ಬೆಂಗಳೂರು: ವಾಹನ ಸವಾರರೇ ರಸ್ತೆ ಮೇಲೆ ಸಂಚಾರ ಮಾಡುವಾಗ ಹುಷಾರ್. ಇಷ್ಟು ದಿನ ಗುಂಡಿಗಳಿಂದ ಬೇಸತ್ತಿದ್ದ ಜನ, ಇದೀಗ ಮರ (Tree) ದ ಕೊಂಬೆಗಳಿಂದ ಜೀವ ಉಳಿಸಿಕೊಳ್ಳಲು ಕಸರತ್ತು ನಡೆಸ್ತಿದ್ದಾರೆ.
Advertisement
ಹೌದು.. ನಗರದಲ್ಲಿ ಒಣಗಿದ ಮರಗಳಿಂದಲೇ ಜೀವಕ್ಕೆ ಕುತ್ತು ಬರಬಹುದು. ಇತ್ತಿಚೇಗೆ ಒಣಗಿದ ಮರದ ಕೊಂಬೆಗಳು, ಕಾರು, ಬೈಕ್, ಪಾದಾಚಾರಿಗಳ ತಲೆ ಮೇಲೆ ಬೀಳುವ ಪ್ರಕರಣಗಳು ಬೆಳಕಿಗೆ ಬರ್ತಿವೆ. ಕಳೆದ ಒಂದು ವಾರದ ಹಿಂದೆ ಬಸವೇಶ್ವರ ನಗರ (Basaveshwara Nagar) ದಲ್ಲಿ ವ್ಯಕ್ತಿಯೊಬ್ಬರು ಬೈಕ್ ಮೇಲೆ ಹೋಗುವಾಗ, ಮರದ ಕೊಂಬೆಯೊಂದು ಬೈಕ್ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಶಾರುಖ್ ಖಾನ್ ಜೊತೆ ಸಿನಿಮಾ ಮಾಡ್ತಿಲ್ಲ: ರಿಷಬ್ ಶೆಟ್ಟಿ ಸ್ಪಷ್ಟನೆ
Advertisement
Advertisement
ನಗರದಲ್ಲಿ ಸರಿಯಾದ ಸಮಯಕ್ಕೆ ಮರಗಳ ಟ್ರಿಮಿಂಗ್ ಆಗ್ತಿಲ್ಲ. ಮರದ ಪೋಷಣೆಯೂ ಸರಿಯಿಲ್ಲ. ಬಿಬಿಎಂಪಿ (BBMP) ಯ ನಿರ್ಲಕ್ಷ್ಯಕ್ಕೆ ಒಣಗಿದ ಮರಗಳು ಹಲವು ಅವಾಂತಾರಗಳನ್ನ ಸೃಷ್ಟಿಸ್ತಿದೆ. ಮಕ್ಕಳನ್ನ ಶಾಲೆಗೆ ಬಿಟ್ಟು ಬರುವಾಗ, ಎಮರ್ಜೆನ್ಸಿ ಅಂತ ಹೆಲ್ಮೆಟ್ ಇಲ್ದೇ ಹೊರ ಬಂದಾಗ ತಲೆ ಮೇಲೆ ಏನದ್ರೂ ಈ ಕೊಂಬೆಗಳು ಬಿದ್ರೆ, ಸ್ಪಾಟ್‍ನಲ್ಲೇ ಜೀವ ಹೋಗುತ್ತೆ. ಮರಗಳ ಟ್ರಿಮ್ಮಿಂಗ್, ಪೋಷಣೆಗಿಂತ ಪಾಲಿಕೆಗೆ ಕೋಟಿ ಕೋಟಿ ಅನುದಾನ ಸುರಿದ್ರೂ ಈ ಸಮಸ್ಯೆಗೆ ಈವರೆಗೂ ಮುಕ್ತಿ ಸಿಕ್ಕಿಲ್ಲ.
Advertisement
ಬಹುತೇಕ ಮರಗಳಲ್ಲಿ ಫಂಗಸ್ ಸೇರಿ ಜೀವ ಇಲ್ಲದಂತಾಗಿವೆ. ಕಾರುಗಳ ಮೇಲೆ ರೆಂಬೆ- ಕೊಂಬೆಗಳು ಬಿದ್ದು ಗ್ಲಾಸ್ ಒಡೆದು ಹೋಗಿವೆ. ಅದೇನೆ ಆಗ್ಲಿ ಪಾಲಿಕೆ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ.