ನವದೆಹಲಿ: ವಾಣಿಜ್ಯ ಬ್ಯಾಂಕ್‍ಗಳ ವಸೂಲಿಯಾಗದ ಸಾಲ(ಎನ್‍ಪಿಎ) ಮೊತ್ತದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. 1 ಲಕ್ಷ ಕೋಟಿ ರೂ. ಕಡಿಮೆಯಾಗಿದ್ದು 4 ಲಕ್ಷ ಕೋಟಿ ರೂ. ಹಣವನ್ನು ರಿಕವರಿ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಚೊಚ್ಚಲ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
Finance Minister Nirmala Sitharaman: Non-performing asset(NPAs) recovery of Rs 4 lakh crore over the last four years, NPAs down by Rs 1 lakh crore in the last one year pic.twitter.com/hSdNWVrJ8U
— ANI (@ANI) July 5, 2019
Advertisement
ಮುಖ್ಯಾಂಶಗಳು
* ಕಳೆದ ನಾಲ್ಕು ವರ್ಷಗಳಲ್ಲಿ ಬ್ಯಾಂಕಿಂಗ್ ಸುಧಾರಣೆಗೆ ಒತ್ತು.
* ಸಾರ್ವಜನಿಕ ವಲಯದ ಬ್ಯಾಂಕ್ ಗಳ ಸಂಖ್ಯೆ ಇಳಿಕೆ ಮಾಡಲಾಗಿದ್ದು, ಮನೆ ಬಾಗಿಲಿಗೆ ಬ್ಯಾಂಕ್ ವ್ಯವಸ್ಥೆ ಕಲ್ಪಿಸಲಾಗುವುದು. ಸಾರ್ವಜನಿಕ ಬ್ಯಾಂಕ್ ಗಳಿಗೆ 70 ಸಾವಿರ ಕೋಟಿ ಬಂಡವಾಳ
* ಹೆಚ್ಚು ಮೌಲ್ಯದ ಆಸ್ತಿಯ ಖರೀದಿಗೆ ಸರ್ಕಾರ 1 ಲಕ್ಷ ಕೋಟಿ ಹಣ ಮೀಸಲು, ಖರೀದಿದಾರನಿಗೆ ಸಾಲದ ಸೌಲಭ್ಯ ಮತ್ತು ಶೇ.10ರ ಬಡ್ಡಿ ದರದಲ್ಲಿ
* ಐಬಿಸಿ ಒಳಗೊಂಡಂತೆ ಕಳೆದ 4 ವರ್ಷಗಳಲ್ಲಿ 4 ಲಕ್ಷ ಕೋಟಿ ರೂ. ರಿಕಾರ್ಡ್ ರಿಕವರಿ ಮಾಡಿಕೊಳ್ಳಲಾಗಿದೆ.
* ಜನ್‍ಧನ್ ಬ್ಯಾಂಕ್ ಖಾತೆ ಹೊಂದಿರುವ ಮಹಿಳೆಯರಿಗೆ 5 ಸಾವಿರ ರೂ. ಸಾಲದ ಸೌಲಭ್ಯ
* ಬ್ಯಾಂಕ್ ಗಳ ಡೊಮೆಸ್ಟಿಕ್ ಕ್ರೆಡಿಟ್ ಗ್ರೋಥ್ ಶೇ.13.8 ರಷ್ಟು ಹೆಚ್ಚಳ
* ಸ್ವಸಹಾಯ ಸಂಘಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ಮುದ್ರಾ ಯೋಜನೆಯಡಿಯಲ್ಲಿ 1 ಲಕ್ಷ ರೂ. ಸಾಲದ ಸೌಲಭ್ಯ.
* ಮೂಲಭೂತ ಸೌಕರ್ಯಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ 100 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು.