ಬೆಂಗಳೂರು: ಕೊರೊನಾ ಶುರುವಾದಾಗಿನಿಂದ ನರ್ಸ್ ಗಳು ಹಗಲಿರುಳು ಎನ್ನದೇ ಜನರ ಜೀವ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಇಂತಹ ಕೊರೊನಾ ವಾರಿಯರ್ಸ್ ನರ್ಸ್ ಪತಿ ಲಾಕ್‍ಡೌನ್ ಹೊತ್ತಲ್ಲೇ ನಾಪತ್ತೆಯಾಗಿದ್ದಾನೆ. ಇದೀಗ ನರ್ಸ್ ನನಗೆ ನನ್ನ ಗಂಡ ಬೇಕು, ನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕುತ್ತಿದ್ದಾರೆ.
ದಾವಣಗೆರೆ ಮೂಲದ ನರ್ಸ್ ಶಾಂತ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಈಗ ಪತಿ ಸಿದ್ದರಾಜು ನಾಪತ್ತೆಯಾಗಿದ್ದಾನೆ. ಫೋನ್ ಮಾಡಿದರೆ ಸ್ವಿಚ್ ಆಫ್ ಬರುತ್ತಿದೆ. ಹೀಗಾಗಿ ನಾಪತ್ತೆ ಆಗಿರುವ ಗಂಡ ಬೇರೆ ಮದುವೆ ಆಗಿರಬಹುದು ಎಂದು ನರ್ಸ್ ಕಣ್ಣೀರು ಹಾಕುತ್ತಿದ್ದಾರೆ.
Advertisement
Advertisement
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನರ್ಸ್, ನನ್ನ ಪತಿ ದಾವಣಗೆರೆಯ ಕುರುಡಿಯವರು. ಮಗುವನ್ನು ನೋಡಿಕೊಂಡು ದಾವಣಗೆರೆಗೆ ಹೋಗಿ ಬಂದು ಮಾಡುತ್ತಿದ್ದ. ಲಾಕ್‍ಡೌನ್‍ನಿಂದ ‘ಡೇ ಕೇರ್’ ಮುಚ್ಚಿದೆ. ಆದರೆ ಕೊರೊನಾ ಇರುವುದರಿಂದ ನಾನು ಡ್ಯೂಟಿ ಮಾಡಲೇಬೇಕು. ಇಲ್ಲಿ 5 ತಿಂಗಳಿಂದ ಬಾಡಿಗೆ ಕಟ್ಟಿಲ್ಲ. ಊರಲ್ಲಿ ಕೆಲಸ ಇದೆ ಬರುತ್ತೀನಿ ಎಂದು ಹೋದವನು ಒಂದು ತಿಂಗಳಾದರೂ ಬಂದಿಲ್ಲ. ಫೋನ್ ಸ್ವಿಚ್ ಆಫ್ ಬೇರೆ ಮಾಡಿಕೊಂಡಿದ್ದಾನೆ ಎಂದು ನೋವಿನಿಂದ ಹೇಳಿದರು.
Advertisement
ಈಗ ಬೇರೆ ಯಾರನ್ನೋ ಮನೆಯಲ್ಲಿ ಕರೆದುಕೊಂಡು ಬಂದು ಇರಿಸಿಕೊಂಡಿದ್ದಾನಂತೆ. ನನಗೆ ಕುಟುಂಬದವರಿಂದ ಯಾವುದೇ ರೀತಿಯ ಬೆಂಬಲ ಇಲ್ಲ. ಮಗುವನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ನನಗೆ ಮುಂದೆ ಏನು ಮಾಡಬೇಕು ಎಂದು ಕೂಡ ಗೊತ್ತಿಲ್ಲ. ದಯವಿಟ್ಟು ನನ್ನ ಪತಿಯ ಬಳಿ ಕಳುಹಿಸಿಕೊಡಿ ಎಂದು ನರ್ಸ್ ಕಣ್ಣೀರು ಹಾಕಿದರು.
Advertisement
ನನ್ನ ಮಗುವಿಗೆ ತಂದೆ ಬೇಕು. ಪ್ರತಿದಿನ ಅಪ್ಪ ಎಲ್ಲಿ ಎಂದು ಮಗು ಕೇಳುತ್ತದೆ. ದಯವಿಟ್ಟು ಪೊಲೀಸರು ನಮಗೆ ಸಹಾಯ ಮಾಡಿ. ನನ್ನ ಮತ್ತು ಮಗುವನ್ನು ಪತಿಯ ಬಳಿ ಕಳುಹಿಸಿಕೊಡಿ. ಇಲ್ಲವಾದರೆ ನಾನು ಮತ್ತು ನನ್ನ ಮಗು ಏನಾದರೂ ಮಾಡಿಕೊಂಡು ಸಾಯುತ್ತೇವೆ. ಇಲ್ಲಿ ನನ್ನ ಮಗುವನ್ನು ನೋಡಿಕೊಳ್ಳುವವರು ಇಲ್ಲ. ನಾನು ಕೊರೊನಾ ಡ್ಯೂಟಿ ಮಾಡಲಾ, ಪತಿಯನ್ನು ಹುಡುಕಲಾ, ನನಗೆ ನ್ಯಾಯ ಬೇಕು ಎಂದು ಮನವಿ ಮಾಡಿಕೊಂಡರು.
ದಾವಣಗೆರೆಯಲ್ಲಿ ಪರಿಯಚ ಇರುವವರಿಗೆ ಫೋನ್ ಮಾಡಿದ್ದೆ. ಆಗ ಪತಿ ಯಾರನ್ನೋ ಕರೆದುಕೊಂಡು ಬಂದಿದ್ದಾನೆ ಎಂಬುದು ಗೊತ್ತಾಗಿದೆ. ನಾನು ಪಾಸ್ ವ್ಯವಸ್ಥೆ ಮಾಡಿಸುತ್ತೀನಿ ಬಾ ಎಂದು ಫೋನ್ ಮಾಡಿ ಹೇಳಿದ್ದೆ. ಆದರೆ ಮತ್ತೆ ಫೋನ್ ಮಾಡಿದರೆ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ನನ್ನ ಮದುವೆಯಾದ ಮೇಲೆ ಬೇರೊಬ್ಬರ ಜೊತೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದ. ನಂತರ ನಾನು ಆ ಹುಡುಗಿಗೆ ನಮ್ಮ ಮದುವೆ ವಿಚಾರ ಹೇಳಿದೆ. ಬಳಿಕ ಮದುವೆ ಕಾನ್ಸಲ್ ಆಗಿತ್ತು. ಅಂದಿನಿಂದ ಮತ್ತೆ ನನ್ನ ಜೊತೆ ಚೆನ್ನಾಗಿದ್ದ. ಈಗ ಮತ್ತೆ ನನ್ನ ಮತ್ತು ಮಗುವನ್ನು ಬಿಟ್ಟು ಹೋಗಿದ್ದಾನೆ ಎಂದು ಕಣ್ಣೀರು ಹಾಕಿದರು.