ಬೆಂಗಳೂರು: ಗಂಧದಗುಡಿಯ ಕುಡಿ ಪುನೀತ್ ರಾಜ್‍ಕುಮಾರ್ ಗೆ ಸ್ಯಾಂಡಲ್‍ವುಡ್ ಬೃಹತ್ ನುಡಿ ನಮನ-ಗೀತ ನಮನ ಸಲ್ಲಿಸಲು ಸಿದ್ಧತೆ ನಡೆಸ್ತಿದೆ.
ನವೆಂಬರ್ 16ರಂದು ಅರಮನೆ ಮೈದಾನದ ಒಳಾಂಗಣ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ಮಾತಾಡಿ, ಸಿಎಂ ಬಹಳ ಖುಷಿಯಿಂದ ಒಪ್ಪಿಕೊಂಡಿದ್ದಾರೆ ಅಂದ್ರು. ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್ ಪ್ರತಿಕ್ರಿಯಿಸಿ, ಪುನೀತ್ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ಚಿತ್ರರಂಗಕ್ಕೆ ಇಲ್ಲ. ಇದನ್ನೂ ಓದಿ: ಪುನೀತ್ ಸಾವಿನ ರಹಸ್ಯ ಒಂದೊಂದೇ ಬಯಲು!
ಕಾರ್ಯಕ್ರಮಕ್ಕೆ ಶಿವಣ್ಣ ಒಪ್ಪಿದ್ದಾರೆ. ರಾಜ್ಯದ ಗಣ್ಯರು, ಚಿತ್ರರಂಗದ ಕುಟುಂಬ, ಆಂಧ್ರ, ತಮಿಳುನಾಡು ಸೇರಿದಂತೆ 20 ಲಕ್ಷ ಜನ ಬರುವ ಸಾಧ್ಯತೆ ಇದೆ. ಗುರುಕಿರಣ್ ಸಂಗೀತ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದಾರೆ. ನಾಗೇಂದ್ರ ಪ್ರಸಾದ್ ವಿಶೇಷ ಹಾಡನ್ನು ಬರೆದಿದ್ದಾರೆ. ಸಾರ್ವಜನಿಕರು ಕಾರ್ಯಕ್ರಮವನ್ನು ಟಿವಿ ಮೂಲಕ ನೋಡಿ ಸಹಕರಿಸಬೇಕು ಅಂತ ಮನವಿ ಮಾಡಿದ್ರು. ಇದನ್ನೂ ಓದಿ: ಎತ್ತುಗಳ ಜೊತೆಗೆ ಬಂದ ಅಭಿಮಾನಿಗಳನ್ನು ಭೇಟಿ ಮಾಡಿದ ಶಿವಣ್ಣ, ರಾಘಣ್ಣ