ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆ ವೇಳೆ ವ್ಯಕ್ತಿಯೊಬ್ಬರು ಮತದಾನ ಕೇಂದ್ರಕ್ಕೆ ಸಿಎಂ ಯೋಗಿ ಆದಿತ್ಯನಾಥ್ ವೇಷ ಧರಿಸಿ ಆಗಮಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಉತ್ತರ ಪ್ರದೇಶದಲ್ಲಿ ಅತ್ಯಂತ ತೀವ್ರ ಪೈಪೋಟಿಯ ನಡುವೆ ಗುರುವಾರ ಚುನಾವಣೆ ನಡೆಯಿತು. ಪಶ್ಚಿಮ ಉತ್ತರ ಪ್ರದೇಶದ ಶಾಮ್ಲಿ, ಮೀರತ್, ಹಾಪುರ್, ಮುಜಾಫರ್‍ನಗರ, ಬಾಗ್‍ಪತ್, ಗಾಜಿಯಾಬಾದ್, ಬುಲಂದ್‍ಶಹರ್, ಅಲಿಗಢ, ಆಗ್ರಾ, ಗೌತಮ್ ಬುದ್ಧ ನಗರ, ಮಥುರಾ ಸೇರಿದಂತೆ 11 ಜಿಲ್ಲೆಗಳಲ್ಲಿ ಮತ್ತು 58 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಿತು.
Advertisement
Advertisement
ಈ ವೇಳೆ ಮೋಯ್ಡಾ ಸೆಕ್ಟರ್ 11ರ ಮತಗಟ್ಟೆಗೆ ಬಂದ ಮತದಾರರೊಬ್ಬರು ಕೇಸರಿ ಬಟ್ಟೆಯನ್ನು ಧರಿಸಿ, ತಲೆಯನ್ನು ಬೋಳು ಮಾಡಿಸಿಕೊಂಡು ಆಗಮಿಸಿದ್ದರು. ಈ ರೀತಿ ವಿಶಿಷ್ಟವಾಗಿ ಬಂದ ವ್ಯಕ್ತಿ ಮತಗಟ್ಟೆಯಲ್ಲಿ ಎಲ್ಲರ ಗಮನ ಸೆಳೆದರು ಮತ್ತು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನ ಮುಗಿಬಿದ್ದರು. ಇದನ್ನೂ ಓದಿ: 702 ದಿನಗಳ ಜೀವನ್ಮರಣ ಹೋರಾಟ ಅಂತ್ಯ – ಮರದ ರೆಂಬೆಗೆ 7ರ ಬಾಲಕಿ ಬಲಿ
Advertisement
#WATCH | Raju Kohli, a youth dressed as CM Yogi Adityanath arrived at a polling booth in Sector 11 of Noida to cast his vote for #UttarPradeshElections2022 pic.twitter.com/3o5gTH6b3q
— ANI UP/Uttarakhand (@ANINewsUP) February 10, 2022
Advertisement
ಮತ್ತೊಂದೆಡೆ ಮುಜಾಫರ್ ನಗರದಲ್ಲಿ ವರನೊಬ್ಬ ತನ್ನ ಮದುವೆಯ ದಿನ ವರನ ಡ್ರೆಸ್‍ನಲ್ಲಿಯೇ ಕುಟುಂಬ ಸಮೇತ ಬಂದು ಮತದಾನ ಮಾಡುವ ಮೂಲಕ ತನ್ನ ಹಕ್ಕು ಚಲಾಯಿಸಿದನು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮೊದಲು ಮತದಾನ, ನಂತರ ಬೇರೆ ಕೆಲಸ ಎಂದು ಹೇಳಿದರು. ಇದನ್ನೂ ಓದಿ: ಹಿಂದೆ ನಡೆದ ಎಲ್ಲಾ ಘಟನೆಗಳನ್ನು ಮರೆಯೋಣ – ವಿದ್ಯಾರ್ಥಿಗಳಿಗೆ ರಘುಪತಿ ಭಟ್ ಕರೆ