ಬಳ್ಳಾರಿ: ನೈಟ್ ಶಿಫ್ಟ್ ಡ್ಯೂಟಿ ಬೇಸತ್ತು ನರ್ಸ್ ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಜಿಲ್ಲೆಯ ವಿಮ್ಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ರತ್ನಮ್ಮ ಅವರಿಗೆ ನರ್ಸಿಂಗ್ ಸೂಪರಿಟೆಂಡ್ ಪದೇ ಪದೇ ರಾತ್ರಿ ಪಾಳಯದ ಡ್ಯೂಟಿ ಹಾಕುತ್ತಿದ್ದರು. ಅಲ್ಲದೇ ನರ್ಸಿಂಗ್ ಸೂಪರಿಂಟೆಂಡೆಂಟ್ ಸಂಪತ್ ನರ್ಸ್ ರತ್ನಮ್ಮಗೆ ಡ್ಯೂಟಿ ವಿಚಾರದಲ್ಲಿ ಕಿರುಕುಳ ನೀಡುತ್ತಿದ್ದ. ಇದರಿಂದ ಮನನೊಂದು ರತ್ನಮ್ಮ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
Advertisement
Advertisement
ಇಂದು ಮುಂಜಾನೆ ವಿಮ್ಸ್ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದಾಗಲೇ ನರ್ಸ್ ರತ್ನಮ್ಮ ವಿಷ ಸೇವಿಸಿದ್ದಾರೆ. ಕೂಡಲೇ ಸಹ ಸಿಬ್ಬಂದಿಗಳು ರತ್ನಮ್ಮಗೆ ಚಿಕಿತ್ಸೆ ನೀಡಿದ್ದಾರೆ. ಅಲ್ಲದೇ ರಾತ್ರಿ ಪಾಳಯದ ವಿಷಯ ಬರೆಯುತ್ತಿದ್ದಂತೆ ನರ್ಸ್ ರತ್ಮಮ್ಮ ಹಾಗೂ ಸೂಪರಿಂಟೆಂಡೆಂಟ್ ಇಬ್ಬರು ಪರಸ್ಪರ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಸಂಪತ್ ಹಾಗೂ ರತ್ನಮ್ಮ ಇಬ್ಬರು ಎಂಎಲ್‍ಸಿ(ಎಲ್ಲ ಆಸ್ಪತ್ರೆಗಳಲ್ಲೂ ಅಪಘಾತ ಮತ್ತಿತರ ಕಾನೂನು ಅಡಿ ಬರುವ ವೈದ್ಯಕೀಯ ಪ್ರಕರಣ) ಮಾಡಿಸಿಕೊಂಡು ದೂರು ಪ್ರತಿದೂರು ದಾಖಲಿಸಲು ಮುಂದಾಗಿದ್ದಾರೆ. ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ವಿಮ್ಸ್ ನಿರ್ದೇಶಕರು ಇಬ್ಬರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv