ಬೆಂಗಳೂರು: ಗುತ್ತಿಗೆದಾರರು 40-50% ಕಮಿಷನ್ ಕೊಡಲು ಸಾಧ್ಯವೇ ಇಲ್ಲ, ಜೊತೆಗೆ ಕೆಂಪಣ್ಣ ಗುತ್ತಿಗೆದಾರರೇ ಅಲ್ಲ ಎಂದು ಉತ್ತರ ಕರ್ನಾಟಕ ಗುತ್ತಿಗೆದಾರರ ಸಂಘ ತಿಳಿಸಿದೆ.
ಈ ಬಗ್ಗೆ ಉತ್ತರ ಕರ್ನಾಟಕ ಸಿವಿಲ್ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಸುಭಾಷ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಂಪಣ್ಣ ಆರೋಪ ನಿರಾಧಾರವಾಗಿದೆ. ಅವರಿಗೆ ವಯಸ್ಸಾಗಿದೆ. ಅಷ್ಟೇ ಅಲ್ಲದೇ ಅವರು ಗುತ್ತಿಗೆದಾರರೇ ಅಲ್ಲ. ಲಕ್ಷಾಂತರ ಜನ ಗುತ್ತಿಗೆದಾರರು ಇದ್ದಾರೆ. ಅಷ್ಟೇ ಅಲ್ಲದೇ ಗುತ್ತಿಗೆದಾರರಿಗೂ ಬೇರೆ ಬೇರೆ ಸಮಸ್ಯೆಗಳು ಹೆಚ್ಚಾಗಿದೆ. ಆದರೆ ಯಾವ ಗುತ್ತಿಗೆದಾರರಿಗೂ 40- 50% ಕಮಿಷನ್ ಕೊಟ್ಟು ಕೆಲಸ ಮಾಡೋಕೆ ಸಾಧ್ಯವೇ ಇಲ್ಲ. ಈ ವಿಷಯದಲ್ಲಿ ರಾಜಕೀಯ ಮಾಡಲು ಹೋಗಬಾರದು ಎಂದು ಹೇಳಿದರು.
Advertisement
Advertisement
ಕೆಂಪಣ್ಣ ಅವರು ಈ ಫೀಲ್ಡ್‌ನಲ್ಲಿ ಇಲ್ಲ. ಹಾಗಾಗಿ ಅವರಿಗೆ ಇದರ ಬಗ್ಗೆ ಜ್ಞಾನವೇ ಇಲ್ಲ. ಕೆಲಸ ಮಾಡಿದವನಿಗೆ ಗೊತ್ತಿರಬೇಕು ಎಂದ ಅವರು, 40-50% ಕಮಿಷನ್ ಆರೋಪ ಮಾಡಿದರೆ ಅಂತಹ ಗುತ್ತಿಗೆದಾರನ ವಿರುದ್ಧ ತನಿಖೆ ಮಾಡಿ. ಯಾಕೆಂದರೆ ಆ ವ್ಯಕ್ತಿಯ ಕಾಮಗಾರಿ ಅದೆಷ್ಟು ಕಳಪೆಯಾಗಿ ಮಾಡಿದ್ದಾನೆ ಎನ್ನುವುದು ತಿಳಿಯುತ್ತೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಅಮೆರಿಕದ ವಿರುದ್ಧ ಬೆಂಗಳೂರಿನಲ್ಲಿ ಚೀನಾ ಕಾರ್ಯಕ್ರಮ – ಸಿದ್ದರಾಮಯ್ಯ, ಮಹಾದೇವಪ್ಪ ಮುಖ್ಯ ಅತಿಥಿ
Advertisement
Advertisement
ಈ ಕಮಿಷನ್ ಆರೋಪದಿಂದಾಗಿ ಗುತ್ತಿಗೆದಾರರಿಗೆ ಮಾನ, ಮಾರ್ಯಾದೆ ಇಲ್ಲ ಎನ್ನುವ ಥರ ಆಗಿದೆ. ಇವರ ಆರೋಪದಿಂದ ಜನ ನಮ್ಮನ್ನು ಬೋಗಸ್ ಕೆಲಸ ಮಾಡುತ್ತಾರೆ ಎಂದು ಅನುಮಾನದಿಂದ ನೋಡುತ್ತಾರೆ ಎಂದು ಬೇಸರಿಸಿದ ಅವರು, ಅಧಿಕಾರಿಗಳು ತಮಗೆ ಬೇಕಾದವರಿಗೆ ಗುತ್ತಿಗೆ ಕೊಡುವ ಕೆಲಸವನ್ನು ಮಾಡುತ್ತಾ ಇದ್ದಾರೆ. ಟೆಂಡರ್ ನಿಯಮ ಉಲ್ಲಂಘಿಸಿ ತಮಗೆ ಬೇಕಾದವರಿಗೆ ಕೊಡ್ತಾ ಇದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಕ್ಕಳ ಬುದ್ಧಿ ಕೆಡಿಸಿ ದೂರು: ಮುರುಘಾ ಮಠದ ವಕೀಲ ವಿಶ್ವನಾಥಯ್ಯ