ಬೆಂಗಳೂರು: ನಗರದ ಸುತ್ತಮುತ್ತ ಚಿರತೆ ಭೀತಿ ಶುರುವಾಗಿದ್ದು, ಯಾರೂ ಕೂಡ ರಾತ್ರಿ ಹೊತ್ತು ಒಂಟಿಯಾಗಿ ಹೊರಗಡೆ ಓಡಾಡಬೇಡಿ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ (Sanjay Gubbi) ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ (Bengaluru) ತುರಹಳ್ಳಿ ಫಾರೆಸ್ಟ್‌ನ ಸುತ್ತಾಮುತ್ತಾ ಸೇರಿದಂತೆ ನಾಲ್ಕು ಕಡೆ ಚಿರತೆ ಪತ್ತೆಯಾಗಿರೋದು ಬೆಂಗಳೂರಿನಲ್ಲಿ ಭೀತಿ ಹೆಚ್ಚಿಸಿದೆ. ಆದರೆ ಚಿರತೆಯ ಓಡಾಟದ ಬಗ್ಗೆ ಗಾಬರಿಯಾಗೋದು, ಭಯಗೊಳ್ಳೋದು ಬೇಡ. ಮುನ್ನೆಚ್ಚರಿಕಾ ಕ್ರಮ ಇರಲಿ ಎನ್ನುವ ಸಂದೇಶವನ್ನು ವನ್ಯಜೀವಿ ಸಂರಕ್ಷಕರು ನೀಡುತ್ತಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ಮೂರು ನಾಲ್ಕು ಮಾತ್ರವಲ್ಲ ಸುಮಾರು ಹೊರವಲಯದಲ್ಲಿ 30 ರಿಂದ 35 ಚಿರತೆ ಇದೆ, ಬನ್ನೇರುಘಟ್ಟದಲ್ಲಿ ಸುಮಾರು 40-45 ಚಿರತೆಗಳ ಓಡಾಟವೂ ಇದೆ. ಇದರ ಜೊತೆಗೆ ಚಿರತೆಯ ಬಗ್ಗೆ ಯಾವ ರೀತಿ ಎಚ್ಚರಿಕೆಯಿಂದಿರಬೇಕು ಎನ್ನುವುದರ ಬಗ್ಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಚಿರತೆ ದಾಳಿಗೆ ಎರಡನೇ ಬಲಿ – ಕಂಡಲ್ಲಿ ಗುಂಡು ಹಾರಿಸಲು ಅರಣ್ಯ ಇಲಾಖೆ ಸೂಚನೆ
Advertisement
Advertisement
ಬೆಂಗಳೂರು ಹೊರವಲಯ ಇತ್ತೀಚೆಗೆ ಚಿರತೆಗಳ ಅವಾಸ ಸ್ಥಾನವಾಗಿದೆ. ಚಿರತೆ ಬಗ್ಗೆ ಆತಂಕ ಬೇಡ, ಮುನ್ನೆಚ್ಚರಿಕೆ ಇರಲಿ. ಚಿರತೆ ಓಡಾಟದ ಭಾಗ ಹಾಗೂ ಕಾಡಿನ ಆಸುಪಾಸುಗಳಲ್ಲಿ ಅನಗತ್ಯ ಓಡಾಟ ಬೇಡ. ಒಂಟಿಯಾಗಿ ರಾತ್ರಿ ಹೊತ್ತು ಓಡಾಟವನ್ನು ನಿಲ್ಲಿಸಿದರೆ ಒಳ್ಳೆಯದು ಎಂದು ತಿಳಿಸಿದ್ದಾರೆ.
Advertisement
ಸಾಧ್ಯವಾದಷ್ಟು ಗುಂಪಿನಲ್ಲಿ ಹೋಗಬೇಕು. ಮಾತಿನ ಗಟ್ಟಿ ಧ್ವನಿಗೆ ಕೆಲವೊಮ್ಮೆ ಚಿರತೆ ಮನುಷ್ಯರ ಹತ್ತಿರ ಸುಳಿಯಲ್ಲ. ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿ ಮನೆಯ ಒಳಗಡೆ ಚಿರತೆ ಭಯವಿರುವ ಕಡೆ ಇಡೋದು ಉತ್ತಮ. ಮಕ್ಕಳು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್ – ಛತ್ತಿಸ್‌ಗಢ ಸಿಎಂ ಉಪಕಾರ್ಯದರ್ಶಿ ಅರೆಸ್ಟ್
Advertisement
ಕುಳಿತುಕೊಂಡಿರೋವಾಗ ಅಥವಾ ಮಲಗಿರುವ ಸಂದರ್ಭದಲ್ಲಿ ಚಿರತೆ ದಾಳಿ ಹೆಚ್ಚು. ಹೀಗಾಗಿ ಮನೆಯ ಜಗಲಿಯಲ್ಲಿ ರಾತ್ರಿ ಮಲಗುವುದು ಅಥವಾ ಶೌಚಕ್ಕಾಗಿ ಹೊರಗೆ ಹೋಗೋದನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.