ಬಹುಕೋಟಿ ವಂಚನೆ ಆರೋಪದಲ್ಲಿ ಜೈಲುಪಾಲಾಗಿರುವ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ (Sukesh Chandrasekhar), ತಮ್ಮ ಇಬ್ಬರು ಗರ್ಲ್ ಫ್ರೆಂಡ್ ಬಗ್ಗೆ ಪತ್ರವೊಂದನ್ನು ಬರೆದಿದ್ದಾನೆ. ಆ ಪತ್ರವನ್ನು ಮಾಧ್ಯಮ ಪ್ರಕಟಣೆಗೆ ನೀಡಿದ್ದಾರೆ. ಸುಕೇಶ್ ಬರೆದ ಪತ್ರದಲ್ಲಿ ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಮತ್ತು ನೋರಾ (Nora) ಬಗೆಗಿನ ಸಂಬಂಧವನ್ನು ಹೇಳಿಕೊಂಡಿದ್ದಾನೆ. ಜಾಕ್ವೆಲಿನ್ ಕಂಡರೆ ನೋರಾಗೆ ಹೊಟ್ಟೆಉರಿ. ಹಾಗಾಗಿ ಜಾಕ್ವೆಲಿನ್ ಬಗ್ಗೆ ಸಲ್ಲದ ಆರೋಪಗಳನ್ನು ಆಕೆ ಮಾಡುತ್ತಿದ್ದಾಳೆ ಎಂದು ಹೇಳಿದ್ದಾನೆ.
Advertisement
ಮೂರು ದಿನಗಳ ಹಿಂದೆಯಷ್ಟೇ ಕೋರ್ಟ್ ಮೆಟ್ಟಿಲು ಏರಿದ್ದ ಜಾಕ್ವೆಲಿನ್, ಬಾಯ್ ಫ್ರೆಂಡ್ ಸುಕೇಶ್ ಬಗ್ಗೆ ಒಂದಷ್ಟು ಆರೋಪ ಮಾಡಿದ್ದಳು. ತನ್ನ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನ ಹಾಳಾಗಿದ್ದು ಸುಕೇಶ್ ನಿಂದ. ಅವನು ಮಹಾ ಮೋಸಗಾರ ಎಂದೂ ಮಾತನಾಡಿದ್ದರು. ಈತನ ಬಗ್ಗೆ ಎಲ್ಲವೂ ಗೊತ್ತಿದ್ದರೂ, ನೂರಾ ಅದೆಲ್ಲವನ್ನೂ ಬಚ್ಚಿಟ್ಟಿದ್ದಳು ಎಂದು ಆಕೆಯ ಮೇಲೂ ಹರಿಹಾಯ್ದಿದ್ದಳು. ಇದನ್ನೂ ಓದಿ: ಹುಟ್ಟುಹಬ್ಬದಂದು ಸಿಹಿಸುದ್ದಿ ಕೊಟ್ಟ ನಟ ನಿಖಿಲ್ ಕುಮಾರಸ್ವಾಮಿ
Advertisement
Advertisement
ಜಾಕ್ವೆಲಿನ್ ಮಾತನಾಡಿದ ಬೆನ್ನಲ್ಲೇ ಸುಕೇಶ್ ಪತ್ರವೊಂದನ್ನು ತಮ್ಮ ವಕೀಲರ ಮೂಲಕ ಬಿಡುಗಡೆ ಮಾಡಿಸಿದ್ದಾರೆ. ‘ಜಾಕ್ವೆಲಿನ್ ಜೊತೆ ನನ್ನ ಸ್ನೇಹ ಮುರಿಯಬೇಕು ಎಂದು ಹಲವಾರು ಬಾರಿ ನೋರಾ ಪ್ರಯತ್ನಿಸಿದಳು. ಜಾಕ್ವೆಲಿನ್ ಜೊತೆ ನಾನು ಇರುವುದು ಆಕೆಗೆ ಇಷ್ಟವಿರಲಿಲ್ಲ. ಜಾಕ್ವೆಲಿನ್ ಜೊತೆ ಹೋಗಲು ನೋರಾ ಬಿಡುತ್ತಿರಲಿಲ್ಲ. ನಾನು ಕಾಲ್ ರಿಸೀವ್ ಮಾಡದೇ ಇದ್ದರೆ ಪದೇ ಪದೇ ಕಾಲ್ ಮಾಡುತ್ತಿದ್ದಳು. ಜಾಕ್ವೆಲಿನ್ ಜೊತೆಗಿನ ಸ್ನೇಹವನ್ನು ಮುರಿದುಕೋ ಎಂದು ಹೇಳುತ್ತಿದ್ದಳು’ ಎಂದು ಪತ್ರದಲ್ಲಿ ಸುಕೇಶ್ ಬರೆದಿದ್ದಾನೆ.
Advertisement
ನೋರಾ ಏನೆಲ್ಲ ಇಷ್ಟ ಪಡುತ್ತಿದ್ದಳೋ ಅದೆಲ್ಲವನ್ನೂ ಕೊಟ್ಟಿರುವುದಾಗಿಯೂ ಪತ್ರದಲ್ಲಿ ಉಲ್ಲೇಖಿಸಿದ್ದಾನೆ ಸುಕೇಶ್. ಬ್ಯಾಗ್, ಒಡವೆ ಇತ್ಯಾದಿ ಫೋಟೋಗಳನ್ನು ನೋರಾ ಕಳುಹಿಸುತ್ತಿದ್ದಳು. ಆಕೆ ಏನೆಲ್ಲ ಕೇಳುತ್ತಿದ್ದಳೋ ಅದೆಲ್ಲವನ್ನೂ ನಾನು ಕಳುಹಿಸಿದ್ದೇನೆ. ಎರಡು ಕೋಟಿ ರೂಪಾಯಿಗೂ ಅಧಿಕ ವಸ್ತುಗಳನ್ನು ನೋರಾಗೆ ಕೊಟ್ಟಿದ್ದೇನೆ ಎಂದು ಅವನು ಪತ್ರದಲ್ಲಿ ಬರೆದಿದ್ದಾನೆ. ಈ ಪತ್ರ ಬರೆಯುವುದರ ಹಿಂದಿನ ಉದ್ದೇಶವನ್ನು ಸ್ಪಷ್ಟ ಪಡಿಸದೇ ಇದ್ದರೂ, ಪತ್ರವಂತೂ ಭಾರೀ ಸದ್ದು ಮಾಡುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k