ಕಾರವಾರ: ಇತ್ತೀಚಿನ ದಿನಗಳಲ್ಲಿ ಹಿಂದೂ ಸಂಸ್ಕೃತಿಯನ್ನು (Hindu Culture) ವಿದೇಶಿಗರು ಅನುಸರಿಸುವುದು ಹೆಚ್ಚಾಗುತ್ತಿದ್ದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ (Gokarna) ವಿದೇಶಿ ಯುವ ಜೋಡಿಗಳು ಗೋಧೋಳಿ ಸಮಯದಲ್ಲಿ ಹಸಮಣೆ ಏರಿದ್ದಾರೆ.
ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ನಾರ್ವೆ ದೇಶದ ಸ್ಯಾಮ್, ಅರ್ತಿಮಿ ಗೋಧೂಳಿ ಮುಹೂರ್ತದಲ್ಲಿ ಭಾರತೀಯ ಪದ್ದತಿಯಂತೆ ವಿವಾಹವಾದರು. ಇದನ್ನೂ ಓದಿ: ನ. 28ರಂದು ಉಡುಪಿ ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ಮೋದಿ ರೋಡ್ ಶೋ
ರೆಸಾರ್ಟ್ ಮಾಲೀಕ ಮುರಳೀಧರ ಕಾಮತ್ ಮದುವೆಯ ಏರ್ಪಾಡನ್ನು ಮಾಡಿದ್ದು ಸ್ಥಳೀಯ ಪುರೋಹಿತರ ಮಂತ್ರ ಪಠಣದೊಂದಿಗೆ ವಧು, ವರರು ಹಾರ ಬದಲಿಸಿಕೊಂಡು, ಧಾರ್ಮಿಕ ಪದ್ಧತಿ ಪೂರೈಸಿದರು.
ವರನ ಕಡೆಯ ಯಜಮಾನನಾಗಿ ರೆಸಾರ್ಟ್ ಮಾಲೀಕ ಮುರಳೀಧರ ಕಾಮತ್ ಮುಂದಾಳತ್ವ ವಹಿಸಿದ್ದರು. ವಧುವಿನ ತಂದೆ ದಾರೆ ಎರೆದು ಹಿಂದೂ ಪದ್ದತಿಯಂತೆ ಮದುವೆ ಶಾಸ್ತ್ರ ಪೂರೈಸುವ ಮೂಲಕ ಹಿಂದೂ ಸಂಪ್ರದಾಯದಲ್ಲಿ ಜೋಡಿಗಳು ವಿವಾಹವಾಗಿ ಸಂಭ್ರಮಿಸಿದರು.

