ಬೆಂಗಳೂರು: ನವ ದಂಪತಿಗಳಿಗೆ ಒಂದು ಗುಡ್ ನ್ಯೂಸ್. ಇನ್ನು ಮುಂದೇ ನೀವು ನಿಮ್ಮ ಮದುವೆಯ ಪ್ರಮಾಣಪತ್ರವನ್ನು ಪಡೆಯಲು ಸಬ್-ರಿಜಿಸ್ಟ್ರರ್ ಕಚೇರಿಗೆ ಹೋಗುವ ಅವಶ್ಯಕತೆ ಇಲ್ಲ. ಮನೆಯಲ್ಲಿಯೇ ಕುಳಿತು ಆನ್‍ಲೈನ್ ಮೂಲಕ ನೋಂದಾಯಿಸಿಕೊಂಡು ಅದನ್ನು ಪ್ರಿಂಟ್ ತೆಗೆದುಕೊಳ್ಳಬಹುದು. ಯಾವ ಅಲೆದಾಟವಿಲ್ಲದೆ ಸರ್ಟಿಫಿಕೇಟ್ ನಿಮ್ಮ ಕೈ ಸೇರುತ್ತದೆ.
ಕರ್ನಾಟಕ ಅಂಚೆ ಮತ್ತು ನೋಂದಣಿ ಇಲಾಖೆಯು ಜನರು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವುದು, ಕಾಯುವುದು ಮತ್ತು ಪರದಾಡುವುದು ಇವುಗಳೆಲ್ಲವನ್ನು ಕಡಿಮೆ ಮಾಡುವ ಉದ್ದೇಶದಿಂದ ಒಂದು ವೆಬ್‍ಸೈಟ್ ಅನ್ನು ಆರಂಭಿಸುವ ನಿರ್ಧಾರವನ್ನು ಮಾಡಿದೆ.
Advertisement
ನವ ದಂಪತಿಗಳಿಗೆ ಅಂತರ್ಜಾಲದ ಮೂಲಕ ಮದುವೆ ಪ್ರಮಾಣ ಪತ್ರವನ್ನು ಪಡೆಯುವ ಪ್ರಕ್ರಿಯೆಯನ್ನು ನಾವು ಸುಲಭಗೊಳಿಸಿದ್ದೇವೆ. ದಂಪತಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ಅವರು ಸರ್ಟಿಫಿಕೇಟ್ ಪಡೆದುಕೊಳ್ಳಬಹುದು. ಈ ಹೊಸ ವ್ಯವಸ್ಥೆಯನ್ನು ಬೆಂಗಳೂರಿನ ರಿಜಿಸ್ಟ್ರರ್ ಕಚೇರಿಯಲ್ಲಿ ಪರಿಚಯಿಸಲಾಗುತ್ತದೆ. ನಂತರ ವರ್ಷಾಂತ್ಯದ ವೇಳೆಗೆ ರಾಜ್ಯದ ಉಳಿದ ಭಾಗಗಳ ಎಲ್ಲಾ ರಿಜಿಸ್ಟ್ರರ್ ಕಚೇರಿಗಳಲ್ಲಿಯೂ ಜಾರಿ ಮಾಡಲಾಗುತ್ತದೆ ಎಂದು ನೋಂದಣಿ ಇನ್ಸ್ ಪೆಕ್ಟರ್ ಜನರಲ್ ಮತ್ತು ಅಂಚೆ ಇಲಾಖೆಯ ಕಮಿಷನರ್ ಮನೋಜ್ ಕುಮಾರ್ ಮೀನಾ ತಿಳಿಸಿದರು.
Advertisement
ಸರ್ಕಾರ ಹಿಂದೂ ವಿವಾಹ ಕಾಯ್ದೆ ಮತ್ತು ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಮದುವೆ ಪ್ರಮಾಣ ಪತ್ರವನ್ನು ವಿತರಿಸುತ್ತದೆ. ರಾಜ್ಯದಲ್ಲಿ ಕೇವಲ 15% ರಷ್ಟು ಮದುವೆಗಳು ಮಾತ್ರ ನೋಂಣಿಯಾಗಿವೆ. ಸುಪ್ರೀಂ ಕೋರ್ಟ್ ಹಾಗೂ ನ್ಯಾಷನಲ್ ಲಾ ಕಮಿಷನ್ ಕಡ್ಡಾಯಗೊಳಿಸಿರುವಂತೆ ದಂಪತಿಗಳು ತಮ್ಮ ಮದುವೆಯನ್ನು ನೋಂದಾಯಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಆನ್‍ಲೈನ್ ವ್ಯವಸ್ಥೆಯನ್ನು ತರಲಾಗ್ತಿದೆ.
Advertisement
ಪ್ರಸ್ತುತ ದಂಪತಿ ಮದುವೆ ಪ್ರಮಾಣ ಪತ್ರ ಪಡೆಯಬೇಕಾದರೆ ವಯಸ್ಸು, ಗುರುತಿನ ದಾಖಲೆ ಹಾಗೂ ಮದುವೆಗೆ ಇಬ್ಬರು ಸಾಕ್ಷಿಗಳನ್ನು ಸಲ್ಲಿಸಬೇಕು. ನಂತರ ಒಂದೆರಡು ಬಾರಿ ಕಚೇರಿಗೆ ಭೇಟಿ ನೀಡಿ ಆಮೇಲೆ ತಿಂಗಳಾದ ಮೇಲೆ ಸರ್ಟಿಫಿಕೇಟ್ ಸಿಗುತ್ತಿತ್ತು.
Advertisement
ಆಧಾರ್ ಆಧರಿತ ಆನ್‍ಲೈನ್ ಮದುವೆ ನೋಂದಣಿಯ ಬಗ್ಗೆ ಸರ್ಕಾರ ಇದೀಗ ಪ್ರಸ್ತಾವನೆ ಸಲ್ಲಿಸಿದ್ದು, ಅರ್ಜಿ ಸಲ್ಲಿಸುವುದರಿಂದ ಹಿಡಿದು ಅದನ್ನು ಕೈಗೆ ಪಡೆದುಕೊಳ್ಳುವರೆಗೂ ಎಲ್ಲಾ ರೀತಿಯ ಪ್ರಕ್ರಿಯೇಗಳು ಆನ್‍ಲೈನ್ ಮೂಲಕವೇ ಇರುತ್ತದೆ. ಕಂಪ್ಯೂಟರ್ ಜೆನೆರೆಟ್ ಸರ್ಟಿಫಿಕೇಟ್‍ನಲ್ಲಿ ಹಾಲೋಗ್ರಾಮ್ ಮತ್ತು ಮಷೀನ್ ರೀಡೆಬಲ್ ಕ್ಯೂಆರ್ ಕೋರ್ಡ್ ಇರುತ್ತದೆ. ಜೊತೆಗೆ ರಿಜಿಸ್ಟ್ರರ್ ಜನರಲ್ ಅವರ ಡಿಜಿಟಲ್ ಸಹಿಯೂ ಇರುತ್ತದೆ.
ಇಲಾಖೆಯು ಮದುವೆ ಸರ್ಟಿಫಿಕೇಟ್ ಅಷ್ಟೇ ಅಲ್ಲದೇ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಆನ್‍ಲೈನ್ ಮೂಲಕವೇ ಪಡೆಯುವ ವ್ಯವಸ್ಥೆ ಮಾಡಲು ಯೋಚಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.