LatestMain PostNational

ದೆಹಲಿಯಲ್ಲಿ ಸೀಟ್ ಬೆಲ್ಟ್ ಕಡ್ಡಾಯ – ಧರಿಸದಿದ್ದರೆ 1,000ರೂ. ದಂಡ

ನವದೆಹಲಿ: ಕಾರಿನಲ್ಲಿ ಪ್ರಯಾಣಿಸುವಾಗ ಹಿಂಬದಿ ಸೀಟ್ ಬೆಲ್ಟ್ ಧರಿಸದೇ ಇರುವ ಜನರಿಗೆ ದೆಹಲಿ ಟ್ರಾಫಿಕ್ ಪೊಲೀಸರು‌ (Delhi Traffic Police) 1,000 ರೂಪಾಯಿ ದಂಡವನ್ನು(Penalty) ವಿಧಿಸಿದ್ದಾರೆ.

ಸೆಪ್ಟೆಂಬರ್ 4 ರಂದು ನಡೆದ ಭೀಕರ ಕಾರು ಅಪಘಾತದಲ್ಲಿ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ(Cyrus Mistry) ಅವರು ನಿಧನರಾದರು. ಈ ಘಟನೆಯ ಬಳಿಕ ಸೀಟ್ ಬೆಲ್ಟ್ (Seat Belts) ಧರಿಸದೇ ಹಿಂದಿನ ಸೀಟಿನಲ್ಲಿ ಕುಳಿತದ್ದರಿಂದ ಸೈರಸ್ ಮಿಸ್ತ್ರಿ ಅವರು ಸಾವನ್ನಪ್ಪಿದ್ದಾರೆ ಎಂದೂ ಕೂಡ ಹೇಳಲಾಗಿತ್ತು. ಇದರ ಬೆನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ವಿಚಾರಣೆ ವೇಳೆ ‘ಬೆತ್ತಲೆ ಫೋಟೋ’ ನಂದಲ್ಲ ಎಂದ ಬಾಲಿವುಡ್ ನಟ ರಣವೀರ್ ಸಿಂಗ್

ದೆಹಲಿ ಟ್ರಾಫಿಕ್ ಪೊಲೀಸರು ಹಿಂದಿನ ಸೀಟ್‍ಗಳಲ್ಲಿ ಸೀಟ್ ಬೆಲ್ಟ್ ಧರಿಸುವ ನಿಯಮ ಕಡ್ಡಾಯ ಎಂದು ಜನರಿಗೆ ತಿಳಿಸಲು ಅಭಿಯಾನವನ್ನು ಪ್ರಾರಂಭಿಸಿದರು. ಒಂದು ವೇಳೆ ಸೀಟ್ ಬೆಲ್ಟ್ ಧರಿಸದೇ ಹೋದರೆ 1,000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆನಡಾದಲ್ಲಿ ಹಿಂದೂ ದೇವಾಲಯ ವಿರೂಪ – ಭಾರತ ವಿರೋಧಿ ಬರಹದ ಮೂಲಕ ದ್ವೇಷ ಬಿತ್ತನೆ

ಬುಧವಾರ ಪೊಲೀಸರು ಕೇಂದ್ರ ದೆಹಲಿಯ ಕನ್ನಾಟ್ ಪ್ಲೇಸ್(Connaught Place) ಬಳಿಯ ಬರಾಖಂಬಾ ರಸ್ತೆಯಲ್ಲಿ(Barakhamba Road) ತಪಾಸಣೆ ನಡೆಸಿದರು. ಈ ವೇಳೆ ಅನೇಕ ಟ್ರಾಫಿಕ್ ಪೊಲೀಸರು ತಮ್ಮ ಕೈಯಲ್ಲಿ “ಹಿಂಬದಿ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ ಎಂಬ ಫಲಕವನ್ನು ಹಿಡಿದುಕೊಂಡಿದ್ದರು. ನಗರದಾದ್ಯಂತ 10 ದಿನಗಳ ಕಾಲ ಟ್ರಾಫಿಕ್ ಪೊಲೀಸರು ಈ ಅಭಿಯಾನವನ್ನು ನಡೆಸಲಿದ್ದು, ಹಿಂಬದಿ ಸೀಟ್ ಬೆಲ್ಟ್ ಧರಿಸುವುದರ ಬಗೆಗಿನ ಮಹತ್ವವನ್ನು ಜನರಿಗೆ ತಿಳಿಸಲಿದ್ದಾರೆ.

2019ರಿಂದಲೇ ಪ್ರಯಾಣಿಕರು ಹಿಂಬದಿ ಸೀಟ್ ಬೆಲ್ಟ್‌ಗಳನ್ನು ಧರಿಸುವುದು ಕಡ್ಡಾಯವಾಗಿದ್ದರೂ, ಸಾಕಷ್ಟು ಮಂದಿ ಈ ನಿಯಮವನ್ನು ಪಾಲಿಸುತ್ತಿಲ್ಲ.

Live Tv

Leave a Reply

Your email address will not be published.

Back to top button