ಬಿಎಸ್‌ಎಫ್‌ ಯೋಧನಿಗೆ 20 ದಿನವೂ ಇನ್ನಿಲ್ಲದ ಟಾರ್ಚರ್‌ ನೀಡಿದ್ದ ಪಾಕ್‌

Public TV
1 Min Read
BSF Army Purnam kumar

ನವದೆಹಲಿ: ಪಾಕಿಸ್ತಾನದ (Pakistan) ನೀಚ ಕೃತ್ಯಗಳು ಒಂದೊದೇ ಬಯಲಾಗುತ್ತಿದೆ. ಪಾಕಿಸ್ತಾನ ಗಡಿಭಾಗಕ್ಕೆ ಆಕಸ್ಮಿಕವಾಗಿ ಪ್ರವೇಶಿಸಿದ್ದ ಬಿಎಸ್‌ಎಫ್ ಯೋಧ (BSF Soldier) ಪೂರ್ಣಂ ಕುಮಾರ್ ಶಾ (Purnam Kumar Shaw) ಅವರಿಗೆ ಇನ್ನಿಲ್ಲದ ಟಾರ್ಚರ್ ನೀಡಿದೆ.

ಪತ್ನಿ ರಜನಿ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಅವರಿಗೆ ಸರಿಯಾಗಿ ನಿದ್ರೆ ಮಾಡಲು ಅವಕಾಶ ನೀಡಿರಲಿಲ್ಲ. ಗಡಿಯಲ್ಲಿ ಬಿಎಸ್‌ಎಫ್ ಸಿಬ್ಬಂದಿ ಮತ್ತು ಅಧಿಕಾರಿಗಳ ನಿಯೋಜನೆಯ ಬಗ್ಗೆ ಬಹುತೇಕ ಪ್ರತಿ ರಾತ್ರಿಯೂ ಪ್ರಶ್ನಿಸುತ್ತಿದ್ದರು ಎಂದು ಹೇಳಿದರು.

ದೈಹಿಕವಾಗಿ ಹಿಂಸಿಸದಿದ್ದರೂ ಸೈನಿಕನಂತೆ ನೋಡದೇ ಗೂಢಚಾರರಂತೆ ನಡೆಸಿಕೊಂಡಿಸಿದ್ದಾರೆ. ನಿಯಮಿತವಾಗಿ ಆಹಾರ ಕೊಟ್ಟಿದ್ದರೂ ಹಲ್ಲುಜ್ಜಲು ಅವಕಾಶ ನೀಡಿರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಜಮ್ಮು & ಕಾಶ್ಮೀರದಲ್ಲಿ 2 ಎನ್‌ಕೌಂಟರ್‌ – ಭಾರತೀಯ ಸೇನೆ 6 ಉಗ್ರರನ್ನು ಹೊಡೆದುರುಳಿಸಿದ್ದು ಹೇಗೆ?

BSF Jawan Purnam Kumar Shaw

ಪತಿಯನ್ನು ಮೂರು ಬೇರೆ ಬೇರೆ ಸ್ಥಳಗಳಲ್ಲಿ ಇಟ್ಟಿದ್ದರು. ಒಂದು ಬಾರಿ ಅವರನ್ನು ವಾಯುನೆಲೆಯ ಬಳಿ ಇರಿಸಿದ್ದರು. ಯಾಕೆಂದರೆ ಆಗಾಗ ವಿಮಾನ ಹಾರುವ ಶಬ್ಧ ಕೇಳುತ್ತಿತ್ತು ಎಂದು ವಿವರಿಸಿದರು.

ಈಗ ಸುರಕ್ಷಿತವಾಗಿ ಭಾರತಕ್ಕೆ ಮರಳಿರುವ ಶಾ ವೈದ್ಯಕೀಯ ತಪಾಸಣೆ ಮತ್ತು ವಿಚಾರಣೆಗೆ ಒಳಗಾಗಿದ್ದಾರೆ. ಅವರ ಸೇವೆಯ ಬದ್ಧತೆಯ ಬಗ್ಗೆ ಅವರ ಪತ್ನಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. 17 ವರ್ಷಗಳಿಂದ ಅವರು ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ ಮತ್ತು ಅವರು ಅದನ್ನು ಮುಂದುವರಿಸುತ್ತಾರೆ. ನಮಗೆ ಅವರ ಬಗ್ಗೆ ಹೆಮ್ಮೆಯಿದೆ. ರಜೆ ನೀಡದಿದ್ದರೆ ಶೀಘ್ರದಲ್ಲೇ ಪಠಾಣ್‌ಕೋಟ್‌ನಲ್ಲಿ ಅವರನ್ನು ಭೇಟಿಯಾಗುವ ಭರವಸೆ ಇದೆ ಎಂದು ರಜನಿ ಹೇಳಿದರು.  ಇದನ್ನೂ ಓದಿ: `ಆಪರೇಷನ್ ಸಿಂಧೂರ’ ಇನ್ನೂ ಮುಗಿದಿಲ್ಲ, ಇದು ಟ್ರೇಲರ್ ಅಷ್ಟೇ – ರಾಜನಾಥ್ ಸಿಂಗ್

ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terror Attack) ನಡೆದ ಭಯೋತ್ಪಾದಕ ದಾಳಿಯ ಒಂದು ದಿನದ ನಂತರ, ಏಪ್ರಿಲ್ 23 ರಂದು ಪಂಜಾಬ್‌ನ ಫಿರೋಜ್‌ಪುರ ವಲಯದಲ್ಲಿ ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ಪಾಕ್‌ ಗಡಿಯನ್ನು ದಾಟಿದ್ದರು. ಭಾರತ-ಪಾಕಿಸ್ತಾನದ ಮಧ್ಯೆ ಕದನ ವಿರಾಮ ಜಾರಿಯಾದ ನಂತರ 21 ದಿನಗಳ ನಂತರ ಪೂರ್ಣಂ ಕುಮಾರ್ ಶಾ ಅವರನ್ನು ಅಟ್ಟಾರಿ-ವಾಘಾ ಗಡಿಯ ಮೂಲಕ ಪಾಕಿಸ್ತಾನ ಹಸ್ತಾಂತರ ಮಾಡಿತ್ತು.

Share This Article