– ಮದುವೆ ಆದಾಕೆಗೆ ಯುವಕರ ಜೊತೆ ಸಂಪರ್ಕ
ಬೆಂಗಳೂರು: ಅವರಿಬ್ಬರೂ ಅತ್ತೆ ಮಾವನ ಮಕ್ಕಳು ಇಬ್ಬರು ಏಳು ವರ್ಷದಿಂದ ಪ್ರೀತಿಸಿ ಮದುವೆನೂ ಆಯ್ತು. ಆದರೆ ಮದುವೆ ಆದ ಮೂರೇ ದಿನದಲ್ಲಿ ಆ ಯುವತಿ ಇನ್ನೊಬ್ಬನ ಜೊತೆ ಎಸ್ಕೇಪ್ ಆಗಿದ್ದು, ಎಸ್ಕೇಪ್ ಆದ ಯುವತಿಯ, ಯುವಕರ ಜೊತೆಗಿನ ಚೆಲ್ಲಾಟ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಮೂಲತಃ ಬೆಂಗಳೂರಿನ ದೊಡ್ಡಕಲ್ಲಸಂದ್ರದ ನಿವಾಸಿಗಳಾದ ಮಂಜುನಾಥ್ ಮತ್ತು ಮನುಜಾ ಕಳೆದ ಏಳು ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಮನೆಯವರ ವಿರೋಧದ ನಡುವೆ ಎರಡು ಬಾರಿ ಮದುವೆ ಆಗಿದ್ದರು. ಮದುವೆಯಾದ ಬಳಿಕ ಮನುಜಳನ್ನು ಪೋಷಕರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡುವುದಾಗಿ ನಂಬಿಸಿ ಕರೆದೊಯ್ದಿದ್ದರು. ಆದರೆ ನಾಲ್ಕೈದು ವರ್ಷ ಕಳೆದರೂ ಮದುವೆ ಮಾಡಿಕೊಟ್ಟಿರಲಿಲ್ಲ.
Advertisement
Advertisement
ಕಳೆದೊಂದು ವಾರದ ಹಿಂದೆ ಉಟ್ಟ ಬಟ್ಟೆಯಲ್ಲಿ ಮಂಜುನಾಥ್ ಕುಟುಂಬದ ಜೊತೆ ಮನುಜ ಬಂದಿದ್ದಳು. ಹಿರಿಯರ ಸಮ್ಮುಖದಲ್ಲಿ ಜನವರಿ 26ರಂದು ಮದುವೆ ಮಾಡಲಾಗಿತ್ತು. ಇತ್ತ ಮನುಜಾ ಪೋಷಕರಿಂದ ತಲಘಟ್ಟಪುರ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಾಗಿದ್ದು, ಈ ವೇಳೆ ತಲಘಟ್ಟಪುರ ಠಾಣೆಯಲ್ಲಿ ತಾನು ಒಪ್ಪಿ ಮದುವೆಯಾಗಿರುವುದಾಗಿ ಹೇಳಿದ್ದಳು. ಇದಾದ ಬಳಿಕ ಮತ್ತೆ ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದರು. ಮೂರು ದಿನದ ಬಳಿಕ ಮಂಜುನಾಥ್ ವಾಪಸ್ ಮನೆಗೆ ಬಂದಾಗ ಮನುಜ ಕಾಣೆಯಾಗಿದ್ದಾಳೆ. ಇದನ್ನೂ ಓದಿ: ಬೆಂಗಳೂರಿನ ಕುಂಬಾರಪೇಟೆಯಲ್ಲಿ ಡಬಲ್ ಮರ್ಡರ್ – ಕೊಲೆ ಮಾಡಿ ತಾನೇ ಶರಣಾದ ಭೂಪ
Advertisement
Advertisement
ಇತ್ತ ಮದುವೆ ಆಗಿದ್ದ ಮಾವ ಮಂಜುನಾಥ್, ಮನುಜಾ ಮನೆಗೆ ಬರದೆ ಇದ್ದಾಗ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪತಿ ದೂರು ನೀಡಿದ ಕೆಲವೇ ಹೊತ್ತಿನಲ್ಲಿ ಪೊಲೀಸ್ ಠಾಣೆಗೆ ನಿತಿನ್ ಎಂಬ ಯುವಕನ ಜೊತೆ ಮನುಜ ದಿಢೀರ್ ಅಂತ ಹಾಜರಾಗಿದ್ದಾಳೆ. ಪೆÇಲೀಸ್ ಠಾಣೆಯಲ್ಲಿ ಏಕಾಏಕಿ ಹೈಡ್ರಾಮಾ ಶುರು ಮಾಡಿದ್ದು ನನಗೆ ಇಷ್ಟ ಇರಲಿಲ್ಲ ಹೆದರಿಸಿ ಬೆದರಿಸಿ ಮದುವೆ ಮಾಡಿದ್ದಾರೆ, ನಾನು ಪೋಷಕರ ಜೊತೆ ಹೋಗುತ್ತೇನೆ ಎಂದು ಕಿರಿಕ್ ಶುರು ಮಾಡಿದ್ದಾಳೆ. ಇತ್ತ ನನಗೆ ಯುವತಿಯಿಂದ ಅನ್ಯಾಯ ಆಗಿದೆ ಎಂದು ಮದುವೆಯಾಗಿದ್ದ ಮಂಜುನಾಥ್, ಪೊಲೀಸ್ ಠಾಣೆ ಎದುರು ಗೋಳಾಟ ನಡೆಸಿದ್ದು ಲವ್ ಹೆಸರಿನಲ್ಲಿ ನನಗೆ ವಂಚನೆ ಮಾಡಿದ್ದಾಳೆ ಎಂದು ಕಣ್ಣೀರು ಹಾಕಿದ್ದಾನೆ.
ಒಟ್ಟಿನಲ್ಲಿ ಮನಸ್ಸಿನಿಂದ ಪ್ರೀತಿಸಿ ಮದುವೆಯಾಗಿದ್ದ ಮಂಜುನಾಥ್ ನನಗೆ ನ್ಯಾಯ ಬೇಕು ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮೂರ್ನಾಲ್ಕು ಮಂದಿ ಯುವಕರ ಜೊತೆ ಲವ್ ನಾಟಕ ಹಾಗೂ ಯುವಕರ ಜೊತೆ ರೀಲ್ಸ್ ಮಾಡಿ ಫೋಟೋ ತೆಗೆಸಿಕೊಂಡಿರೋ ಯುವತಿ ವಿಷಯ ತಿಳಿದು ಮಂಜುನಾಥ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಪೊಲೀಸ್ ಠಾಣೆ ಮುಂಭಾಗದಲ್ಲಿ ಹೈಡ್ರಾಮವೇ ನಡೆದು ಹೋಯಿತು.