– 40 ಪರ್ಸೆಂಟ್ ಭ್ರಷ್ಟಾಚಾರ ಆಗಿಯೇ ಇಲ್ಲ
– ಕಾಂಗ್ರೆಸ್ ಮಾಡ್ತಿರೋ ಆಧಾರ ರಹಿತ ಆರೋಪ
ಮೈಸೂರು: ಸಿದ್ದರಾಮಯ್ಯ (Siddaramaiah) ಸಿಎಂ ಆಗಿದ್ದಾಗ ಅವರು ಏನೂ ಕೆಲಸ ಮಾಡಲಿಲ್ಲ. ಕೇವಲ ಪಿಎಫ್‌ಐ (PFI) ಮಾತ್ರ ಅಭಿವೃದ್ಧಿ ಆಯಿತು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ (Arun Singh) ಆರೋಪಿಸಿದ್ದಾರೆ.
Advertisement
ಮೈಸೂರಿನಲ್ಲಿ (Mysuru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅರುಣ್ ಸಿಂಗ್, ಜನರ ಹಿತ, ದೇಶದ ಹಿತಕ್ಕೆ ಡಬಲ್ ಎಂಜಿನ್ ಸರ್ಕಾರ ಬರಬೇಕಿದೆ. ಕರ್ನಾಟಕದ ವಿಕಾಸದ ಜೊತೆ ದೇಶದ ವಿಕಾಸ ಸೇರಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಮದಾಸ್ 4 ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಈಗ ಅವರು ಶ್ರೀವತ್ಸ ಅವರಿಗೆ ಸ್ಥಾನ ಬಿಟ್ಟು ಕೊಟ್ಟಿದ್ದಾರೆ. ಇದು ಬಿಜೆಪಿಯಲ್ಲಿ (BJP) ಮಾತ್ರವೇ ಸಾಧ್ಯ ಎಂದು ಅರುಣ್ ಸಿಂಗ್ ಟಿಕೆಟ್ ಕೈತಪ್ಪಿದ ಶಾಸಕ ರಾಮದಾಸ್ ಅವರನ್ನು ಹಾಡಿ ಹೊಗಳಿದರು.
Advertisement
Advertisement
ಕಾಂಗ್ರೆಸ್ (Congress) ಕಾಲದಲ್ಲಿ ಹಿಂದೂಗಳ ಹತ್ಯೆಯಾಗಿತ್ತು. ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಅದೇ ಸ್ಥಿತಿ ಇತ್ತು. ಒಂದು ರೀತಿ ನೆಗೆಟಿವ್ ವಾತಾವರಣ ಇತ್ತು. ಪಿಎಫ್‌ಐ ಹಾವಳಿ ಹೆಚ್ಚಾಗಿತ್ತು. ಕಾಂಗ್ರೆಸ್ ಇಷ್ಟು ವರ್ಷ ಸಾಮಾಜಿಕ ನ್ಯಾಯಕ್ಕಾಗಿ ಏನೂ ಮಾಡಿಲ್ಲ. ನೀವು ಅಧಿಕಾರದಲ್ಲಿದ್ದಾಗ ಮೀಸಲಾತಿ ಏಕೆ ಹೆಚ್ಚಿಸಿರಲಿಲ್ಲ? 4% ಅಂಸವಿಧಾನತ್ಮಕವಾಗಿ ಮುಸ್ಲಿಮರಿಗೆ ನೀಡಲಾಗಿತ್ತು. ಅದನ್ನು ಲಿಂಗಾಯತ ಒಕ್ಕಲಿಗರಿಗೆ ತಲಾ 2% ನೀಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ವಾಪಸ್ಸು ಪಡೆಯುವುದಾಗಿ ಹೇಳಿದ್ದು, ಅದು ಯಾರಿಂದ ವಾಪಸ್ ಪಡೆಯುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಕಾಂಗ್ರೆಸ್ ಒಡೆದ ಮನೆಯಂತಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನೂ ಮಾಡಲಿಲ್ಲ. ಕೇವಲ ಪಿಎಫ್‌ಐ ಮಾತ್ರ ಅಭಿವೃದ್ಧಿ ಆಯಿತು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜಗದೀಶ್ ಶೆಟ್ಟರ್ 100ಕ್ಕೆ ನೂರರಷ್ಟು ಗೆಲ್ತಾರೆ – ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
Advertisement
ರಾಜ್ಯದಲ್ಲಿ ಭ್ರಷ್ಟಾಚಾರದ ಪ್ರಶ್ನೆಯೇ ಇಲ್ಲ. ಕಾರಣ ರಾಜ್ಯದಲ್ಲಿ ಭ್ರಷ್ಟಾಚಾರ ಆಗಿಯೇ ಇಲ್ಲ. 40% ಆರೋಪ ಸುಳ್ಳು. ಇದು ಕಾಂಗ್ರೆಸ್ ಮಾಡುತ್ತಿರುವ ಆಧಾರ ರಹಿತ ಆರೋಪ. ಇದು ಜನರನ್ನು ದಿಕ್ಕುತಪ್ಪಿಸೋ ಕೆಲಸ. ಜನರಿಗೂ ಗೊತ್ತಿದೆ ಕಾಂಗ್ರೆಸ್‌ನ ಆರೋಪಕ್ಕೆ ಯಾವುದೇ ಆಧಾರ ಇಲ್ಲ ಎಂದು ಅರುಣ್ ಸಿಂಗ್ ಟಾಂಗ್ ನೀಡಿದರು.
ಬಿಎಲ್ ಸಂತೋಷ್ ವಿರುದ್ಧ ಜಗದೀಶ್ ಶೆಟ್ಟರ್ ಆರೋಪ ಹೊರಿಸಿದ ವಿಚಾರವಾಗಿ ಮಾತನಾಡಿದ ಅರುಣ್ ಸಿಂಗ್, ಬಿಎಲ್ ಸಂತೋಷ್ ಒಬ್ಬ ಸಂತ. ಪಕ್ಷಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಬಿಜೆಪಿಯಿಂದ ಎಲ್ಲವನ್ನು ಪಡೆದು, ಸಿಎಂ ಆಗಿ ಈಗ ಈ ರೀತಿ ಮಾತನಾಡುವುದು ಸರಿಯಲ್ಲ. ಈಗ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದಾರೆ. ಮುಂದೆ ಅವರಿಗೆ ಗೊತ್ತಾಗುತ್ತದೆ, ಮುಂದೆ ಸೋತ ನಂತರ ಅವರಿಗೆ ಅರಿವಾಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಮಾರುತಿ ಕಾರು ಚಕ್ರ ಹಾಕಿದ್ರೆ ಸರಿಯಾಗಿ ಓಡುತ್ತಾ? – ‘ಡಬಲ್ ಎಂಜಿನ್ ಸರ್ಕಾರ’ ಮುಖ್ಯ ಎಂದ ಮೋದಿ