ಮೈಸೂರು: ಡಿಸಿ ಆಗಿದ್ದ ವೇಳೆ ಹಲವು ವ್ಯತ್ಯಯಗಳಿಗೆ ಕಾರಣರಾಗಿದ್ದ ಹಿನ್ನೆಲೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ವಸತಿ ಇಲಾಖೆ ನೋಟಿಸ್ ನೀಡಿದೆ.
ಮೈಸೂರು ಡಿಸಿ ಆಗಿದ್ದ ವೇಳೆ 4 ಆರೋಪಗಳಿಗೆ ಜುಲೈ 30 ರಂದು ಖುದ್ದು ಹಾಜರಾಗಿ ವಿವರಣೆ ನೀಡಬೇಕಾಗಿ ವಸತಿ ಇಲಾಖೆಯ ಕಾರ್ಯದರ್ಶಿ ಡಾ.ಜೆ ರವಿಶಂಕರ್ ರೋಹಿಣಿ ಸಿಂಧೂರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಖಂಡಿಸಿ ರಾಜೀನಾಮೆ ಪರ್ವ – ಇದು ಹೇಡಿಗಳ ಲಕ್ಷಣ ಎಂದ ಈಶ್ವರಪ್ಪ
Advertisement
Advertisement
ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅವ್ಯವಹಾರ, ಡಿಸಿ ಮನೆ ನವೀಕರಣ, ಕೋವಿಡ್ ಸಾವುಗಳ ಬಗ್ಗೆ ತಪ್ಪು ಮಾಹಿತಿ, ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಕರ್ತವ್ಯ ಲೋಪ ಹೀಗೆ 4 ಆರೋಪಗಳು ರೋಹಿಣಿ ಸಿಂಧೂರಿ ಮೇಲಿದ್ದು, ಈ ಬಗ್ಗೆ ಶಾಸಕ ಸಾರಾ ಮಹೇಶ್ ತನಿಖೆಗೆ ಆಗ್ರಹಿಸಿದ್ದರು. ಇದನ್ನೂ ಓದಿ: 1,100 ಎನ್‌ಕೌಂಟರ್ ಪೊಲೀಸರಿಂದಲೇ ಮಾಡಿಸ್ತೇವೆ – ಹಿಂದೂ ಸಮಾಜದ ಮುಖಂಡ
Advertisement
ಇದೀಗ ರೋಹಿಣಿ ಸಿಂಧೂರಿಗೆ ನೋಟಿಸ್ ನೀಡಲಾಗಿದ್ದು, ಬೆಂಗಳೂರಿನ ವಿಕಾಸಸೌಧದ ವಸತಿ ಇಲಾಖೆಗೆ ಆಗಮಿಸಿ ವಿವರಣೆ ನೀಡುವಂತೆ ತಿಳಿಸಲಾಗಿದೆ.