ಬೆಂಗಳೂರು: ತನ್ನ ದೇಹವನ್ನು ಹಿಂದೂ ದೇವರ ಪ್ರತಿಮೆಯಂತೆ ಜೋಡಿಸಿ ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹರಿಯಬಿಟ್ಟಿದ್ದಕ್ಕೆ ಸುದೀಪ್ ಬೇಸರ ವ್ಯಕ್ತಪಡಿಸಿ ಈ ರೀತಿ ಚಿತ್ರವನ್ನು ಪ್ರಕಟಿಸದಂತೆ ಮನವಿ ಮಾಡಿದ್ದಾರೆ.
ಹಿಂದೂ ದೇವರ ರೀತಿಯಲ್ಲಿ ಸುದೀಪ್ ಅವರ ಫೋಟೋವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಈ ಚಿತ್ರವನ್ನು ನೋಡಿದ ಜನ ಸುದೀಪ್ ಅಭಿಮಾನಿಗಳ ವರ್ತನೆಗೆ ಕಿಡಿಕಾರಿದ್ದರು.
Advertisement
ಇದನ್ನೂ ಓದಿ: ಸರಸ್ವತಿ ಎಲ್ಲರಿಗೂ ಒಲಿದು ಬರಲ್ಲ, ಸುಹಾನ ಅಂದ್ರೆ ಹೆಮ್ಮೆ: ಸುದೀಪ್
Advertisement
ಈ ವಿಚಾರವನ್ನು ಮಂಜು ಎಂಬವರು ಟ್ಟಿಟ್ಟರ್‍ನಲ್ಲಿ ಸುದೀಪ್ ಅವರ ಗಮನಕ್ಕೆ ತಂದು, ನಿಮ್ಮ ಅಭಿಮಾನಿಗಳು ಫೇಸ್‍ಬುಕ್‍ನಲ್ಲಿ ಈ ಚಿತ್ರವನ್ನು ಹರಿಯಬಿಟ್ಟಿದ್ದಾರೆ. ಈ ಚಿತ್ರದಿಂದಾಗಿ ನಿಮ್ಮ ಗೌರವಕ್ಕೆ ಧಕ್ಕೆಯಾಗುತ್ತದೆ. ಮತ್ತೊಮ್ಮೆ ಈ ರೀತಿ ಚಿತ್ರಗಳು ಮರುಕಳಿಸಬಾರದು ಎಂದು ಕೇಳಿಕೊಂಡಿದ್ದರು.
Advertisement
ಇದನ್ನೂ ಓದಿ: ದರ್ಶನ್, ಸುದೀಪ್ ಜಗಳದಲ್ಲಿ ಅಂಬರೀಶ್ ಮಧ್ಯಸ್ಥಿಕೆ? ಸುಮಲತಾ ಹೀಗೆ ಹೇಳಿದ್ರು
Advertisement
ಈ ಟ್ವೀಟ್‍ಗೆ ಸುದೀಪ್ ಅವರು ಟ್ಟಿಟ್ಟರ್‍ನಲ್ಲಿ ಪ್ರತಿಕ್ರಿಯಿಸಿ, ಇಂತಹ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಧಾರ್ಮಿಕ ಭಾವನೆಗೆ ಧಕ್ಕೆತರಬೇಡಿ. ಯಾರು ಇದನ್ನು ಸೃಷ್ಟಿ ಮಾಡಿದ್ದಾರೋ ಅವರಲ್ಲಿ ನಾನು ಮನವಿ ಮಾಡುತ್ತಿದ್ದು, ಮತ್ತೊಮ್ಮೆ ಈ ರೀತಿಯಲ್ಲಿ ಚಿತ್ರವನ್ನು ಪ್ರಕಟಿಸಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ.
ಈ ಟ್ವೀಟ್ ಗೆ ಸುದೀಪ್ ಅಭಿಮಾನಿಗಳು ಪ್ರತಿಕ್ರಿಯಿಸಿ, ಸುದೀಪ್ ಅವರ ನಿಜವಾದ ಅಭಿಮಾನಿಗಳು ಈ ರೀತಿಯ ಫೋಟೋ ಪ್ರಕಟಿಸಲು ಸಾಧ್ಯವಿಲ್ಲ. ಸುದೀಪ್ ದ್ವೇಷಿಗಳು ಈ ರೀತಿ ಫೋಟೋ ವನ್ನು ಪ್ರಕಟಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ ಟ್ವೀಟ್‍ಗೆ ಕೊನೆಗೂ ಮೌನ ಮುರಿದ ಸುದೀಪ್
@KicchaSudeep – this is Wat ur fans r creating and uploading on fb, pls make sure this will not repeat,it may damage ur image . Regards pic.twitter.com/nD2dgy5lga
— Alpine Manju (@Alpineholidays) March 17, 2017
It's a request to who ever did this,,,not to repeat it again… I understand ur love ,,,but I'm a mere imperfect mortal n lemme remain one . https://t.co/DVeXOC7CGF
— Kichcha Sudeepa (@KicchaSudeep) March 17, 2017