ನವದೆಹಲಿ: ನೋಕಿಯಾ 3310 ಫೀಚರ್ ಫೋನ್ ಮತ್ತೊಮ್ಮೆ ಬಿಡುಗಡೆಯಾಗಿದೆ. ಆದರೆ ಈ ಫೋನ್ ಎಲ್ಲ ದೇಶಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ.
ಹೌದು. ಇವತ್ತು ಕಂಪೆನಿಯೊಂದು ತಯಾರಿಸಿದ ಫೋನ್ ವಿಶ್ವದೆಲ್ಲೆಡೆ ಕಾರ್ಯನಿರ್ವಹಿಸಬೇಕಾದರೆ ಅದು ಕನಿಷ್ಠ 850MHZ, 900MHz, 1800MHz ಮತ್ತು 1900MHz ಬ್ಯಾಂಡ್‍ಗೆ ಬೆಂಬಲ ನೀಡಬೇಕಾಗುತ್ತದೆ. ಆದರೆ ನೋಕಿಯಾ 3310 ಫೋನ್ 900 MHz ಮತ್ತು 1800 MHz ಬ್ಯಾಂಡ್‍ಗಳಿಗೆ ಮಾತ್ರ ಸಪೋರ್ಟ್ ಮಾಡುತ್ತದೆ. ಈ ಜಿಎಸ್ಎಂ ಸೆಲ್ಯೂಲರ್ ಫ್ರಿಕ್ವೆನ್ಸಿ ಹಲವು ದೇಶಗಳಲ್ಲಿ ಇಲ್ಲವೇ ಇಲ್ಲ.
Advertisement
ವಿಶೇಷವಾಗಿ ಅಮೆರಿಕ, ಕೆನಡಾ, ಆಸ್ಟ್ರೇಲಿಯಾದಲ್ಲಿ ಈ ಬ್ಯಾಂಡ್ ಇಲ್ಲದ ಕಾರಣ 3310 ಕಾರ್ಯನಿರ್ವಹಿಸುವುದಿಲ್ಲ. ಸಿಂಗಾಪುರದಲ್ಲಿ ಟೆಲಿಕಾಂ ಕಂಪೆನಿ ಸ್ಟಾರ್‍ಹಬ್, 2ಜಿ ಮಾತ್ರ ಹೊಂದಿರುವ ಫೋನ್‍ಗಳು ಕರೆ, ಎಸ್‍ಎಂಎಸ್ ಮತ್ತು ಡೇಟಾ ಸೇವೆವನ್ನು 2017ರ ಏಪ್ರಿಲ್ ನಂತರ ಬಳಸಲು ಸಾಧ್ಯವಿಲ್ಲ ಎಂದು ಹೇಳಿದೆ. ಹೀಗಾಗಿ ಇಲ್ಲೂ ಈ ಫೋನನ್ನು ಬಳಸಲು ಸಾಧ್ಯವಿಲ್ಲ.
Advertisement
ಎರಡನೇ ತ್ರೈಮಾಸಿಕದಲ್ಲಿ ಈ ಫೋನ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, ಮಧ್ಯಪ್ರಾಚ್ಯ, ಏಷ್ಯಾ ಪೆಸಿಫಿಕ್, ಯುರೋಪ್, ಆಫ್ರಿಕಾ ದೇಶಗಳನ್ನು ಗುರಿಯಾಗಿಸಿಕೊಂಡು ನೋಕಿಯಾ ಈ ಫೋನ್ ತಯಾರಿಸಿದೆ.
Advertisement
ಭಾರತದಲ್ಲಿ ರಿಲಯನ್ಸ್ ಜಿಯೋ ಸಿಮ್‍ಗೆ ನೋಕಿಯಾ 3310 ಸಪೋರ್ಟ್ ಮಾಡುವುದಿಲ್ಲ. ಎಲ್‍ಟಿಇ ಫೋನ್‍ಗಳಿಗೆ ಮಾತ್ರ ಜಿಯೋ ಸಿಮ್ ಸಪೋರ್ಟ್ ಮಾಡುತ್ತದೆ.
Advertisement
ಇದನ್ನೂ ಓದಿ: 17 ವರ್ಷಗಳ ಬಳಿಕ ಮತ್ತೆ ನೋಕಿಯಾ 3310 ಫೀಚರ್ ಫೋನ್ ರಿಲೀಸ್: ಬೆಲೆ ಎಷ್ಟು? ವಿಶೇಷತೆ ಏನು?