ಮಿನ್ಸ್ಕ್: ಬೆಲಾರಸ್‌ನ (Belarus) ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ ನೊಬೆಲ್ ಶಾಂತಿ ವಿಜೇತ (Nobel Peace Prize) ಅಲೆಸ್ ಬಿಲಿಯಾಟ್ಸ್ಕಿಗೆ (Ales Bialiatski) ಬೆಲರಸ್ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಬಿಲಿಯಾಟ್ಸ್ಕಿ ಅವರು 2020ರ ಚುನಾವಣೆಯ ಸಂದರ್ಭ ಬೃಹತ್ ಪ್ರತಿಭಟನೆ ನಡೆಸಿದ್ದು, ಅವರ ಇಬ್ಬರು ಸಹಚರರೊಂದಿಗೆ ಬಂಧಿಸಲಾಗಿತ್ತು. ಪ್ರತಿಭಟನೆ ಹಾಗೂ ಇತರ ಅಪರಾಧಗಳಿಗೆ ಹಣಕಾಸು ಒದಗಿಸಿರುವುದಕ್ಕೆ 60 ವರ್ಷದ ಬಿಲಿಯಾಟ್ಸ್ಕಿಗೆ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ನನ್ನ ಮತ್ತು ಮಕ್ಕಳನ್ನು ಬೀದಿಗೆ ತಳ್ಳಿದ: ನವಾಜುದ್ದೀನ್ ವಿರುದ್ಧ ಪತ್ನಿ ಕಣ್ಣೀರು
Advertisement
Advertisement
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಮೇಲಿನ ಕೆಲಸಕ್ಕಾಗಿ ಬಿಲಿಯಾಟ್ಸ್ಕಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ನೋಬೆಲ್ ಪ್ರಶಸ್ತಿ ಪಡೆಯುವ ಸಂದರ್ಭವೂ ಬಿಲಿಯಾಟ್ಸ್ಕಿ ಜೈಲಿನಲ್ಲೇ ಇದ್ದಿದ್ದು, ಅವರ ಪರವಾಗಿ ಪ್ರಶಸ್ತಿಯನ್ನು ಅವರ ಪತ್ನಿ ಸ್ವೀಕರಿಸಿದ್ದರು. ಇದನ್ನೂ ಓದಿ: ಮಾಡಾಳ್ ಲಂಚ ಕೇಸ್- ಟೆಂಡರ್‌ನಲ್ಲಿ ಗೋಲ್ಮಾಲ್ ಹೇಗೆ? ಎಷ್ಟು ದುಬಾರಿ ದರ?