Connect with us

ನೀರಿಗಾಗಿ ಜಗಳ- ಮನೆ ಮಾಲೀಕನಿಂದ ಈಶಾನ್ಯ ಮೂಲದ ವಿದ್ಯಾರ್ಥಿ ಮೇಲೆ ಹಲ್ಲೆ

ನೀರಿಗಾಗಿ ಜಗಳ- ಮನೆ ಮಾಲೀಕನಿಂದ ಈಶಾನ್ಯ ಮೂಲದ ವಿದ್ಯಾರ್ಥಿ ಮೇಲೆ ಹಲ್ಲೆ

ಬೆಂಗಳೂರು: ನೀರಿನ ವಿಚಾರಕ್ಕೆ ಜಗಳ ನಡೆದು ಮನೆ ಮಾಲೀಕರೊಬ್ಬರು ಈಶಾನ್ಯ ಮೂಲದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರೋ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಘಟನೆ ಮಾರ್ಚ್ 9ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಹಿಗಿಯೋ ಘಂಟಿ ಅಂತಾ ಗುರುತಿಸಲಾಗಿದ್ದು, ಸದ್ಯ ಆಸ್ಪತ್ರೆ ಸೇರಿದ್ದಾರೆ.

ಹೇಮಂತ್ ಕುಮಾರ್ ಎಂಬವರ ಮಾಲೀಕತ್ವದ ಮನೆಯಲ್ಲಿ ಹಿಗಿಯೋ ಘಂಟಿ ವಾಸವಾಗಿದ್ದರು. ಅನವಶ್ಯಕವಾಗಿ ಮನೆ ನೀರನ್ನು ಪೋಲು ಮಾಡುತ್ತಿರುವ ಕುರಿತು ಮನೆ ಮಾಲೀಕ ಹಾಗೂ ಹಿಗಿಯೋ ಘಂಟಿ ಮಧ್ಯೆ ಜಗಳ ಪ್ರಾರಂಭವಾಗಿತ್ತು. ಬಳಿಕ ಮಾತಿಗೆ ಮಾತು ಬೆಳೆದು ಮಾಲೀಕ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೇ ಹಿಗಿಯೋ ಘಂಟಿಯಿಂದ ತನ್ನ ಬೂಟನ್ನು ನಾಲಿಗೆಯಿಂದ ನೆಕ್ಕಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಘಟನೆ ಸಂಬಂಧ ಹಿಗಿಯೋ ಘಂಟಿ ತಂದೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ನೀರಿಗಾಗಿ ನಡೀತು ಕೊಲೆ

Advertisement
Advertisement