ಪ್ಯೊಂಗ್ಯಾಂಗ್: ಅಮೆರಿಕ (America) ಹಾಗೂ ದಕ್ಷಿಣ ಕೊರಿಯಾಗೆ (South Korea) ಎಚ್ಚರಿಕೆ ನೀಡುವ ಸಲುವಾಗಿ ಉತ್ತರ ಕೊರಿಯಾ (North Korea) ಖಂಡಾಂತರ ಕ್ಷಿಪಣಿ ಪರೀಕ್ಷೆಯನ್ನು (Missile Test) ನಡೆಸಿರುವುದಾಗಿ ತಿಳಿಸಿದೆ. ಕ್ಷಿಪಣಿ ಜಪಾನ್ (Japan) ಬಳಿಯಲ್ಲಿ ಪತನಗೊಂಡಿದ್ದು, ತೀವ್ರ ಆತಂಕ ಸೃಷ್ಟಿಸಿದೆ.
ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಶನಿವಾರ ಹಠಾತ್ತನೆ ಕ್ಷಿಪಣಿ ಪರೀಕ್ಷೆ ನಡೆಸಲು ಆದೇಶಿಸಿರುವುದಾಗಿ ವರದಿಯಾಗಿದೆ. ಉತ್ತರ ಕೊರಿಯಾ ಮೊದಲ ಬಾರಿಗೆ ಪರೀಕ್ಷಿಸಿರುವ ಹ್ವಾಸಾಂಗ್-15 ಕ್ಷಿಪಣಿ ಪ್ಯೊಂಗ್ಯಾಂಗ್ ವಿಮಾನ ನಿಲ್ದಾಣದಿಂದ ಹಾರಿಸಲಾಗಿದೆ. ಇದನ್ನೂ ಓದಿ: RCB ನಾಯಕಿಯಾಗಿ ಸ್ಮೃತಿ ಮಂದಾನ ಆಯ್ಕೆ – ಕೊಹ್ಲಿ ವಿಶೇಷ ಸಂದೇಶ ಏನು?
Advertisement
Advertisement
ಶನಿವಾರ ಈ ಕ್ಷಿಪಣಿ ಜಪಾನಿನ ಬಳಿ ಪತನವಾಗಿದೆ. ಕ್ಷಿಪಣಿ ಗುರಿಯನ್ನು ಹೊಡೆಯುವುದಕ್ಕೂ ಮೊದಲು 66 ನಿಮಿಷ ವಾಯುಪ್ರದೇಶದಲ್ಲಿ ಸಂಚರಿಸಿದೆ. ಇದು ಅಮೆರಿಕದ ರಾಜಧಾನಿ ವಾಷಿಂಗ್ಟನ್ ಅನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ.
Advertisement
ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಜಂಟಿಯಾಗಿ ಯುದ್ಧಭ್ಯಾಸಗಳನ್ನು ನಡೆಸಲು ಮುಂದಾಗಿರುವುದರಿಂದ ಉತ್ತರ ಕೊರಿಯಾ ಇದನ್ನು ವಿರೋಧಿಸಲು ಕ್ಷಿಪಣಿ ಪರೀಕ್ಷೆಯನ್ನು ನಡೆಸಿದೆ ಎನ್ನಲಾಗಿದೆ. ಕಳೆದ ವಾರ ಉತ್ತರ ಕೊರಿಯಾ ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿತ್ತು. ಇದೀಗ ಕ್ಷಿಪಣಿ ಪರೀಕ್ಷೆಯನ್ನು ಉತ್ತರ ಕೊರಿಯಾದ ನಾಯಕತ್ವ ಶ್ಲಾಘಿಸಿಕೊಂಡಿದೆ. ಇದು ಮಾರಣಾಂತಿಕ ಪರಮಾಣು ಪ್ರತಿದಾಳಿಯ ಸಾಮರ್ಥ್ಯಕ್ಕೆ ನಿಜವಾದ ಪುರಾವೆಯಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಭಿನ್ನಮತ ಸ್ಫೋಟ – ಬಿಜೆಪಿಗೆ ಮಾಜಿ ಶಾಸಕ ಕಿರಣ್ ಕುಮಾರ್ ಗುಡ್‌ಬೈ
Advertisement
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k