ನವದೆಹಲಿ: ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಅವರ ಹೇಳಿಕೆಯಿಂದ ಯಾವುದೇ ಬೇಸರವಾಗಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.
ನಿವೃತ್ತಿ ಬಗ್ಗೆ ಯೋಚಿಸಿ ಅಂತ ರಾಹುಲ್ ದ್ರಾವಿಡ್ ಅವರು ಸಲಹೆ ನೀಡಿದ್ದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವೃದ್ಧಿಮಾನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಹುಲ್ ದ್ರಾವಿಡ್, ಅನುಭವಿ ಕೀಪರ್ ವೃದ್ಧಿಮಾನ್ ಸಹಾ ಅವರು ತಮ್ಮ ಭವಿಷ್ಯದ ಕುರಿತು ನಡೆಸಿದ ಅತ್ಯಂತ ರಹಸ್ಯ ಸಂಭಾಷಣೆಯನ್ನು ಬಹಿರಂಗಪಡಿಸಿದ್ದಾರೆ. ಅವರ ಹೇಳಿಕೆಯಿಂದ ನನಗೆ ನೋವಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎರಡು ವರ್ಷಗಳ ಬಳಿಕ ಮಗನನ್ನು ಭೇಟಿಯಾದ ಶಿಖರ್ ಧವನ್
Advertisement
Advertisement
ನನಗೆ ಯಾವುದೇ ನೋವಾಗಿಲ್ಲ. ವೃದ್ಧಿ ಮತ್ತು ಅವರ ಸಾಧನೆಗಳು, ಬಾರತೀಯ ಕ್ರಿಕೆಟ್‌ಗೆ ಅವರ ಕೊಡುಗೆ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಪ್ರಾಮಾಣಿಕ ಮತ್ತು ಸ್ಪಷ್ಟತೆಗೆ ಅರ್ಹರು ಎಂದು ನಾನು ಭಾವಿಸುತ್ತೇನೆ ಎಂದು ದ್ರಾವಿಡ್ ಮಾತನಾಡಿದ್ದಾರೆ.
Advertisement
ಆಟಗಾರರೊಂದಿಗೆ ನಾನು ನಿರಂತರವಾಗಿ ಸಂಭಾಷಣೆ ನಡೆಸುತ್ತಿರುತ್ತೇನೆ. ಆಟಗಾರರ ಬಗ್ಗೆ ನಾನು ಹೇಳುವ ಎಲ್ಲವನ್ನೂ ಯಾವಾಗಲೂ ಅವರು ಒಪ್ಪುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಆಟಗಾರರೊಂದಿಗಿನ ಸಂಭಾಷಣೆಯು ಕೆಲವೊಮ್ಮೆ ಸರಿಯಲ್ಲ ಎನಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ನೇಮಕ
Advertisement
ಆಟಗಾರರ ಜೊತೆ ಸಂಭಾಷಣೆಗಳನ್ನು ನಡೆಸದೇ, ಅವರ ಭವಿಷ್ಯದ ಬಗ್ಗೆ ತಿಳಿಸದೇ ಇರುವುದು ಸುಲಭ. ಆದರೆ ನಾನು ಹಾಗೆ ಮಾಡಲ್ಲ. ಸಂಭಾಷಣೆಯಿಂದ ಹಿಂದೆ ಸರಿಯುವುದಕ್ಕಿಂತ ಕಟುವಾದ ಸತ್ಯವನ್ನು ಹೇಳುವುದು ಉತ್ತಮ ಎಂದು ದ್ರಾವಿಡ್ ತಿಳಿಸಿದ್ದಾರೆ.
ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಆಡಲಿರುವ ಭಾರತ ತಂಡದಲ್ಲಿ ತಮ್ಮನ್ನು ಆಯ್ಕೆ ಮಾಡದೇ ಇರುವ ಕುರಿತು ವೃದ್ಧಿಮಾನ್ ಸಹಾ ಅಸಮಾಧಾನ ವ್ಯಕ್ತಪಡಿಸಿದ್ದರು. ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು, ರಾಜೀನಾಮೆ ನೀಡುವ ಬಗ್ಗೆ ಯೋಚಿಸಿ ಎಂದಿದ್ದಾರೆಂದು ಸಹಾ ದೂರಿದ್ದರು.