ಓಸ್ಲೋ: ಕುರಾನ್ ಅನ್ನು ಸುಟ್ಟುಹಾಕಿದ ನಿಮಿಷಗಳ ನಂತರ ತೀವ್ರಗಾಮಿ ನಾರ್ವೇಜಿಯನ್ ಇಸ್ಲಾಮಿಕ್ ವಿರೋಧಿ ಗುಂಪಿನ ನಾಯಕನ ಕಾರಿಗೆ ಅಪಘಾತ ಮಾಡಿ ಜಖಂಗೊಳಿಸಿರುವ ಘಟನೆ ನಾರ್ವೆಯ ಓಸ್ಲೋದ ಹೊರವಲಯದಲ್ಲಿ ನಡೆದಿದೆ.
“ಸ್ಟಾಪ್ ದಿ ಇಸ್ಲಾಮೈಸೇಷನ್ ಆಫ್ ನಾರ್ವೆ” (ನಾರ್ವೆ ಇಸ್ಲಾಮೀಕರಣ ನಿಲ್ಲಿಸಿ) ಹೆಸರಿನ ಗುಂಪಿನ ನಾಯಕ ಲಾರ್ಸ್ ಥಾರ್ಸನ್ ಅವರ ಎಸ್‌ಯುವಿ ಅಪಘಾತ ಮಾಡಿದ್ದ ಆರೋಪದ ಮೇಲೆ ಕಾರಿನ ಚಾಲಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ನಾರ್ವೇಜಿಯನ್ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದುಬೈಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ
ಎಸ್‌ಯುವಿಯಲ್ಲಿದ್ದ ಐವರು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಒಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಓಸ್ಲೋ ಉಪನಗರ ಮಾರ್ಟೆನ್ಸ್ರುಡ್‌ಗೆ ಇಸ್ಲಾಮಿಕ್ ವಿರೋಧಿ ಗುಂಪಿನ ಥಾರ್ಸನ್ ತನ್ನ ಕಾರ್ಯಕರ್ತರೊಂದಿಗೆ ಹೋಗಿದ್ದಾರೆ. ಅಲ್ಲಿ ನೆರೆದಿದ್ದ ಜನಸಂದಣಿ ಮಧ್ಯೆ ಕುರಾನ್ ಅನ್ನು ಸುಟ್ಟು ಹಾಕಿದ್ದಾರೆ. ಈ ವೇಳೆ ಬೆಂಕಿ ಆರಿಸಲು ಮುಂದಾದ ಜನರನ್ನೂ ತಡೆದಿದ್ದಾರೆ. ಆಗ ಜನಸ್ತೋಮ, ಥಾರ್ಸನ್ ವಿರುದ್ಧ ಕಿಡಿಕಾರಿತು. ಇದನ್ನೂ ಓದಿ: ಮದುವೆಯಾಗಿ ನವವಧುವನ್ನು ಸೇನಾ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದ ತಾಲಿಬಾನ್ ಕಮಾಂಡರ್
ಇದಾದ ಬಳಿಕ ಥಾರ್ಸನ್ ಮತ್ತು ಕಾರ್ಯಕರ್ತರು ಕಾರಿನಲ್ಲಿ ಹೋಗುವಾಗ ಮತ್ತೊಂದು ವಾಹನ ಬಂದು ಅಪಘಾತ ಮಾಡಿದೆ. ಅಲ್ಲದೇ ಥಾರ್ಸನ್ ಇದ್ದ ಕಾರನ್ನು ಜಖಂಗೊಳಿಸಿದೆ. ಈ ಘಟನೆಯ ವೀಡಿಯೋ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ.
ನಾರ್ವೆಯ ದೇಶೀಯ ಗುಪ್ತಚರ ಈ ದಾಳಿಯನ್ನು ‘ಇಸ್ಲಾಮಿ ಭಯೋತ್ಪಾದನೆಯ ಕೃತ್ಯ’ ಎಂದು ಬಣ್ಣಿಸಿದೆ. ಸ್ಕ್ಯಾಂಡಿನೇವಿಯನ್ ಇಸ್ಲಾಂ ವಿರೋಧಿ ಕಾರ್ಯಕರ್ತರು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಮುಸ್ಲಿಂ ಜನಸಂಖ್ಯೆ ಇರುವ ಭಾಗಗಳಿಗೆ ಹೋಗಿ ಕುರಾನ್ ಸುಡುವ ಕೆಲಸ ಮಾಡುತ್ತಿದ್ದಾರೆ.