ಬೆಂಗಳೂರು: ಈತ ಸಾಮಾನ್ಯ ಕಳ್ಳನಲ್ಲ. ಇದುವರೆಗೂ ಈತ ಕದ್ದಿರೋ ಮನೆಗಳ ಸಂಖ್ಯೆ ಒಂದಲ್ಲ, ಎರಡಲ್ಲ, ಬರೊಬ್ಬರಿ 40 ಮನೆಗಳು. ಬೆಂಗಳೂರು (Bengaluru), ಮೈಸೂರು (Mysuru), ಮಂಡ್ಯ (Mandya), ತುಮಕೂರಿನಲ್ಲೆಲ್ಲ (Tumakuru) ತನ್ನ ಕೈಚಳಕ ತೋರಿಸಿದ್ದಾನೆ. ಇಷ್ಟೆಲ್ಲ ಮಾಡಿದವನು ಈಗ ಪೊಲೀಸರ ಅತಿಥಿಯಾಗಿದ್ದಾನೆ.
Advertisement
ಬಂಧಿತ ಆರೋಪಿ ಮುದಾಸಿರ್, ಏರಿಯಾ ಒಂದನ್ನು ಆಯ್ದುಕೊಂಡು ಅಲ್ಲಿ ಸುತ್ತಾಡುತ್ತಿದ್ದ. ಯಾವ ಮನೆಗಳಿಗೆ ಬೀಗ ಹಾಕಲಾಗಿದೆ ಎಂದು ನೋಡಿ ಅಂತಹ ಮನೆಗಳ ಬಾಗಿಲು ಒಡೆದು ಕೈಗೆ ಸಿಕ್ಕಿದ್ದನ್ನು ದೋಚುತ್ತಿದ್ದ. ಇದನ್ನೂ ಓದಿ : ಅಧಿವೇಶನ ಮುಗಿಸಿ ಸಿಸಿಎಲ್ ಪಂದ್ಯ ವೀಕ್ಷಣೆಗೆ ಬಂದ ಸಿಎಂ ಬೊಮ್ಮಾಯಿ
Advertisement
Advertisement
ಆರೋಪಿ ಮೊದಲ ಹಾಗೂ ಎರಡನೇ ಮಹಡಿಗಳಲ್ಲಿರೋ ಮನೆಗಳಿಗೆ ಟಾರ್ಗೆಟ್ ಮಾಡುತ್ತಿದ್ದ. ಸಹಚರರನ್ನು ಕರೆದೊಯ್ದರೆ ಸಿಕ್ಕಿ ಬೀಳುವ ಭಯದಲ್ಲಿ ಒಬ್ಬನೇ ಕಳ್ಳತನಕ್ಕೆ ಇಳಿಯುತ್ತಿದ್ದ. ಸದ್ಯ ಆರೋಪಿಯನ್ನು ಯಶವಂತಪುರ (Yeswanthpur) ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಅಂದು ಧೋನಿ, ಇಂದು ಕೌರ್ – ವಿಶ್ವಕಪ್ ಕನಸು ಭಗ್ನಗೊಳಿಸಿದ ಆ ಒಂದು ರನೌಟ್
Advertisement
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k