೊಂದಿಗೆ ಸೆಲ್ಫಿ ಸಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *