ಬೆಂಗಳೂರು: ಐದು ದಿನದಿಂದ ಅರಣ್ಯ ಇಲಾಖೆ (Forest Department) ಯ ಬೋನಿಗೂ ಬೀಳದೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿರುವ ಚಿರತೆ ಈಗ ನೈಸ್ ರೋಡ್ (Nice Road) ತುರಹಳ್ಳಿ ಕೆಂಗೇರಿ ಬಿಟ್ಟು ಬೇರೆ ಕಡೆ ಜಾಡು ಬದಲಾಯಿಸಿದ್ಯಾ ಎನ್ನುವ ಅನುಮಾನ ಮೂಡಿದೆ.
Advertisement
ಹೌದು. ಬನ್ನೇರುಘಟ್ಟ (Bannerughatta) ರಸ್ತೆಯ ಪಾರ್ಕಿಂಗ್ ಜಾಗದಲ್ಲಿ ಬೈಕ್ ಪಕ್ಕ ನಿಂತು ಡೆಡ್ಲಿ ಚಿರತೆ ಆರಾಮವಾಗಿ ಅಡ್ಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲ ಒಂದು ನಾಯಿಮರಿಯನ್ನು ಕೂಡ ಕೊಂದು ಹಾಕಿದೆ. ಭರ್ತಿ ಇಂದಿಗೆ ಆರು ದಿನವಾಯ್ತ. ಆದರೂ ಚಿರತೆಯ ಭೀತಿ ಮಾತ್ರ ಜನ್ರಿಗೆ ಕಡಿಮೆಯಾಗಿಲ್ಲ.
Advertisement
Advertisement
ಅತ್ತ ಬೋನು ಹಾಕಿ ಚಿರತೆ ಇಂದು ಬೀಳಬಹುದು ನಾಳೆ ಬೀಳಬಹುದು ಅಂತ ಅಂದುಕೊಂಡ ಅರಣ್ಯ ಇಲಾಖೆ, ಅಧಿಕಾರಿಗಳಿಗೆ ಚೆನ್ನಾಗಿ ಚಳ್ಳಹಣ್ಣು ತಿನ್ನಿಸಿ ಚಿರತೆ (Leopard) ಎಸ್ಕೇಪ್ ಆಗಿದೆ. ತುರಹಳ್ಳಿ ಫಾರೆಸ್ಟ್, ನೈಸ್ ರೋಡ್ ಕೆಂಗೇರಿ ಭಾಗದಲ್ಲಿ ಕಾಣಿಸಿಕೊಂಡ ಚಿರತೆ ಈಗ, ಜಾಡು ಬದಲಾಯಿಸಿ ಬನ್ನೇರುಘಟ್ಟ ರಸ್ತೆಯತ್ತ ಹೋಗಿರಬಹುದು ಎನ್ನುವ ಅನುಮಾನವೂ ಮೂಡಿದೆ. ಇದನ್ನೂ ಓದಿ: ತುರಹಳ್ಳಿ ಫಾರೆಸ್ಟ್‌ನಲ್ಲಿ ಆಪರೇಷನ್ ಚಿರತೆ- ಬೆಂಗ್ಳೂರಿನಲ್ಲೂ `ರುದ್ರಪ್ರಯಾಗ’ದ ಥ್ರಿಲ್ಲರ್ ಸ್ಟೋರಿ
Advertisement
ಬನ್ನೇರುಘಟ್ಟ ರಸ್ತೆಯ ಜನ ಕೂಡ ಆತಂಕದಿಂದ ವಾಸಮಾಡುವಂತಾಗಿದೆ. ಅದರಲ್ಲೂ ಮಿಡ್‍ನೈಟ್‍ನಲ್ಲಿ ಚಿರತೆಯ ಈ ದೃಶ್ಯ ಸಿಸಿಟಿವಿ (CCTV) ಯಲ್ಲಿ ಸೆರೆಯಾಗಿದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಸದ್ಯ ಅರಣ್ಯ ಇಲಾಖೆಯವರು ಕೂಡ ಬನ್ನೇರುಘಟ್ಟದತ್ತ ಚಿರತೆ ಶಿಫ್ಟ್ ಆಗಿರಬಹುದು ಎನ್ನುವ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿ ಚಿರತೆ ಹಾವಳಿ ಕಾಮನ್ ಆಗಿತ್ತು. ಆದರೆ ಈಗ ಸಿಟಿಯಲ್ಲಿ ಈ ರೀತಿ ಚಿರತೆ ಹಾವಳಿ ಜನರ ನಿದ್ದೆಗೆಡಿಸಿದೆ. ಅರಣ್ಯ ಇಲಾಖೆಯೂ ಅಸಹಾಯಕತೆ ವ್ಯಕ್ತಪಡಿಸಿದೆ.