ಬೀಜಿಂಗ್: ಇತ್ತೀಚಿಗೆ ನಾವುಗಳು ಹೋಟೆಲ್ ಮತ್ತು ಆನ್‍ಲೈನ್ ಗಳ ಮೂಲಕ ತರಿಸುವ ಆಹಾರಗಳಲ್ಲಿ ಹುಳು, ಪ್ಲಾಸ್ಟಿಕ್ ಕವರ್‍ಗಳು ಪತ್ತೆಯಾಗಿರುವುದು ನೋಡಿರುತ್ತವೆ. ಆದರೆ ಇಲ್ಲೊಬ್ಬ ಯುವತಿ ಹೋಟೆಲ್‍ನಿಂದ ತಾನು ತಂದ ನೂಡಲ್ಸ್ ನಲ್ಲಿ ಸತ್ತ ಹಾವಿನ ಮರಿಯೊಂದು ಪತ್ತೆಯಾಗಿದೆ.
ಚೀನಾದ ಗುವಾಂಗ್ಕ್ಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಶುಕ್ರವಾರ ಕಾಲೇಜಿಗೆ ಹೋಗುವ ವೇಳೆ ಹೋಟೆಲ್‍ವೊಂದರಿಂದ ನೂಡಲ್ಸ್ ನ್ನು ಪಾರ್ಸೆಲ್ ತೆಗೆದುಕೊಂಡು ಹೋಗಿದ್ದಾಳೆ. ಕ್ಯಾಂಪಸ್‍ಗೆ ಹೋದ್ಮೇಲೆ ನೂಡಲ್ಸ್ ನಲ್ಲಿ ಸತ್ತ ಹಾವಿನ ಮರಿಯೊಂದು ಕಂಡಿದೆ. ನಾನು ಮೊದಲು ಪಾರ್ಸಲ್ ಓಪನ್ ಮಾಡಿ ಒಂದೆರೆಡು ತುತ್ತುಗಳನ್ನು ತಿಂದ ನಂತರ ನೂಡಲ್ಸ್ ನ ಹಸಿರು ತರಕಾರಿಯ ಮಧ್ಯ ಸತ್ತ ಹಾವಿನ ಮರಿ ಪತ್ತೆಯಾಯ್ತು ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ ಎಂದು ಚೀನಾದ ಪತ್ರಿಕೆ ಹೇಳಿದೆ.
Advertisement
Advertisement
ನೂಡಲ್ಸ್ ನಲ್ಲಿರುವ ಹಾವಿನ ಫೋಟೋವನ್ನು ತೆಗೆದ ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾಳೆ. ಫೋಟೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಸ್ಥಳೀಯ ಆರೋಗ್ಯ ಅಧಿಕಾರಿಗಳು ಹೋಟೆಲ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement
ಅಧಿಕಾರಿಗಳು ಹೋಟೆಲನ್ನು ಮುಚ್ಚಿಸಿ, ಮಾಲೀಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹೋಟೆಲ್‍ನಲ್ಲಿ ಅನಾರೋಗ್ಯಕರ ಆಹಾರವನ್ನು ಪೂರೈಕೆ ಮಾಡಲಾಗ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement