InternationalLatestLeading NewsMain Post

ಮದುವೆಯಾಗಿ ನವವಧುವನ್ನು ಸೇನಾ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದ ತಾಲಿಬಾನ್‌ ಕಮಾಂಡರ್‌

Advertisements

ಕಾಬೂಲ್: ತಾಲಿಬಾನ್ ಕಮಾಂಡರ್ ತನ್ನ ನವವಿವಾಹಿತ ಪತ್ನಿಯನ್ನು ಮನೆಗೆ ಕರೆದೊಯ್ಯಲು ಮಿಲಿಟರಿ ಹೆಲಿಕಾಪ್ಟರ್ ಅನ್ನು ಬಳಸಿದ್ದಾರೆ. ಮದುವೆ ಸಮಾರಂಭ ಮುಗಿದ ನಂತರ ಪತ್ನಿಯನ್ನು ಲೋಗರ್‌ನಿಂದ ಪೂರ್ವ ಅಫ್ಘಾನಿಸ್ತಾನದ ಖೋಸ್ಟ್ ಪ್ರಾಂತ್ಯಕ್ಕೆ ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದಿದ್ದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನವವಧುವನ್ನು ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದ ವ್ಯಕ್ತಿ, ತಾಲಿಬಾನ್‌ನ ಹಕ್ಕಾನಿ ಶಾಖೆಯ ಕಮಾಂಡರ್ ಎಂದು ಗುರುತಿಸಲಾಗಿದೆ. ಕಮಾಂಡರ್‌ ಖೋಸ್ಟ್‌ನಲ್ಲಿ ನಿವಾಸಿಯಾಗಿದ್ದು, ನವವಧು ಮನೆ ಲೋಗರ್‌ನ ಬಾರ್ಕಿ ಬರಾಕ್ ಜಿಲ್ಲೆಯಲ್ಲಿದೆ. ಇದನ್ನೂ ಓದಿ: ಚಿಕಾಗೋ ಪರೇಡ್‌ ವೇಳೆ ಶೂಟೌಟ್‌, ದಿಕ್ಕಾಪಾಲಾಗಿ ಓಡಿದ ಜನ – 6 ಬಲಿ, 24 ಮಂದಿಗೆ ಗಾಯ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಕಮಾಂಡರ್ ತನ್ನ ನವವಧು ಮನೆಯ ಬಳಿ ಇಳಿಯುತ್ತಿರುವುದನ್ನು ದೃಶ್ಯ ಸೆರೆಯಾಗಿದೆ. 1,200,000 ಅಫ್ಘಾನಿಸ್‌ ಹಣವನ್ನು (1.07 ಕೋಟಿ ರೂ.) ವಧುವಿನ ತಂದೆ ವರದಕ್ಷಿಣೆಯಾಗಿ ಕಮಾಂಡರ್‌ಗೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಕಮಾಂಡರ್ ಅನ್ನು ಸಮರ್ಥಿಸಿಕೊಂಡ ತಾಲಿಬಾನ್‌ನ ಉಪ ವಕ್ತಾರ ಕ್ವಾರಿ ಯೂಸುಫ್ ಅಹ್ಮದಿ, ಆರೋಪಗಳು ಸುಳ್ಳು. ಶತ್ರುಗಳು ಇಲ್ಲಸಲ್ಲದ ಪ್ರಚಾರ ಮಾಡುತ್ತಿದ್ದಾರೆ. ತಾಲಿಬಾನಿ ಕಮಾಂಡರ್‌ನಿಂದ ಮಿಲಿಟರಿ ಹೆಲಿಕಾಪ್ಟರ್‌ನ್ನು ವೈಯಕ್ತಿಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ತಳ್ಳಿಹಾಕಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಳಿಗೆ ಅವಮಾನ – ಸಾಕ್ಷ್ಯಚಿತ್ರ ಪ್ರದರ್ಶನ ಮಾಡದಂತೆ ಸೂಚನೆ

Live Tv

Leave a Reply

Your email address will not be published.

Back to top button