ನವದೆಹಲಿ: ಭಯೋತ್ಪಾದನೆಗೆ ಹಣಕಾಸು ನೆರವು (Terror Funding Case) ನೀಡಿದ್ದ ಪ್ರಕರಣದಲ್ಲಿ ಮರಣದಂಡನೆ (Death Penalty) ವಿಧಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ಮಾಡಿದ ಮನವಿಯ ಮೇರೆಗೆ ದೆಹಲಿ ಹೈಕೋರ್ಟ್ (Delhi High Court) ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‍ಗೆ (Yasin Malik) ಸೋಮವಾರ ನೋಟಿಸ್ ಜಾರಿ ಮಾಡಿದೆ.
Advertisement
ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಮತ್ತು ತಲ್ವಂತ್ ಸಿಂಗ್ ಅವರ ಪೀಠವು ಪ್ರಸ್ತುತ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಲಿಕ್‍ನನ್ನು ಆಗಸ್ಟ್ 9ರ ಒಳಗಾಗಿ ಕೋರ್ಟ್‍ಗೆ ಹಾಜರುಪಡಿಸುವಂತೆ ಆದೇಶದಲ್ಲಿ ತಿಳಿಸಿದೆ. ಎನ್‍ಐಎ (NIA) ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಆರೋಪಿಯು ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಅಲ್ಲದೆ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಅಪರಾಧಿಗೆ ಮರಣದಂಡನೆ ನೀಡಬೇಕು ಎಂದು ವಾದಿಸಿದರು. ಇದನ್ನೂ ಓದಿ: ಹುಟ್ಟಿನಿಂದ ಸ್ತ್ರೀ, ಬಳಿಕ ಪುರುಷ- ದಾಖಲೆಯಲ್ಲಿ ಲಿಂಗ ಬದಲಾವಣೆ ಅರ್ಜಿಗೆ ಕೋರ್ಟ್ ಹೇಳಿದ್ದೇನು?
Advertisement
Advertisement
ಯಾಸಿನ್ ಮಲಿಕ್ ಅಪರಾಧ ಒಪ್ಪಿಕೊಂಡ ಕಾರಣಕ್ಕೆ ಐಪಿಸಿ ಸೆಕ್ಷನ್ 121ರ ಅಡಿಯಲ್ಲಿ (121 IPC) ಮರಣ ದಂಡನೆಯ ಬದಲಾಗಿ ಜೀವಾವಧಿ ಶಿಕ್ಷೆಗೆ ಮಾರ್ಪಡಿಸಲಾಗಿದೆ ಎಂದು ಕೋರ್ಟ್ ಉಲ್ಲೇಖಿಸಿದೆ. 2022ರ ಮೇ 24 ರಂದು ನ್ಯಾಯಾಲಯವು ಮಲಿಕ್‍ಗೆ ದೇಶದ್ರೋಹ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು.
Advertisement
ಮರಣದಂಡನೆ ನೀಡುವಂತೆ ಎನ್‍ಐಎ ಹೈಕೋರ್ಟ್‍ಗೆ ಸಲ್ಲಿಸಿದ ಮನವಿಯಲ್ಲಿ, ಉಗ್ರರಿಗೆ ತಪ್ಪೊಪ್ಪಿಕೊಂಡ ಕಾರಣಕ್ಕೆ ಮರಣದಂಡನೆಯನ್ನು ನೀಡದಿದ್ದರೆ ಅದರಿಂದ ತಪ್ಪಿಸಿಕೊಳ್ಳಲು ದಾರಿಯಾಗುತ್ತದೆ ಎಂದು ಉಲ್ಲೇಖಿಸಿತ್ತು. ಇದನ್ನೂ ಓದಿ: ಐಡಿ ಪ್ರೂಫ್ ಇಲ್ಲದೆ 2,000 ರೂ. ನೋಟು ವಿನಿಮಯ ವಿರುದ್ಧ ಮನವಿ- ದೆಹಲಿ ಹೈಕೋರ್ಟ್‌ನಿಂದ ಅರ್ಜಿ ವಜಾ