– ಕದ್ದ ಹಣದಲ್ಲಿ ಮೋಜುಮಸ್ತಿ, ದೇವರಿಗೂ ಪಾಲು
ಬೆಂಗಳೂರು: ಐದು ಜಿಲ್ಲೆಯ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ಕಳ್ಳನನ್ನು ಬೆಂಗಳೂರಿನ (Bengaluru) ವಿದ್ಯಾರಣ್ಯಪುರ (Vidyaranyapura) ಪೊಲೀಸರು ಬಂಧಿಸಿದ್ದಾರೆ.
ಅಸ್ಲಾಂ ಪಾಷಾ ಬಂಧಿತ ಆರೋಪಿ. ಈತನ ಕಳ್ಳತನದ ಕೆರಿಯರ್‌ನಲ್ಲಿ ಇದುವರೆಗೂ 150 ಕಳ್ಳತನದ ಕೇಸ್ ದಾಖಲಾಗಿದೆ. ಅಸ್ಲಾಂ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿ ಮನೆಗಳ್ಳತನ ಮಾಡಿದ್ದಾನೆ. ಹಗಲೆಲ್ಲಾ ಐಷಾರಾಮಿ ಮನೆಗಳನ್ನ ರೆಕ್ಕಿ ಮಾಡೋದು, ತಡರಾತ್ರಿ ಕೈಚಳಕ ತೋರಿಸುವುದೇ ಈತನ ಕೆಲಸ. ಕಿಟಕಿ ತೆರೆದು ಮಹಿಳೆಯರು ನಿದ್ರೆಗೆ ಜಾರಿದ್ರೆ ಕುತ್ತಿಗೆಯಲ್ಲಿರುವ ಸರ ಎಗರಿಸಿ ಎಸ್ಕೇಪ್ ಆಗುತ್ತಿದ್ದ. ಕಿಟಕಿ ಪಕ್ಕದಲ್ಲಿ ಮೈನ್ ಡೋರ್ ಇದ್ದರೆ ಕಿಟಕಿ ಗ್ಲಾಸ್ ಒಡೆದು ಅದರ ಮೂಲಕ ಡೋರ್ ಓಪನ್ ಮಾಡುತ್ತಿದ್ದ. ಹಾಲು ಪೇಪರ್ ಮನೆಬಳಿ ಬಿದ್ದಿದ್ದು, ಮೈನ್ ಡೋರ್ ಲಾಕ್ ಆಗಿದ್ರೆ ಅದೇ ಮನೆಯನ್ನ ಟಾರ್ಗೆಟ್ ಮಾಡುತ್ತಿದ್ದ. ಮನೆಯಲ್ಲಿ ಲೈಟ್ಸ್ ಆಫ್ ಆಗಿದ್ದು, ಮನೆಯ ಗೇಟ್ ಹೊರಗಿನಿಂದ ಲಾಕ್ ಆಗಿದ್ರು ಕಳ್ಳತನ ಮಾಡುತ್ತಿದ್ದ. ಇದನ್ನೂ ಓದಿ: ಇದು ರಾಜಕೀಯ ನಾಟಕದಂತೆ ಕಾಣುತ್ತಿದೆ: ರಾಹುಲ್ ಗಾಂಧಿ ಆರೋಪ ಸುಳ್ಳು ಎಂದ ಬ್ರೆಜಿಲ್ ಮಾಡೆಲ್
ಕಳ್ಳತನದಿಂದ (Theft) ಬಂದ ಹಣದಲ್ಲಿ ಅಸ್ಲಾಂ ಮೋಜುಮಸ್ತಿ ಮಾಡಿ ಹಣ ಖಾಲಿ ಮಾಡುತ್ತಿದ್ದ. ಒಂದು ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ರೆ ಆ ಕೇಸ್ ಹಳೇದಾಗೋವರೆಗೂ ಮತ್ತೆ ಬರುತ್ತಿರಲಿಲ್ಲ. ಕನಿಷ್ಟ ಒಂದು ವರ್ಷವಾದರೂ ಮತ್ತೆ ಆ ಏರಿಯಾಗೆ ಕಾಲಿಡುತ್ತಿರಲಿಲ್ಲ. ಆರೋಪಿ ಅಸ್ಲಾಂ ಕದ್ದ ಹಣದಲ್ಲಿ ದೇವರಿಗೂ ಪಾಲು ಕೊಡುತ್ತಿದ್ದ. ಕಳೆದ 20 ವರ್ಷಗಳಿಂದ ಕಳ್ಳತನವೇ ಆತನ ಫುಲ್ ಟೈಂ ಕೆಲಸವಾಗಿತ್ತು. ಅಸ್ಲಾಂ ತಂದೆ ತಾಯಿಗೆ ಒಟ್ಟು ಏಳು ಜನ ಮಕ್ಕಳು. ಏಳು ಜನ ಮಕ್ಕಳ ಪೈಕಿ ಮೂವರದ್ದು ಕಳ್ಳತನವೇ ಕೆಲಸವಾಗಿತ್ತು. ಇದನ್ನೂ ಓದಿ: ಕುಡಿದು ಬರುತ್ತಿದ್ದ ಡ್ರೈವರ್‌ಗಳಿಗೆ ಲಂಚ ಪಡೆದು ಡ್ಯೂಟಿ – BMTC ಡಿಪೋ ಮ್ಯಾನೇಜರ್ ಸೇರಿ 9 ಮಂದಿ ಅಮಾನತು
ಇನ್ನು ಆರೋಪಿ ಅಸ್ಲಾಂ, ಕದ್ದ ಹಣದಲ್ಲಿ ಒಂದು ಪಾಲು ಅಜ್ಮೀರ್ ದರ್ಗಾಗೆ ಕಾಣಿಕೆ ಹಾಕುತ್ತಿದ್ದ. ಪ್ರತಿ ಬಾರಿ ಕಳ್ಳತನ ಮಾಡಿದಾಗ ಅಸ್ಲಾಂ, ಅಜ್ಮೀರ್ ದರ್ಗಾಗೆ ಹೋಗಿ, ಪ್ರಾರ್ಥನೆ ಮುಗಿಸಿ ಗೋವಾಗೆ ಹೋಗಿ ಮಜಾ ಮಾಡಿ ಬರುತ್ತಿದ್ದ. ನಂತರ ಮನೆಗೆ ಬಂದು ಕುಟುಂಬಸ್ಥರಿಗೆ ಹಣ ಕೊಡುತ್ತಿದ್ದ. ಅಲ್ಲದೇ ಜೈಲಿನಿಂದ ಬಿಡಿಸಲು ಮಾಡಿದ್ದ ಸಾಲದ ಹಣ ತೀರಿಸುತ್ತಿದ್ದ. ಮತ್ತೆ ಮುಂದೆ ಇನ್ನೊಂದು ಕಳ್ಳತನಕ್ಕೆ ಮುಂದಾಗುತ್ತಿದ್ದ. ಸದ್ಯ ಆರೋಪಿ ಅಸ್ಲಾಂನನ್ನು ಬಂಧಿಸಿರುವ ವಿದ್ಯಾರಣ್ಯಪುರ ಪೊಲೀಸರು ಆತನಿಂದ 22.5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪೂರ್ಣ ಉತ್ಸಾಹದೊಂದಿಗೆ ಮತ ಚಲಾಯಿಸಿ: ಬಿಹಾರ ಜನತೆಗೆ ಮೋದಿ ಮನವಿ

