ಧಾರವಾಡ: ಕಾಂಗ್ರೆಸ್ (Congress) ಒಡೆದ ಮನೆಯಾಗಿದ್ದು, ಅದಕ್ಕೆ ಮೂರು ಬಾಗಿಲುಗಳಾಗಿವೆ. ಎರಡು ಬಾಗಿಲುಗಳಾಗಿದ್ದವು. ಈಗ ಖರ್ಗೆ (Mallikarjun Kharge) ಅವರದ್ದೊಂದು ಬಾಗಿಲು ಹುಟ್ಟಿಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಲೇವಡಿ ಮಾಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲೀಗ (Congress) ಖರ್ಗೆ ಬೆಂಬಲಿಗರ ಗುಂಪೊಂದು ಹುಟ್ಟಿಕೊಂಡಿದೆ. ಹಾಗಾಗಿ ಕಾಂಗ್ರೆಸ್ ಎಷ್ಟು ಯಾತ್ರೆ ಮಾಡಿದರೂ ಸುಧಾರಣೆ ಆಗಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: 8 ನಿಮಿಷವಾಗಿದೆ, ಕೂಡಲೇ ಭಾಷಣ ನಿಲ್ಲಿಸಿ: ಸಭೆಯಲ್ಲೇ ಹರ್ಯಾಣ ಗೃಹ ಸಚಿವರಿಗೆ ಶಾ ಕ್ಲಾಸ್
Advertisement
Advertisement
ಕಾಂಗ್ರೆಸ್ ಸ್ಥಿತಿ ಏನಾಗಿದೆ ಎಂದು ದೇಶವೇ ನೋಡುತ್ತಿದೆ. ಗುಜರಾತ್‌ಗೆ (Gujarat) ಈಗಾಗಲೇ ನಾನು ಎರಡು ಬಾರಿ ಹೋಗಿ ಬಂದಿದ್ದೇನೆ. ಅಲ್ಲಿ ಕಾಂಗ್ರೆಸ್ (Congress) ಅಡ್ರೆಸ್‌ಗಿಲ್ಲದಂತಾಗಿದೆ. ದೇಶದಲ್ಲೂ ಕೂಡ ನಾಪತ್ತೆಯಾಗುತ್ತಿದೆ ಎಂದು ಕುಟುಕಿದ್ದಾರೆ.
Advertisement
ಹಿಂದಿ ಹೇರಿಕೆ ವಿಚಾರವಾಗಿ ಮಾತನಾಡಿ, ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (NEP) ಇಂಜಿನಿಯರಿಂಗ್, ಮೆಡಿಕಲ್ (Medical Cource) ಎಲ್ಲಾ ಕೋರ್ಸ್‌ಗಳಿರಬೇಕು, ಆಯಾ ರಾಜ್ಯಗಳ ಭಾಷೆಯಲ್ಲೇ ಇರಬೇಕು ಎಂದು ಹೇಳಿದೆ ಎಂದರು. ಇದನ್ನೂ ಓದಿ: ಕರೆನ್ಸಿ ನೋಟುಗಳಲ್ಲಿರಲಿ ಗಣೇಶ, ಲಕ್ಷ್ಮೀ ಚಿತ್ರ – ಮೋದಿಗೆ ಕೇಜ್ರಿವಾಲ್ ಪತ್ರ
Advertisement
ರವೀಂದ್ರನಾಥ ಠಾಗೋರ್ ಅವರು, ಭಾಷೆಗಳು ಒಂದು ಕಮಲವಿದ್ದಂತೆ ಎಲ್ಲಾ ಭಾಷೆಗಳು ಕಮಲದ ದಳಗಳಿದ್ದಂತೆ, ಆದರೆ ಹಿಂದಿ ದಳ ಮಧ್ಯೆದಲ್ಲಿದೆ ಎಂದಿದ್ದರು. ದಳಗಳಿಲ್ಲದ ಕಮಲ ಹೂವಾಗುವುದಿಲ್ಲ. ಹಾಗಾಗಿ ಹಿಂದಿ ದಳಗಳನ್ನು ಹೊಂದಿದ ಭಾಷೆ. ನಾವು ಎಲ್ಲ ರಾಜ್ಯದಲ್ಲಿ ಅನುಮತಿ ಕೊಟ್ಟಿದ್ದೇವೆ. ಇಷ್ಟು ಅಧಮ್ಯತೆಯನ್ನು ಸರ್ಕಾರ ಕೊಟ್ಟಿದೆ. ಕೆಲವರಿಗೆ ಮಾಡಲಿಕ್ಕೆ ಕೆಲಸವಿಲ್ಲದೇ ಮಾತನಾಡುತ್ತಾರೆ. ಹಿಂದಿ ಹೇರಿಕೆ ನೆಪದಲ್ಲಿ ಇಂಗ್ಲಿಷ್‌ಗೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಈ ಕಡೆ ಹಿಂದಿ ಬೆಳೆಯಲೂ ಕೊಡುತ್ತಿಲ್ಲ, ಅತ್ತ ಕಡೆ ಕನ್ನಡ ಬೆಳೆಯಲೂ ಬಿಡುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.