ದೇಶದಲ್ಲೇ ಮೊದಲು – ಕೃತಕ ಹೃದಯ ಉಪಕರಣ ತೆರವು ಶಸ್ತ್ರಚಿಕಿತ್ಸೆ ಯಶಸ್ವಿ

Public TV
1 Min Read
noida fortis hospital doctors main

ನವದೆಹಲಿ: ಹೃದಯ ವೈಫಲ್ಯ ಹೊಂದಿದವರಿಗೆ ಅಳವಡಿಸುವ ಕೃತಕ ಹೃದಯ ಉಪಕರಣವನ್ನು ಯಶಸ್ವಿಯಾಗಿ ತೆಗೆದು ಹಾಕುವ ಶಸ್ತ್ರಚಿಕಿತ್ಸೆಯನ್ನು ಫೋರ್ಟಿಸ್ ಆಸ್ಪತ್ರೆ ನಡೆಸಿದ್ದು, ಇದು ದೇಶದಲ್ಲೇ ಮೊದಲ ಶಸ್ತ್ರಚಿಕಿತ್ಸೆಯಾಗಿದೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೋಯ್ಡ ಫೋರ್ಟಿಸ್ ಹಾರ್ಟ್ ಆಂಡ್ ವ್ಯಾಸ್ಕಲರ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಡಾ. ಅಜಯ್ ಕೌಲ್, ಭಾರತದಲ್ಲೇ ಇದೇ ಮೊದಲ ಬಾರಿಗೆ, ವ್ಯಕ್ತಿಗೆ ಅಳವಡಿಸಲಾಗಿದ್ದ ಕೃತಕ ಹೃದಯವನ್ನು ಸಂಪೂರ್ಣವಾಗಿ ತೆಗೆದುಹಾಕುವ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ. ವಿಶ್ವದಲ್ಲಿಯೇ ಇಂಥ ಶಸ್ತ್ರಚಿಕಿತ್ಸೆ ಅತ್ಯಂತ ವಿರಳವಾದದ್ದು ಎಂದು ಹೇಳಿದರು.

noida fortis hospital

ಇರಾನ್ ದೇಶದ 56 ವರ್ಷ ವಯಸ್ಸಿನ ಪುರುಷ ರೋಗಿಯು ಸಂಪೂರ್ಣ ಹೃದಯ ವೈಫಲ್ಯದ ಸಮಸ್ಯೆ ಅನುಭವಿಸುತ್ತಿದ್ದರು. ಇವರಿಗೆ ಹೃದಯ ಕಸಿ ಅನಿರ್ವಾಯವಾಗಿತ್ತು. ಆದರೆ, ಹೃದಯ ದಾನ ಮಾಡುವವರ ಕೊರತೆಯಿಂದ ಕೆಲ ತಿಂಗಳುಗಳ ಕಾಲ ಚಿಕಿತ್ಸೆಯಲ್ಲೇ ಮುಂದುವರೆದಿದ್ದರು. ಆದರೆ, ಪರಿಸ್ಥಿತಿ ಕೈ ಮೀರಿದ ಬಳಿಕ ಅವರಿಗೆ ಕೃತಕ ಹೃದಯ ಅಳವಡಿಕೆ ಮಾಡಲು ನಿರ್ಧರಿಸಿ “ಲೆಫ್ಟ್ ವೆಂಟ್ರಿಕುಲರ್ ಅಸಿಸ್ಟ್ ಡಿವೈಸ್” (ಎಲ್‌ವಿಎಡಿ) ರಕ್ತ ಪಂಪ್ ಮಾಡುವ ಡಿವೈಸ್‌ನನ್ನು ಅಳವಡಿಸಲಾಯಿತು. ಇದನ್ನು ಕೃತಕ ಹೃದಯ ಎನ್ನಲಾಗುತ್ತದೆ. ಇದನ್ನೂ ಓದಿ: ರಾಷ್ಟ್ರೀಯತೆಯ ಚಿಂತನೆಯನ್ನು ಬೆಳೆಸಿಕೊಂಡರೆ ಎಚ್‍ಡಿಕೆಗೆ ಹೊಟ್ಟೆ ಉರಿ ಯಾಕೆ: ಸೂಲಿಬೆಲೆ ಪ್ರಶ್ನೆ 

ಸಾಮಾನ್ಯವಾಗಿ ಕೃತಕ ಹೃದಯ ಅಳವಡಿಸಿದ ಬಳಿಕ ಅದು ಹಾಗೇ ಮುಂದುವರೆಯಬೇಕಾಗುತ್ತದೆ. ಇದರ ಸಹಾಯವಿಲ್ಲದೇ ಹೃದಯ ಪಂಪ್ ಆಗುವುದಿಲ್ಲ. ಆದರೆ, ಈ ಪ್ರಕರಣದಲ್ಲಿ, ರೋಗಿಯು ಕೃತಕ ಹೃದಯದ ಮೂಲಕ ಕಾಲ ಕ್ರಮೇಣ ಇವರ ಹೃದಯ ಗುಣವಾಗುತ್ತಾ ಬಂದಿತ್ತು. ಎಲ್‌ವಿಎಡಿ ಸಹಾಯವಿಲ್ಲದೇ ಹೃದಯ ಪಂಪ್ ಆಗುತ್ತಿತ್ತು. ಹೀಗಾಗಿ ಕೃತಕ ಹೃದಯವನ್ನು ಸಂಕೀರ್ಣ ಚಿಕಿತ್ಸೆ ಮೂಲಕ ತೆಗೆದು ಹಾಕುವುದು ವೈದ್ಯಕೀಯ ಕ್ಷೇತ್ರಕ್ಕೇ ದೊಡ್ಡ ಸವಾಲಾಗಿತ್ತು. ಆದರೆ, ನಮ್ಮ ತಂಡ, ಹೊಸ ಪ್ರಯೋಗದೊಂದಿಗೆ 12 ಗಂಟೆಗಳ ಶಸ್ತ್ರಚಿಕಿತ್ಸೆಯ ತರುವಾಯ ಯಶಸ್ವಿಯಾಗಿ ಕೃತಕ ಹೃದಯವನ್ನು ತೆಗೆದು ಹಾಕಲಾಗಿದೆ. ಈ ಶಸ್ತ್ರಚಿಕಿತ್ಸೆ ದೇಶದಲ್ಲೇ ಮೊದಲ ಬಾರಿಗೆ ನಡೆಸಲಾಗಿದೆ. ಈ ಶಸ್ತ್ರಚಿಕಿತ್ಸೆ ಬಳಿಕ ರೋಗಿಯು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇದು ನಮ್ಮ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡಕ್ಕೆ ಸಂದ ಜಯವಾಗಿದೆ ಎಂದು ವಿವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *