– H1N1 ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ
ಬೆಂಗಳೂರು: ಡೇಂಜರ್ ಡೇಂಜರ್ H1N1 ಡೇಂಜರ್. ರಾಜ್ಯದಲ್ಲಿ H1N1 (Swine Flu ಅಥವಾ ಹಂದಿ ಜ್ವರ) ಕೇಸ್ ಏರಿಕೆ ಆಗ್ತಿದೆ. ಈ ವರ್ಷದಲ್ಲೇ ಬರೋಬ್ಬರಿ 4,125 ಕೇಸ್ ದಾಖಲಾಗಿದೆ. ಹೆಚ್1ಎನ್1 ನಿಯಂತ್ರಣಕ್ಕೆ ಮಾರ್ಗಸೂಚಿಯನ್ನ ಆರೋಗ್ಯ ಇಲಾಖೆ (Health Department) ಬಿಡುಗಡೆ ಮಾಡಿದೆ.
ದಿನೇ ದಿನೇ ಪ್ರಕರಣಗಳ ಸಂಖ್ಯೆ ಏರಿಕೆ ಆಗ್ತಿದ್ದು, ಜನವರಿಯಿಂದ ಆಗಸ್ಟ್ ವರೆಗೆ ಅಂದ್ರೆ 8 ತಿಂಗಳಿಗೆ 4,125 ಕೇಸ್ ದಾಖಲಾಗಿದೆ. ಇನ್ನೂ ವರ್ಷಾಂತ್ಯದ ವೇಳೆಗೆ ಎಷ್ಟು ಕೇಸ್ ದಾಖಲಾಗಬಹುದು ಅನ್ನೋದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದ ಒಟ್ಟು ಕೇಸ್‌ಗಳಲ್ಲಿ ಬೆಂಗಳೂರಿನಲ್ಲಿ (Bengaluru) ಅರ್ಧ ಕೇಸ್ ಗಳು ದಾಖಲಾಗಿವೆ. ಬೆಂಗಳೂರು ಒಂದರಲ್ಲೇ 2033 ಕೇಸ್ ದಾಖಲಾಗಿವೆ.
ಇನ್ನು ಬೆಂಗಳೂರು ಸೇರಿದಂತೆ ರಾಜ್ಯದ 15 ಜಿಲ್ಲೆಗಳಲ್ಲಿ H1N1 ಕೇಸ್ ಆತಂಕಕಾರಿ ಅಗಿದೆ. 15 ಜಿಲ್ಲೆಗಳಲ್ಲಿ ಕೇಸ್ ಏರಿಕೆ ಅಗ್ತಿದೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.

ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?
1. ಬೆಂಗಳೂರು ಜಿಬಿಎ – 2033 ಕೇಸ್
2. ಬೆಂಗಳೂರು ನಗರ – 982 ಕೇಸ್
3. ಮೈಸೂರು – 184 ಕೇಸ್
4. ಉಡುಪಿ – 293 ಕೇಸ್
5. ದಕ್ಷಿಣ ಕನ್ನಡ – 87 ಕೇಸ್
6. ಬಳ್ಳಾರಿ – 51 ಕೇಸ್
7. ಬೆಳಗಾವಿ – 45 ಕೇಸ್
8. ಮಂಡ್ಯ – 31 ಕೇಸ್
9. ಹಾವೇರಿ – 26 ಕೇಸ್
10. ಬೆಂಗಳೂರು ಗ್ರಾಮಾಂತರ – 26 ಕೇಸ್
11. ಬೆಂಗಳೂರು ದಕ್ಷಿಣ – 26 ಕೇಸ್
12. ಚಾಮರಾಜ ನಗರ – 20 ಕೇಸ್
13. ಶಿವಮೊಗ್ಗ – 91 ಕೇಸ್
14. ಉತ್ತರ ಕನ್ನಡ – 41 ಕೇಸ್
15. ದಾವಣಗೆರೆ – 23 ಕೇಸ್
ಇನ್ನೂ H1N1 ನಿಯಂತ್ರಣಕ್ಕೆ ಮಾರ್ಗಸೂಚಿ ಕೂಡ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಏನು ಮಾರ್ಗಸೂಚಿ, ಜನ ಏನು ಮಾಡಬೇಕು ಅಂತಾ ನೋಡೋದಾದ್ರೆ…

H1N1 ನಿಯಂತ್ರಣಕ್ಕೆ ಏನು ಮಾರ್ಗಸೂಚಿ ?
1. H1N1 ಕೇಸ್ ಇದ್ದರೆ ಮನೆಯಲ್ಲಿ ಐಸೂಲೇಟ್ ಆಗಬೇಕು
2. ಮಾಸ್ಕ್ ಹಾಕಿಕೊಳ್ಳಬೇಕು
3. ಸೋಪ್ ಮತ್ತು ಸ್ಯಾನಿಟೈಸರ್‌ನಿಂದ ಕೈ ತೊಳೆಯಬೇಕು
3. ಬಿಸಿ ನೀರು ಸೇವನೆ ಮಾಡಬೇಕು
4. ಮೂಗು, ಕಣ್ಣಿಗೆ ಕೈ ಟಚ್ ಮಾಡಿಕೊಳ್ಳಬಾರದು
5. ಸ್ವಯಂ ಮೆಡಿಕೇಷನ್ ಮಾಡಿಕೊಳ್ಳಬೇಡಿ
6. ರೋಗ ಲಕ್ಷಣ ಇದ್ದರೆ ಶೇಕ್ ಹ್ಯಾಂಡ್ ಮಾಡಬೇಡಿ
7. ಸಾರ್ವಜನಿಕರ ಗುಂಪುಗಳಲ್ಲಿ ಸೇರಬಾರದು
8. ಕರವಸ್ತ್ರ ಬಳಸಿ.

