ಟೀಮ್ ಇಂಡಿಯಾ ಕ್ರಿಕೆಟಿಗ (Cricket) ಶುಭಮನ್ ಗಿಲ್ (Shubman Gill) ಹೊಡೆದ ದ್ವಿಶತಕಕ್ಕಿಂತ ಆತನ ಡೇಟಿಂಗ್ (Dating) ವಿಚಾರವೇ ಭಾರತದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಗಿಲ್ ಜೊತೆ ದಿನಕ್ಕೊಂದು ಹುಡುಗಿಯ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಶುಭಮನ್ ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದಾನೋ ಗೊತ್ತಿಲ್ಲ. ಆದರೆ, ಹೊಸ ಹೊಸ ಹುಡುಗಿಯರ ಹೆಸರು ಮಾತ್ರ ಕೇಳಿ ಬರುತ್ತಲೇ ಇದೆ.
ಮೊನ್ನೆಯಷ್ಟೇ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಜೊತೆ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೆ ಪೂರಕ ಎನ್ನುವಂತೆ ಈ ಇಬ್ಬರೂ ಸುತ್ತಾಡುವ ಫೋಟೋಗಳು ಕಂಡು ಬಂದವು. ರೆಸ್ಟೋರೆಂಟ್ ಸೇರಿದಂತೆ ನಾನಾ ಕಡೆ ಸಾರಾ ಮತ್ತು ಗಿಲ್ ಒಟ್ಟಿಗೆ ಇದ್ದ ಫೋಟೋಗಳು ವೈರಲ್ ಆದವು. ಹಾಗಾಗಿ ಇಬ್ಬರೂ ಡೇಟಿಂಗ್ ನಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಇದನ್ನೂ ಓದಿ: ಉದ್ಯಮಿ ವಿಶಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ `ವಜ್ರಕಾಯ’ ನಟಿ ಶುಭ್ರ ಅಯ್ಯಪ್ಪ
ಇದೀಗ ಗಿಲ್ ಜೊತೆ ಮತ್ತೋರ್ವ ಹುಡುಗಿಯ ಹೆಸರು ಕೇಳಿ ಬಂದಿದೆ. ಪಂಜಾಬಿ ನಟಿ ಸೋನಮ್ ಬಾಜ್ವಾ (Sonam Bajwa) ಜೊತೆ ಕ್ರಿಕೆಟಿಗ ಗಿಲ್ ಲವ್ವಿಡವ್ವಿ ಶುರು ಮಾಡಿದ್ದಾರಂತೆ. ಅದಕ್ಕೆ ಸಾಕ್ಷಿ ಎನ್ನುವಂತೆ ಇವರಿಬ್ಬರ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಗುತ್ತಿವೆ. ಇಬ್ಬರೂ ಒಟ್ಟಿಗೆ ಇರುವ ಫೋಟೋಗಳು ಆಚೆ ಬರುತ್ತಿದ್ದಂತೆಯೇ ಅದಕ್ಕೆ ಸೋನಮ್ ಪ್ರತಿಕ್ರಿಯೆಯನ್ನೂ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಗಿಲ್ ಜೊತೆ ನಾನು ಡೇಟಿಂಗ್ ಮಾಡುತ್ತಿಲ್ಲ. ಸುಖಾಸುಮ್ಮನೆ ರೂಮರ್ ಹಬ್ಬಿಸಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k