200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ನಟಿ ನೋರಾ ಫತೇಹಿ ವಿಚಾರಣೆ

Advertisements

ಬಾಲಿವುಡ್ ನಟಿ ನೋರಾ ಫತೇಹಿಗೆ ಕಂಟಕವೊಂದು ಎದುರಾಗಿದೆ. 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಜಾಕ್ವೆಲಿನ್‌ ವಿಚಾರಣೆಯ ನಂತರ ಇದೀಗ ನೋರಾ ಫತೇಹಿ ಅವರನ್ನ  ಆರ್ಥಿಕ ಅಪರಾಧ ವಿಭಾಗ ವಿಚಾರಣೆಗೆ  ಒಳಪಡಿಸಿದ್ದಾರೆ.

Advertisements

ಸುಕೇಶ್ ಚಂದ್ರಶೇಖರ್ ಅವರ 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಇದೀಗ ಜಾಕ್ವೆಲಿನ್ ನಂತರ ನೋರಾ ಫತೇಹಿ ವಿಚಾರಣೆಗೆ ಕರೆಯಲಾಗಿದೆ. 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ನೋರಾ ಕೂಡ ಭಾಗಿಯಾಗಿರುವ ಬಗ್ಗೆಯೂ ಮತ್ತೆ ವಿಚಾರಣೆ ನಡೆಸುತ್ತಿದೆ.ಇದನ್ನೂ ಓದಿ:ಸುದೀಪ್ ಹುಟ್ಟು ಹಬ್ಬಕ್ಕೆ ಯಾಕೆ ಸಿನಿಮಾ ಘೋಷಣೆ ಇಲ್ಲ?: ಅನುಮಾನ ಮೂಡಿಸಿದ ಕಿಚ್ಚನ ನಡೆ

Advertisements

ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ (ಸೆ.3) ಶುಕ್ರವಾರ ಆರ್ಥಿಕ ಅಪರಾಧ ವಿಭಾಗ ನೋರಾ ಅವರನ್ನ 4 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಇನ್ನು ವಿಚಾರಣೆಯ ವೇಳೆ ತಮಗೆ ಐಫೋನ್‌ ಮತ್ತು ಬಿಎಂಡಬ್ಲ್ಯೂ ಕಾರನ್ನ ಉಡುಗೊರೆ  ಕೊಡುವುದಾಗಿ ಲೀನಾ ಹೇಳಿದ್ದರೆಂದು ವಿಚಾರಣೆಯ ವೇಳೆ ನೋರಾ ತಿಳಿಸಿದ್ದಾರೆ.

Live Tv

Advertisements
Exit mobile version