ಶ್ರೀನಗರ: ಎರಡು ವರ್ಷಗಳ ಹಿಂದೆ ಹಸುವಿಗೆ ಪರೀಕ್ಷಾ ಪ್ರವೇಶ ಪತ್ರ ನೀಡಿ ಸುದ್ದಿಯಾಗಿದ್ದ ಜಮ್ಮು ಕಾಶ್ಮೀರ ವೃತ್ತಿಪರ ಪ್ರವೇಶ ಪರೀಕ್ಷಾ ಮಂಡಳಿ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದ್ದು, ಈ ಬಾರಿ ಕತ್ತೆ ಫೋಟೋ ಹಾಕಿ ಪ್ರವೇಶ ಪತ್ರ ನೀಡಿ ಸುದ್ದಿಯಾಗಿದೆ.
ಪ್ರವೇಶ ಪತ್ರದಲ್ಲಿ ಕಚೂರ್ ಖಾರ್ ಎಂಬ ಹೆಸರಿಲ್ಲಿ ಕತ್ತೆಯ ಫೋಟೋ ಮುದ್ರಣವಾಗಿದೆ. ಕಚೂರ್ ಖಾರ್ ಎಂಬ ಪದವು ಕಂದು ಬಣ್ಣದ ಕತ್ತೆ ಎಂಬ ಅರ್ಥವನ್ನು ನೀಡುತ್ತದೆ.
Advertisement
Advertisement
ಸದ್ಯ ಕತ್ತೆ ಫೋಟೋ ಹೊಂದಿರುವ ಪರೀಕ್ಷಾ ಪ್ರವೇಶ ಪತ್ರ ಎಲ್ಲೆಡೆ ವೈರಲ್ ಆಗಿದ್ದು, ಪರೀಕ್ಷಾ ಮಂಡಳಿಯ ಅಧಿಕಾರಿಗಳ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿ ಘಟನೆ ಬಗ್ಗೆ ಉತ್ತರಿಸುವಂತೆ ಆಗ್ರಹಿಸಿದ್ದಾರೆ.
Advertisement
ಮಂಡಳಿ ಮಾಡಿರುವ ಈ ತಪ್ಪನ್ನು ಕೆಲ ಕ್ಷಣಗಳಲ್ಲಿ ತಿದ್ದಿಕೊಳ್ಳಬಹುದು. ಆದರೆ 2015 ರಲ್ಲೂ ಇಂತಹದ್ದೇ ಘಟನೆ ನಡೆದ ಬಳಿಕವೂ ಅಧಿಕಾರಿಗಳು ಎಚ್ಚತ್ತುಕೊಂಡಿಲ್ಲ ಎಂಬುದು ತಿಳಿಯುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಕಿಡಿಕಾರಿದ್ದಾರೆ.