ಭುವನೇಶ್ವರ: 18 ವರ್ಷದ ಹುಡುಗಿಯೊಬ್ಬಳು ಮೊಬೈಲ್ ಸ್ಫೋಟಕ್ಕೆ ಬಲಿಯಾಗಿರುವ ಘಟನೆ ಒಡಿಶಾದ ಕೆರಿಯಾಖಾನಿ ಜಿಲ್ಲೆಯಲ್ಲಿ ನಡೆದಿದೆ.
ಉಮಾ ಒರಾಮ್(18) ಮೃತ ದುರ್ದೈವಿ. ನೋಕಿಯಾ 5233 ಫೋನ್ ಸ್ಫೋಟಗೊಂಡು ಉಮಾ ಸಾವನ್ನಪ್ಪಿದ್ದಾಳೆ. ಉಮಾ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಬ್ಲಾಸ್ಟ್ ಆಗಿ ಈ ದುರ್ಘಟನೆ ನಡೆದಿದೆ.
Advertisement
ಉಮಾ ನೋಕಿಯಾ 5233 ಫೋನ್ ಚಾರ್ಜ್ ಹಾಕಿದ್ದಳು. ಈ ವೇಳೆ ಸಂಬಂಧಿಕರ ಕರೆ ಬಂದಿದೆ. ನಂತರ ಫೋನ್ ರಿಸೀವ್ ಮಾಡಿ ಮಾತನಾಡುತ್ತಿದ್ದಳು. ಈ ವೇಳೆ ಮೊಬೈಲ್ ತಕ್ಷಣ ಸ್ಫೋಟಗೊಂಡಿದೆ. ಫೋನ್ ಸ್ಫೋಟಗೊಂಡ ಪರಿಣಾಮ ಆಕೆಯ ಮುಖ ಹಾಗೂ ಕಾಲುಗಳು ಸುಟ್ಟು ಹೋಗಿದ್ದವು. ತಕ್ಷಣ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಉಮಾ ಮೃತಪಟ್ಟಿದ್ದಾಳೆ.
Advertisement
Advertisement
ಫೋನ್ ಚಾರ್ಜಿಂಗ್ ನಲ್ಲಿತ್ತು. ಈ ವೇಳೆ ತಂಗಿ ಫೋನ್ ನಲ್ಲಿ ಮಾತನಾಡಲು ಶುರುಮಾಡಿದ್ದಾಳೆ. ಕೆಲವೇ ಕ್ಷಣದಲ್ಲಿ ದೊಡ್ಡ ಶಬ್ದ ಬಂದಿದೆ. ಹೋಗಿ ನೋಡಿದರೆ ಸಹೋದರಿ ಕೆಳಗೆ ಬಿದ್ದಿದ್ದಳು ಎಂದು ಮೃತಳ ಸಹೋದರ ಹೇಳಿದ್ದಾನೆ. ಚಾರ್ಜಿಂಗ್ ಹಾಕಿದ್ದಾಗ ಫೋನಿನಲ್ಲಿ ಮಾತನಾಡುತ್ತಿದ್ದ ಪರಿಣಾಮ ಈ ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Advertisement
ನೋಕಿಯಾ 5233 ತುಂಬಾ ಹಳೆಯ ಫೋನ್ ಆಗಿದ್ದು, ಇದು ಸಿಂಬಿಯಾನ್ ಓಎಸ್ ನಲ್ಲಿ ಕಾರ್ಯನಿರ್ವಹಿಸುತಿತ್ತು. ಈಗ ನೋಕಿಯಾ ಕಂಪೆನಿ ಯಾವುದೇ ಫೋನ್ ತಯಾರಿಸುತ್ತಿಲ್ಲ. ಫಿನ್ಲೆಂಡ್ ಎಚ್‍ಎಂಡಿ ಗ್ಲೋಬಲ್ ಕಂಪನಿಯೂ 2017ರ ನಂತರ ನೋಕಿಯಾ ಹೆಸರಿನಲ್ಲಿ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ಎಚ್‍ಎಂಡಿ ಗ್ಲೋಬಲ್ ಕಂಪೆನಿಯ ವಕ್ತಾರರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ನೋಕಿಯಾ ಫೋನ್ ಬ್ಲಾಸ್ಟ್ ಆಗಿದೆ ಎನ್ನುವ ಸುದ್ದಿ ನಮ್ಮ ಗಮನಕ್ಕೆ ಬಂದಿದೆ. ಆದರೆ ಸ್ಫೋಟಗೊಂಡ ಫೋನ್ ಎಚ್‍ಎಂಡಿ ಗ್ಲೋಬಲ್ ತಯಾರಿಸಿದ ಫೋನ್ ಅಲ್ಲ. ಗ್ರಾಹಕರನ್ನು ಸೆಳೆಯಲು ನಾವು ಉತ್ತಮ ಗುಣಮಟ್ಟದ ಫೋನ್ ಗಳನ್ನು ಈಗ ತಯಾರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನೋಕಿಯಾ 5233 ಫೋನ್ ವಿಶ್ವದ ಮಾರುಕಟ್ಟೆಗೆ 2010ರ ಜನವರಿಯಲ್ಲಿ ಬಿಡುಗಡೆಯಾಗಿದ್ದು ಪ್ರಸ್ತುತ 2,999 ರೂ. ಬೆಲೆಗೆ ಆನ್ ಲೈನ್ ಶಾಪಿಂಗ್ ತಾಣದಲ್ಲಿ ಲಭ್ಯವಿದೆ.