ಬೆಂಗಳೂರು: ಹಲವು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ನಟೋರಿಯಸ್ ಮೋಸ್ಟ್ ವಾಂಟೆಡ್ ರೌಡಿಶೀಟರ್ನೊಬ್ಬ ನನ್ನು ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ತಬ್ರೇಜ್ ಪಾಷ ಅಲಿಯಾಸ್ ಛೋಟಾ ಟೈಗರ್ ಬಂಧಿತ ಆರೋಪಿ. ಮೊಹಮ್ಮದ್ ಬೆಂಗಳೂರಿನ ಫೈನಾನ್ಷಿಯರಗಳನ್ನೆ ಟಾರ್ಗೆಟ್ ಮಾಡುತ್ತಿದ್ದನು. ಹುಡುಗರನ್ನ ಕಳುಹಿಸಿ ಮೊದಲು ಹಣಕ್ಕೆ ಬೇಡಿಕೆಯಿಡುತ್ತಿದ್ದನು. ನಂತರ ಹಣ ಕೊಡದೇ ಇದ್ದವರ ಕಚೇರಿಗೆ ನುಗ್ಗಿ ಲಾಂಗು ಮಚ್ಚು ತೋರಿಸಿ ಹೆದರಿಸಿ ದರೋಡೆ ಮಾಡುತ್ತಿದ್ದನು. ಇದನ್ನೂ ಓದಿ: ಬಿಜೆಪಿಯ ದ್ವೇಷದ ರಾಜಕಾರಣ ಭಾರತಕ್ಕೆ ಹಾನಿಕಾರಕ: ರಾಹುಲ್ ಗಾಂಧಿ
ಆರೋಪಿಯು ಬೆಂಗಳೂರಿನಲ್ಲಿ 20 ಕ್ಕೂ ಹೆಚ್ಚು ಪ್ರಕರಣಗಳಿಗೆ ಬೇಕಾಗಿದ್ದು, ಪೊಲೀಸರಿಗೆ ಸಿಗದೇ ಹಲವು ವರ್ಷಗಳಿಂದ ತಲೆ ಮರೆಸಿಕೊಂಡಿದ್ದನು. ಸದ್ಯ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.