BollywoodCinemaCrimeLatestMain Post

ನಗ್ನ ಫೋಟೋ ವಿವಾದ: ಕರ್ನಾಟಕದ ಅಳಿಯ, ನಟ ರಣವೀರ್ ಸಿಂಗ್‌ಗೆ ಸಮನ್ಸ್ ಜಾರಿ

ರ್ನಾಟಕದ ಅಳಿಯ, ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ ಈ ಹಿಂದೆ ನಗ್ನ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಈ ಫೋಟೋಗಳು ಸಖತ್ ವೈರಲ್ ಆಗಿದ್ದವು. ರಣವೀರ್ ಸಿಂಗ್ ಅವರೇ ಈ ರೀತಿ ಫೋಟೋಶೂಟ್ ಮಾಡಿಸಿಕೊಂಡಿರುವಾಗ, ನಾವು ಏಕೆ ಹಾಗೆ ಮಾಡಬಾರದು ಎಂದು ಹಲವರು ಇದೇ ದಾರಿಯಲ್ಲೇ ನಡೆದರು. ಹಾಗಾಗಿ ರಣವೀರ್ ಸಮಾಜದ ಸ್ವಾಸ್ತ್ಯ ಹಾಳು ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಅವರ ಮೇಲೆ ದೂರು ದಾಖಲಿಸಲಾಯಿತು.

ರಣವೀರ್ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನನ್ವಯ ಮುಂಬೈ ಪೊಲೀಸರು ರಣವೀರ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ರಣವೀರ್ ಅವರ ಆಪ್ತರ ಪ್ರಕಾರ, ಅವರು ಮುಂಬೈನಿಂದ ದೂರವಿದ್ದು, ಆಗಸ್ಟ್ 16ರ ನಂತರ ವಾಪಸ್ಸಾಗಲಿದ್ದಾರಂತೆ. ಆನಂತರವಷ್ಟೇ ತನಿಖಾಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ ಎನ್ನುವ ಮಾಹಿತಿ ಇದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಟ್ರೈಯಾಂಗಲ್‌ ಲವ್ ಸ್ಟೋರಿ: ರಾಕೇಶ್ ಅಡಿಗ ಪ್ರೇಮ ಪುರಾಣ

ಮುಂಬೈ ಮೂಲದ ಸ್ವಯಂ ಸೇವಾ ಸಂಸ್ಥೆಯೊಂದು ಚೆಂಬೂರು ಪೊಲೀಸ್ ಠಾಣೆಯಲ್ಲಿ ಜುಲೈ 26 ರಂದು ದೂರು ನೀಡಿ, ಎಫ್‍.ಐ.ಆರ್ ದಾಖಲಿಸಿದ್ದರು. ಇದು ಮಹಿಳೆಯರನ್ನು ಅಪಮಾನ ಮಾಡುವ ಉದ್ದೇಶದಿಂದ ಆಗಿರುವ ಫೋಟೋ ಶೂಟ್ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಇವೆಲ್ಲವನ್ನೂ ಪರಿಗಣಿಸಿ, ರಣವೀರ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

Live Tv

Leave a Reply

Your email address will not be published.

Back to top button